Aadhaar Update: ಆಧಾರ್ ಕಾರ್ಡ್ ಅಗತ್ಯವಿರುವ ಪ್ರಮುಖ ದಾಖಲೆಯಾಗಿದ್ದು ಪ್ರಸ್ತುತ ಇದನ್ನು ಅಪ್ಡೇಟ್ ಮಾಡುವುದು ಬಹಳ ಮುಖ್ಯ. ಆಧಾರ್‌ಗೆ ನಿಮ್ಮ ಫೋನ್ ನಂಬರ್ ಮತ್ತು ಇಮೇಲ್ ಅನ್ನು ಲಿಂಕ್ ಮಾಡುವುದು ಒಂದು ಪ್ರಕ್ರಿಯೆಯಾಗಿದೆ. ಆಧಾರ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೊಸ ಸೇವೆಯನ್ನು ಪರಿಚಯಿಸಿದೆ. ಇದು ನಿಮ್ಮ ಆಧಾರ್ ಕಾರ್ಡ್‌ಗೆ ಯಾವ ಫೋನ್ ನಂಬರ್ ಮತ್ತು ಇಮೇಲ್ ಐಡಿ ಲಿಂಕ್ ಆಗಿದೆ ಎಂಬುದನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.
UIDAI ಅನೇಕ ಗ್ರಾಹಕರಿಗೆ ಆಧಾರ್‌ನೊಂದಿಗೆ ಯಾವ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಲಿಂಕ್ ಆಗಿದೆ ಎಂಬುದರ ಕುರಿತು ತಿಳಿದಿಲ್ಲ ಎಂದು ಹೇಳಿದೆ. ಹೊಸ ಫೀಚರ್ ಈ ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ಹೇಗೆ ಕಂಡುಹಿಡಿಯುವುದು ಮತ್ತು ಹೆಚ್ಚುವರಿಯಾಗಿ 'Mobile/Email Address Verify' ಸೇವೆಯೊಂದಿಗೆ ನೀವು ಹೇಗೆ ಪರಿಶೀಲನೆ ಮಾಡಬಹುದು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮೊದಲಿಗೆ ನೀವು 'Mobile/Email Address Verification Services' ನಿಂದ ಗ್ರಾಹಕರಿಗೆ ತಮ್ಮ ಆಧಾರ್‌ನೊಂದಿಗೆ ಯಾವ ಫೋನ್ ನಂಬರ್ ಮತ್ತು ಇಮೇಲ್ ಐಡಿಯನ್ನು ಲಿಂಕ್ ಆಗಿದೆ ಎಂಬುದನ್ನು ಪರಿಶೀಲಿಸಲು ಸಹಾಯವಾಗುತ್ತದೆ. ಈ ಫೀಚರ್ ಬಳಸಿಕೊಂಡು ಬಳಕೆದಾರರು ತಮ್ಮ ಆಧಾರ್‌ಗೆ ಸಂಬಂಧಿಸಿದ ಫೋನ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ಪರಿಶೀಲಿಸುವುದು ಈಗ ಸುಲಭ. ನಿವಾಸಿಗಳನ್ನು ಗುರುತಿಸುವ ಸಲುವಾಗಿ ಅವರ ಆಧಾರ್ ಲಿಂಕ್ ಮಾಡಲಾದ ಫೋನ್ ನಂಬರ್‌ನ ಅಂತಿಮ ಮೂರು ಅಂಕೆಗಳನ್ನು ಸಹ ತೋರಿಸಲಾಗುತ್ತದೆ.
ನಮೂದಿಸಿದ ಫೋನ್ ನಂಬರ್ ಅಥವಾ ಇಮೇಲ್ ವಿಳಾಸವು ಆಧಾರ್ ಸಂಖ್ಯೆಗೆ ಲಿಂಕ್ ಆಗದಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲು ಬಳಕೆದಾರರಿಗೆ ಸೂಚಿಸಲಾಗುವುದು. ಲಿಂಕ್ ಮಾಡಿದ್ದರೆ ನಿಮ್ಮ ಸ್ಕ್ರೀನ್ ಮೇಲೆ ನೀವು ನಮೂದಿಸಿದ ಮೊಬೈಲ್ ನಂಬರ್ ನಮ್ಮ ದಾಖಲೆಗಳೊಂದಿಗೆ ಈಗಾಗಲೇ ಪರಿಶೀಲಿಸಲಾಗಿದೆ" ಎಂಬ ಮೆಸೇಜ್ ಕಳುಹಿಸಲಾಗುತ್ತದೆ.