6 ಲಕ್ಷಕ್ಕೂ ಅಧಿಕ Aadhaar ಕಾರ್ಡ್‌ಗಳು ರದ್ದಾಗಲು ಕಾರಣವೇನು? ನಿಮ್ಮ ಆಧಾರ್ ಸ್ಟೇಟಸ್ ಆನ್‌ಲೈನ್‌ನಲ್ಲಿ ಪರಿಶೀಲಿಸಿ

6 ಲಕ್ಷಕ್ಕೂ ಅಧಿಕ Aadhaar ಕಾರ್ಡ್‌ಗಳು ರದ್ದಾಗಲು ಕಾರಣವೇನು? ನಿಮ್ಮ ಆಧಾರ್ ಸ್ಟೇಟಸ್ ಆನ್‌ಲೈನ್‌ನಲ್ಲಿ ಪರಿಶೀಲಿಸಿ
HIGHLIGHTS

UIADI ಈಗ ಆಧಾರ್ (Aadhaar) ಪರಿಶೀಲನೆಗಾಗಿ ಫೇಸ್ ಅನ್ನು ಬಳಸಲು ಪ್ರಾರಂಭಿಸಿದೆ.

ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್ (Aadhaar) ಅನ್ನು ಅಸಲಿಯೇ ನಕಲಿಯೇ ಎಂಬುದನ್ನು ಪರಿಶೀಲಿಸಬವುದು.

ನಕಲು ಆಧಾರ್ (Aadhaar) ಜೊತೆಗೆ ಪಿಂಚಣಿ ಪರಿಶೀಲನೆಗೆ ಮುಖ ಗುರುತಿಸುವಿಕೆಯನ್ನೂ ಅಳವಡಿಸಲಾಗಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIADI) ಆಧಾರ್ ಕಾರ್ಡ್‌ನ ಯಾವುದೇ ದುರ್ಬಳಕೆಯನ್ನು ತಡೆಯಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ತಪ್ಪಾಗಿ ರಚಿಸಲಾದ ಆಧಾರ್ ಕಾರ್ಡ್ ಅನ್ನು ಹೊರಹಾಕಲು UIDAI ಸಹ ನಿರಂತರವಾಗಿ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಯುಐಡಿಎಐ ದೇಶದಲ್ಲಿ ಸುಮಾರು 6,00,000 ಕ್ಕೂ ಅಧಿಕ ನಕಲಿ ಆಧಾರ್ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ನಕಲಿ ಆಧಾರ್ ಅನ್ನು ತಪ್ಪಾಗಿ ಸೃಷ್ಟಿಸಿದ ಮೇಲೆ ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ. ಕಳೆದ ವಾರ ಲೋಕಸಭೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ಮಾಹಿತಿಯನ್ನು ನೀಡಿದ್ದರು. 

ಆಧಾರ್ ರದ್ದುಗೊಂಡಿದೆಯೇ?

ಯುಐಡಿಎಐ ನಕಲು ಆಧಾರ್ ಪರಿಶೀಲನೆ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತಿದೆ ಮತ್ತು ಈಗ ಮುಖವನ್ನು ಸಹ ಪರಿಶೀಲನೆ ಫೀಚರ್ ಆಗಿ ಅಳವಡಿಸಲಾಗಿದೆ. ಆಧಾರ್ ಕಾರ್ಡ್ ಈಗ ಅತ್ಯಂತ ಮಹತ್ವದ ದಾಖಲೆಯಾಗಿ ಮಾರ್ಪಟ್ಟಿದೆ. ನಿಮ್ಮ ಆಧಾರ್ ಕಾರ್ಡ್ ಅನ್ನು ಸುರಕ್ಷಿತವಾಗಿರಿಸುವುದು ಬಹಳ ಮುಖ್ಯ. ಅಲ್ಲದೆ ನಿಮ್ಮ ಆಧಾರ್ ಸಕ್ರಿಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ಪರಿಶೀಲಿಸಬೇಕು. ಇದಕ್ಕಾಗಿ ಕಾಲಕಾಲಕ್ಕೆ ಪರಿಶೀಲಿಸಬೇಕು. ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅನ್ನು ಪರಿಶೀಲಿಸುವುದು ತುಂಬಾ ಸುಲಭ.

ಅಸಲಿ ಆಧಾರ್ ಅನ್ನು ಪರಿಶೀಲಿಸುವುದು ಹೇಗೆ?

ಮೊದಲು UIDAI ವೆಬ್‌ಸೈಟ್ www.uidai.gov.in ಗೆ ಹೋಗಿ.

ವೆಬ್‌ಸೈಟ್‌ನಲ್ಲಿ 'ಆಧಾರ್ ಸೇವೆಗಳು' ಅಡಿಯಲ್ಲಿ 'ವೆರಿಫೈ ಆಧಾರ್ (ಆಧಾರ್) ಸಂಖ್ಯೆಯನ್ನು ಕ್ಲಿಕ್ ಮಾಡಿ.

ಹೊಸ ಪುಟದಲ್ಲಿ ನಿಮ್ಮ 12 ಅಂಕಿಗಳ ಆಧಾರ್ (AADHAAR) ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿ.

ಆಧಾರ್ ಸಂಖ್ಯೆ ಅಸಲಿ ಆಗಿದ್ದರೆ ವೆಬ್‌ಸೈಟ್ 'ಆಧಾರ್ ಪರಿಶೀಲನೆ ಪೂರ್ಣಗೊಂಡಿದೆ' ಎಂಬ ಸಂದೇಶವನ್ನು ತೋರಿಸುತ್ತದೆ. 

ಇತರ ವಿವರಗಳನ್ನು ನಿಮ್ಮ ವಯಸ್ಸು, ನಿಮ್ಮ ರಾಜ್ಯದ ಹೆಸರು ಮತ್ತು ನಿಮ್ಮ ಮೊಬೈಲ್ ಸಂಖ್ಯೆಯ ಕೊನೆಯ ಮೂರು ಅಂಕೆಗಳು ಇತ್ಯಾದಿ.

ಹಲವಾರು ಪ್ರಯತ್ನಗಳ ನಂತರವೂ ನೀವು ಆಧಾರ್ ಸಂಖ್ಯೆಯನ್ನು ಪರಿಶೀಲಿಸಲು ವಿಫಲರಾದರೆ (UIADI) ಪ್ರಾಧಿಕಾರ ನಿಮ್ಮ ಆಧಾರ್ ಅನ್ನು ರದ್ದಾಗೊಳಿಸಿದೆ ಎಂದರ್ಥ

ಆಧಾರ್ ಅಸಲಿಯಾಗಿದ್ದು ರದ್ದುಗೊಂಡಿದ್ದರೆ ಈ ಕೆಲಸ ಮಾಡಿ

ಮೇಲಿನ ಹಂತಗಳಲ್ಲಿ ನಿಮ್ಮ ಆಧಾರ್ ಅನ್ನು ಪರಿಶೀಲಿಸಲಾಗದಿದ್ದರೆ ಚಿಂತಿಸಬೇಡಿ. ನಿಮ್ಮ ಆಧಾರ್ ಜೊತೆಗೆ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಅಥವಾ ಪಾಸ್‌ಪೋರ್ಟ್‌ನಂತಹ ಒಂದು ದಾಖಲೆಯೊಂದಿಗೆ ನೀವು ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿ ನಿಮ್ಮ ಬಯೋಮೆಟ್ರಿಕ್‌ಗಳನ್ನು ಮರು ಪರಿಶೀಲಿಸಲಾಗುತ್ತದೆ. ಮತ್ತು UIDAI ಡೇಟಾಬೇಸ್‌ನಲ್ಲಿ ಮತ್ತೇ  ನಮೂದಿಸಲಾಗುತ್ತದೆ. ಇದಕ್ಕಾಗಿ ನಿಮಗೆ 25 ರೂಪಾಯಿಗಳ ಜೊತೆಗೆ ಶೇಕಡಾ 18% ದರದಲ್ಲಿ GST (ಒಟ್ಟಾರೆ ಸುಮಾರು 30 ರೂಗಳು) ನೀಡಬೇಕಾಗುತ್ತದೆ. ಮತ್ತು ನಿಮ್ಮ ಆಧಾರ್ ಅನ್ನು ಪುನಃ ನವೀಕರಿಸಲಾಗುತ್ತದೆ. ಮಾಹಿತಿ ಇಷ್ಟವಾಗಿದ್ದಾರೆ ತಿಳಿಯದವರೊಂದಿಗೆ ಶೇರ್ ಮಾಡಿ ಮತ್ತು ಡಿಜಿಟ್ ಕನ್ನಡವನ್ನು Google News ಅಲ್ಲಿ ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo