ಜಿಮೇಲ್ ಮೂಲಕ ಗೂಗಲ್ ಮೀಟ್ ವಿಡಿಯೋ / ಆಡಿಯೋ ಕಾಲಿಂಗ್ ಮಾಡುವುದೇಗೆ?

Updated on 06-May-2020
HIGHLIGHTS

ಈ ಅಪ್ಡೇಟ್ ಹೊಂದಿದ್ದಾರೆ Gmail ಮೂಲಕ Google Meet ವಿಡಿಯೋ / ಆಡಿಯೋ ಕರೆಗಳನ್ನು ಮಾಡುವುದೇಗೆಂದು ತಿಳಿಯೋಣ

ಈಗ ಗೂಗಲ್ ಕ್ರಮೇಣ ಜಿಮೇಲ್ ಅಲ್ಲಿ ಈ ಹೊಸ ಫೀಚರ್ ಅನ್ನು ಹೊರತರಲು ಪ್ರಾರಂಭಿಸಿದೆ. ಅದು G- ಸೂಟ್ ಬಳಕೆದಾರರಿಗೆ Gmail ನಿಂದ ನೇರವಾಗಿ ಗೂಗಲ್ ಮೀಟ್ ವೀಡಿಯೊ ಕರೆಗಳನ್ನು ಮಾಡಲು ಅಥವಾ ಸೇರಲು ಅನುವು ಮಾಡಿಕೊಡುತ್ತದೆ. ಅವರು ಹೊಸ ಅಪ್ಡೇಟ್ಗಳನ್ನು ಪಡೆದ ನಂತರವಷ್ಟೇ ಇದನ್ನು ಬಳಸಬವುದು. ಇದು ನಿಮ್ಮ ಆಫೀಸ್ ಅಥವಾ ನಿಮ್ಮ ವ್ಯಯಕ್ತಿಕ ಜಿಮೇಲ್ ಖಾತೆಗಳನ್ನು ಹೊಂದಿರುವವರು ಈ Gmail ನ ವೆಬ್ (Desktop/Laptop ಮಾತ್ರ) ಆವೃತ್ತಿಯ ಎಡಭಾಗದಲ್ಲಿ ಇರಿಸಲಾಗಿರುವ ಚಾಟ್ಸ್ ವಿಭಾಗದ ಮೇಲಿರುವ ಹೊಸ ‘Meet’ ವಿಭಾಗವನ್ನು ನೋಡಲು ಸಾಧ್ಯವಾಗುತ್ತದೆ. ಆದ್ದರಿಂದ ಒಂದು ವೇಳೆ ನೀವು ಈ ಅಪ್ಡೇಟ್ ಹೊಂದಿದ್ದಾರೆ Gmail ಮೂಲಕ Google Meet ವಿಡಿಯೋ / ಆಡಿಯೋ ಕರೆಗಳನ್ನು ಮಾಡುವುದೇಗೆಂದು ತಿಳಿಯೋಣ.

> ಮೊದಲಿಗೆ ನಿಮ್ಮ ಡೆಸ್ಕ್ಟಾಪ್ ಅಥವಾ ಲ್ಯಾಪ್ಟಾಪ್ನಲ್ಲಿ ನಿಮ್ಮ Gmail ತೆರೆಯಿರಿ.

>ಚಾಟ್ ಸೈಡ್ಬಾರ್ನಲ್ಲಿ ‘Meet’ ವಿಭಾಗವನ್ನು ನೋಡಿ.

>ಮೀಟ್ ವಿಂಡೋ ಅಡಿಯಲ್ಲಿ ‘Start a meeting’ ಆಯ್ಕೆಯನ್ನು ಆರಿಸಿ.

>ನಂತರ ಅನನ್ಯ meet.google.com URL ನೊಂದಿಗೆ ಹೊಸ ವಿಂಡೋ ಪಾಪ್ ಅಪ್ ಆಗುತ್ತದೆ.

>Gmail ಮೂಲಕ ಮೀಟಿಂಗ್ ID ಹಂಚಿಕೊಳ್ಳುವ ಮೂಲಕ ಮೀಟಿಂಗ್ ಸೇರಲು ಅಥಂಜವ ಸೇರಿಸಲು ಆಹ್ವಾನಿಸಬಹುದು.

>Gmail ನಿಂದ ಮೀಟಿಂಗ್ ಸೇರಲು ಕ್ರಮಗಳು ಸರಳವಾಗಿದ್ದು ಕೇವಲ ಮೀಟಿಂಗ್ ID ಮಾತ್ರ ಬೇಕಾಗಿರುತ್ತದೆ

>ನಂತರ ‘Join a meeting’ ಆಯ್ಕೆಯನ್ನು ಟ್ಯಾಪ್ ಮೀಟಿಂಗ್ ID ಕೋಡ್ ನಮೂದಿಸಿ.

ಸಭೆಗೆ ಸೇರಲು ಯಾರನ್ನಾದರೂ ಆಹ್ವಾನಿಸುವ ಕ್ರಮಗಳು ಸಭೆಯನ್ನು ಆಯೋಜಿಸಿದ ನಂತರ ಇತರ ಜನರನ್ನು ಸೇರಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಸೇರುವ ಮಾಹಿತಿಯನ್ನು ನಕಲಿಸಿ. Gmail ಅಥವಾ ಇನ್ನಾವುದೇ ವಿಧಾನದ ಮೂಲಕ ಹಂಚಿಕೊಳ್ಳಬವುದು. ಈ ವೈಶಿಷ್ಟ್ಯವು ನಿಮ್ಮ ನಿರ್ವಾಹಕನನ್ನೂ ಅವಲಂಬಿಸಿರುತ್ತದೆ ಎಂಬುದನ್ನು ಗಮನಿಸಬೇಕಾಗಿದೆ. ಆದ್ದರಿಂದ ನಿಮ್ಮ ನಿರ್ವಾಹಕರು Gmail ನಲ್ಲಿ ಈ ಹೊಸ ಮೀಟ್ ವೈಶಿಷ್ಟ್ಯವನ್ನು ಬೆಂಬಲಿಸುತ್ತಾರೆ ಎಂದು ಒಮ್ಮೆ ಖಚಿತಪಡಿಸಿಕೊಳ್ಳಿ.

ಗೂಗಲ್ ತನ್ನ ಮೀಟ್ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಅನ್ನು Gmail ನಿಂದ ನೇರವಾಗಿ ಪ್ರವೇಶಿಸುವಂತೆ ಮಾಡಿದೆ. ಅಪ್ಲಿಕೇಶನ್‌ಗಳ ನಡುವೆ ಬದಲಾಯಿಸದೆ ಬಳಕೆದಾರರು ಸಭೆಗಳಿಗೆ ಸೇರಲು ಅನುವು ಮಾಡಿಕೊಡುತ್ತದೆ. ಗೂಗಲ್ CEO ಸುಂದರ್ ಪಿಚೈ ಈ ತಿಂಗಳ ಆರಂಭದಲ್ಲಿ 2 ಮಿಲಿಯನ್ ಹೊಸ ಮೀಟ್ ಬಳಕೆದಾರರನ್ನು ಪ್ರತಿ ದಿನ ಸೇರಿಸಲಾಗುತ್ತಿದ್ದು ಅಂದ್ರೆ ದಿನಕ್ಕೆ 60% ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :