ಈ WhatsApp ಪ್ರಪಂಚದಾದ್ಯಂತ ಮತ್ತು ಭಾರತದಲ್ಲಿ ಇಂದು ಅತ್ಯಂತ ಜನಪ್ರಿಯ ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಫೇಸ್ಬುಕ್ ಮಾಲೀಕತ್ವದ ಈ WhatsApp ಬಳಸುವುದು ಇಂದಿನ ಬಳಕೆದಾರರಿಗೆ ಸ್ಮಾರ್ಟ್ಫೋನ್ ಇಂಟರ್ನೆಟ್ ಕನೆಕ್ಷನ್ ಮತ್ತು ಮೊಬೈಲ್ ಸಂಖ್ಯೆಯ ಅಗತ್ಯವಿರುವುದು ಸರ್ವೇ ಸಾಮಾನ್ಯವಾಗಿ ಉಳಿದುಬಿಟ್ಟಿದೆ. ಇದರ ಮೇರೆಗೆ ಬಳಕೆದಾರರು ಲ್ಯಾಂಡ್ಲೈನ್ ಸಂಖ್ಯೆಯೊಂದಿಗೆ WhatsApp ಅನ್ನು ಪ್ರವೇಶಿಸಲು ಅನುಮತಿಸುವ ಈ ಫೀಚರ್ ಬಂದಿರುವುದಕ್ಕಾಗಿ ಧನ್ಯವಾದ ಹೇಳಲೇಬೇಕಿದೆ.
ಕಳೆದ ವರ್ಷ WhatsApp ಬಿಸಿನೆಸ್ ಅಪ್ಲಿಕೇಶನ್ ಬಿಡುಗಡೆಯಾಗಿ ಕಂಪನಿಯ ವ್ಯವಹಾರಗಳು ಒಂದು ಲ್ಯಾಂಡ್ಲೈನ್ ಸಂಖ್ಯೆ WhatsApp ಖಾತೆಯನ್ನು ಸ್ಥಾಪಿಸಲು ಅವಕಾಶ ನೀಡಿದ್ದು ಈ ಸೌಕರ್ಯವು ಪ್ರಮಾಣಿತ WhatsApp ಗೆ ಸಹ ಲಭ್ಯವಾಯಿತು. ಬೇರೆ ರೀತಿಯಲ್ಲಿ ಹೇಳುವುದಾದರೆ ನಿಮ್ಮ ಮೊಬೈಲ್ ಸಂಖ್ಯೆ ಇಲ್ಲದೆ ನೀವು WhatsApp ಅನ್ನು ಬಳಸಬಹುದು. ಇದನ್ನ ಹೇಗೆ ಬಳಸುವುದೆಂದು ಮುಂದಿನ ವಿಧಾನಗಳನ್ನು ಅನುಸರಿಸಿರಿ.
ಮೊದಲನೇ ಹಂತ ನೀವು ಈಗಾಗಲೇ ನಿಮ್ಮ ಫೋನ್ನಲ್ಲಿ ಡೌನ್ಲೋಡ್ ಆಗಿರುವ ಹೊಸ ಆವೃತ್ತಿಯ WhatsApp ಅಥವಾ WhatsApp Business ಅಪ್ಲಿಕೇಶನ್ ಹೊಂದಿರಬೇಕು. ನಿಮ್ಮ ಸ್ಮಾರ್ಟ್ಫೋನ್, ಟ್ಯಾಬ್ಲೆಟ್, ಲ್ಯಾಪ್ಟಾಪ್, ಡೆಸ್ಕ್ಟಾಪ್ ಅಥವಾ ಯಾವುದೇ ಹೊಂದಾಣಿಕೆಯ ಸಾಧನದಲ್ಲಿ ಈ ಅಪ್ಲಿಕೇಶನ್ ತೆರೆಯಿರಿ.
ಎರಡನೇಯದಾಗಿ ಈ ಅಪ್ಲಿಕೇಶನ್ ತೆರೆಯುವಲ್ಲಿ ನಿಮಗೆ ದೇಶದ ಕೋಡ್ (+91) ಅನ್ನು ಆಯ್ಕೆ ಮಾಡಿ ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಲು ಸೂಚಿಸಲಾಗುತ್ತದೆ. ಆದರೆ ನೀವು ಇಲ್ಲಿ ಏರ್ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್, ಬಿಎಸ್ಎನ್ಎಲ್, ಅಥವಾ ಯಾವುದೇ ಟೆಲಿಕಾಂ ಪೂರೈಕೆದಾರರಿಂದ ಖರೀದಿಸಿದ ಮೊಬೈಲ್ ಸಂಖ್ಯೆಯ ಬದಲಿಗೆ ನೀವು ಉತ್ತಮ ಹಳೆಯ ಲ್ಯಾಂಡ್ಲೈನ್ ಸಂಖ್ಯೆಯನ್ನು ನಮೂದಿಸಬಹುದು.
ಮೂರನೇಯದಾಗಿ ಲ್ಯಾಂಡ್ಲೈನ್ ಸಂಖ್ಯೆಯನ್ನು ನಮೂದಿಸಿದ ನಂತರ ಅಪ್ಲಿಕೇಶನ್ SMS ಅನ್ನು ಕಳುಹಿಸುವ ಮೂಲಕ ಅದನ್ನು ಪರಿಶೀಲಿಸುತ್ತದೆ. ಈ ಪರಿಶೀಲನಾ ಮೆಸೇಜ್ ಮೊದಲು ನೀವು ನಮೂದಿಸಿದ ಸಂಖ್ಯೆಗೆ ಕಳುಹಿಸಲಾಗುತ್ತದೆ. ಆದಾಗ್ಯೂ ನಿಮಗೆ ತಿಳಿದಿರುವಂತೆ ನೀವು ಲ್ಯಾಂಡ್ಲೈನ್ ಸಂಖ್ಯೆಯನ್ನು ನಮೂದಿಸಿದ್ದೀರಿ ಪರಿಶೀಲನಾ OTP ಮೆಸೇಜ್ ನಿಮ್ಮನ್ನು ತಲುಪುವುದಿಲ್ಲ. ಆದರೆ ಇಲ್ಲಿ ಚಿಂತಿಸಬೇಡಿ SMS ಮೂಲಕ ಪರಿಶೀಲನೆ ವಿಫಲಗೊಳ್ಳಲು ಕೆಲವು ನಿಮಿಷಗಳ ಕಾಲ ನಿರೀಕ್ಷಿಸಿರಿ. ಇದರ ನಂತರ ನೀವು "Call me" ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಾಲ್ಕನೇಯದಾಗಿ ಈ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಲ್ಯಾಂಡ್ಲೈನ್ನಲ್ಲಿ ಬಂದ ಕರೆ ಸ್ವೀಕರಿಸಿ OTP ಹಾಕಿ ಟ್ಯಾಪ್ ಮಾಡಿ. ಈ ಲ್ಯಾಂಡ್ಲೈನ್ ಪರಿಶೀಲನೆ ಕರೆಯಲ್ಲಿ ಒಂದು ಸ್ವಯಂಚಾಲಿತ ಧ್ವನಿ ಆರು ಅಂಕಿಯ ಪರಿಶೀಲನೆ ಕೋಡ್ ಅನ್ನು ಉಚ್ಚರಿಸಲಾಗುತ್ತದೆ. ನಿಮ್ಮ ರಿಲಯನ್ಸ್ ಜಿಯೋ, ವೊಡಾಫೋನ್, ಏರ್ಟೆಲ್ ಅಥವಾ ಬಿಎಸ್ಎನ್ಎಲ್ ಮೊಬೈಲ್ ಸಂಖ್ಯೆಯಿಲ್ಲದೆ WhatsApp ಅನ್ನು ಪ್ರವೇಶಿಸಲು ನೀವು ಈ ಕೋಡ್ ಅನ್ನು ಹಾಕಿ ಅಪ್ಲಿಕೇಶನ್ಗೆ ಟೈಪ್ ಮಾಡಿ ಬಳಸಬವುದು.