ಈ ವರ್ಷದ ಹೋಲಿ ಹಬ್ಬವನ್ನು ನೀವು ಅನೇಕ ರೀತಿಯಲ್ಲಿ ಆಚರಿಸಿರಬಹುದು. ಇದರಲ್ಲಿ ಅನೇಕರ ಸ್ಮಾರ್ಟ್ಫೋನ್ ಅಥವಾ ಹಲವಾರು ಮಾದರಿಯ ಗ್ಯಾಡ್ಜೆಟ್ ಕಳೆದುಕೊಂಡಿರಬಹುದು. ಆದರೆ ಒಂದು ವೇಳೆ ನೀವು ನಿಮ್ಮ ಅಥವಾ ನಿಮ್ಮ ಸ್ನೇಹಿತರ ಸ್ಮಾರ್ಟ್ಫೋನ್ ಕಳೆದುಕೊಂಡಿದ್ದರೆ ತಕ್ಷಣ ಈ ಟ್ರಿಕ್ ಬಳಸಿ ಕಳೆದ ಅಥವಾ ಕದ್ದ ಸ್ಮಾರ್ಟ್ಫೋನ್ ಅನ್ನು ಟ್ರ್ಯಾಕ್ ಮಾಡಲು ಈ Find My Device ಫೀಚರ್ ಅನ್ನು ಬಳಸಬಹುದು. ಆದರೆ ಅನೇಕ ಜನರಿಗೆ ಈ ಫೀಚರ್ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ ಆದ್ದರಿಂದ ನಿಮ್ಮ ಸ್ಮಾರ್ಟ್ಫೋನ್ ಕಳೆದೋದ್ರೆ ಹೆಚ್ಚು ಗಾಬರಿಯಾಗದೆ ಈ ಅಂಶಗಳನ್ನು ಅನುಸರಿಸಿ ಸ್ಮಾರ್ಟ್ಫೋನ್ ಪಡೆಯಲು ಪ್ರಯತ್ನಿಸಬಹುದು.
ಈ Find My Device ಫೀಚರ್ ಬಳಸಲು ನಿಮ್ಮ ಕಳೆದಿರುವ ಅಥವಾ ಕಳ್ಳತನವಾದ ಸ್ಮಾರ್ಟ್ಫೋನ್ ಒಳಗೆ ನೀವು ನೀಡಿರುವ ಜಿಮೈಲ್ ಐಡಿ ಮತ್ತು ಪಾಸ್ವರ್ಡ್ ನಿಮಗೆ ತಿಳಿದಿರಬೇಕು ಅಷ್ಟೇ. ನಿಮ್ಮ ಕಳೆದ ಅಥವಾ ಕದ್ದ ಸ್ಮಾರ್ಟ್ಫೋನ್ ಅನ್ನು ಪತ್ತೆ ಹಚ್ಚಲು Find My Device ಫೀಚರ್ ಹೆಚ್ಚು ಜನಪ್ರಿಯವಾಗಿದೆ. ಇದೊಂದು ಆಂಡ್ರಾಯ್ಡ್ ಫೋನ್ ಫೀಚರ್ ಆಗಿದ್ದು ನಿಮ್ಮ ಕಳೆದುಹೋದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಹುಡುಕಲು ಸಹಾಯ ಮಾಡುತ್ತದೆ.
ಈ ಅಪ್ಲಿಕೇಶನ್ ನಿಮ್ಮ ಫೋನ್ ಅನ್ನು ಟ್ರ್ಯಾಕ್ ಮಾಡಿ ಅದನ್ನು ರಿಂಗ್ ಮಾಡುವ, ಅದರಲ್ಲಿನ ಡೇಟಾವನ್ನು ಡಿಲೀಟ್ ಮಾಡುವ ಅಥವಾ ಆ ಫೋನ್ ಅನ್ನು ಲಾಕ್ ಮಾಡುವ ಫೀಚರ್ ಅನ್ನು ಹೊಂದಿದೆ. ಇದನ್ನು ಬಳಸಲು ಕೇವಲ ನೀವು ನಿಮ್ಮ ಜಿಮೈಲ್ ಐಡಿ ಮತ್ತು ಪಾಸ್ವರ್ಡ್ ಜೊತೆಗೆ ಲಾಗ್ ಇನ್ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮ್ಮ ಸ್ಮಾರ್ಟ್ಫೋನ್ ಕಳೆದಿದ್ದರೆ ಅಥವಾ ಕಳ್ಳತನವಾಗಿದ್ದರೆ ಮೊದಲು ಸ್ಮಾರ್ಟ್ಫೋನ್ ಒಳಗೆ ನೀವು ನೀಡಿರುವ ಜಿಮೈಲ್ ಐಡಿ ಮತ್ತು ಪಾಸ್ವರ್ಡ್ ಹಾಕಿದ ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಿ.
Also Read: ಭಾರತದಲ್ಲಿ ಕೈಗೆಟುವ ಬೆಲೆಗೆ POCO C61 ಬಿಡುಗಡೆ! ಬೇಳೆಯೊಂದಿಗೆ ಟಾಪ್ 5 ಫೀಚರ್‌ಗಳನ್ನು ಪರಿಶೀಲಿಸಿ!
➥ಮೊದಲಿಗೆ ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಅಥವಾ ಲ್ಯಾಪ್ಟಾಪ್ ಅಲ್ಲಿ ಗೂಗಲ್ ಟೈಪ್ ಮಾಡಿ Find My Device ಸರ್ಚ್ ಮಾಡಿ ಅಲ್ಲಿ ಕಾಣುವ Sign in ಮೇಲೆ ಈ ಕ್ಲಿಕ್ ಮಾಡಿ ಇಲ್ಲವಾದರೆ ಯಾವ ಫೋನ್ ಬಳಸುತ್ತಿದ್ದೀರೋ ಅದರ ಮಾಹಿತಿ ಕಾಣುತ್ತದೆ.
➥ಈಗ ಇಲ್ಲಿ ನಿಮ್ಮ ಸ್ಮಾರ್ಟ್ಫೋನ್ ಕಳೆದಿದ್ದರೆ ಅಥವಾ ಕಳ್ಳತನವಾಗಿದ್ದರೆ ಆ ಸ್ಮಾರ್ಟ್ಫೋನ್ ಒಳಗೆ ನೀವು ನೀಡಿದ ಜಿಮೈಲ್ ಐಡಿ ಮತ್ತು ಅದರ ಪಾಸ್ವರ್ಡ್ ಅನ್ನು ಇಲ್ಲಿ ಹಾಕಿ ಲಾಗ್ ಇನ್ ಮಾಡಿಕೊಳ್ಳಿ.
➥ಈಗ ನಿಮ್ಮ ಎಡಭಾಗದಲ್ಲಿ Play sound, Secure device ಮತ್ತು Factory reset device ಆಯ್ಕೆಗಳನ್ನು ಕಾಣಬಹುದು.
➥ನಂತರ ಆಂಡ್ರಾಯ್ಡ್ ಡಿವೈಸ್ ಮ್ಯಾನೇಜ್ ಬಳಸಲು ಇದೆ ಗೂಗಲ್ ಖಾತೆಯನ್ನು ಬಳಸಿ ಗೂಗಲ್ ಅಪ್ಲಿಕೇಶನ್ ಬಳಸಿ ನಿಮ್ಮ ಕಳೆದ ಅಥವಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಸರ್ಚ್ ಮಾಡಲು ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ ಮೈ ಡಿವೈಸ್ ಸರ್ಚ್ ಮಾಡಲು ಕಾರ್ಯನಿರ್ವಹಿಸುತ್ತದೆ. ಇದನ್ನು ಬಳಸಲು ನಿಮ್ಮ Google ಖಾತೆಯೊಂದಿಗೆ ನಿಮ್ಮ ಫೋನ್‌ಗೆ ನೀವು ಲಾಗ್ ಇನ್ ಮಾಡಬೇಕಾಗುತ್ತದೆ ಅಷ್ಟೇ.
ಈ ಮೇಲೆ ತಿಳಿಸಿದ ವಿಧಾನಗಳನ್ನು ಅನುಸರಿಸಿದ ನಂತರವೂ ನಿಮ್ಮ ಕಾಣೆಯಾದ ಅಥವಾ ಕದ್ದ ಫೋನ್ ಅನ್ನು ಹುಡುಕುವಲ್ಲಿ ನೀವು ವಿಫಲವಾದರೆ ಕೊನೆಯದಾಗಿ ಈ ಅಂಶ ಪ್ರಯತ್ನಿಸಲು ಒಂದೇ ಒಂದು ಮಾರ್ಗವಿದೆ. ನಿಮ್ಮ ಕಳೆದುಹೋದ ಫೋನ್‌ನ IMEI ಸಂಖ್ಯೆಯನ್ನು ನೀವು ಹೊಂದಿದ್ದರೆ ಅದು ನಿಮ್ಮ ಸ್ಮಾರ್ಟ್ಫೋನ್ ಖರೀದಿಸುವಾಗ ಪಡೆದಿರುವ ಬಾಕ್ಸ್ ಮೇಲೆ ಮತ್ತು ಬಿಲ್ ಒಳಗೆ ಲಭ್ಯವಿರುತ್ತದೆ.
ನೀವು ಅದನ್ನು ಪೊಲೀಸರಿಗೆ ಒದಗಿಸಬಹುದು ಮತ್ತು ಕಳ್ಳತನ ಅಥವಾ ಕಾಣೆಯಾದ ಬಗ್ಗೆ ಔಪಚಾರಿಕ ದೂರನ್ನು ದಾಖಲಿಸಬಹುದು. ಸೈಬರ್ ಸೆಕ್ಯುರಿಟಿ ತಂಡವು ಈ IMEI ಸಂಖ್ಯೆಯ ಮೂಲಕ ಫೋನ್ ಅನ್ನು ಹುಡುಕಲು ಪ್ರಯತ್ನಿಸುತ್ತದೆ. ಕಳೆದುಹೋದ ಫೋನ್ ಸ್ವಿಚ್ ಆಫ್ ಆಗಿರುವ ಸಂದರ್ಭಗಳಲ್ಲೂ ಇದು ದೀರ್ಘ ಪ್ರಕ್ರಿಯೆಯಾಗಿದೆ. ಏಕೆಂದರೆ ನಿಯಮಿತವಾಗಿ IMEI ಮಾಹಿತಿಯನ್ನು ಟ್ರ್ಯಾಕ್ ಮಾಡಬೇಕಾಗಿರುವುದರಿಂದ ಅದರ IMEI ಸಂಖ್ಯೆಯನ್ನು ಬದಲಾಯಿಸಲಾಗುವುದಿಲ್ಲ.