Aadhaar Update: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಮನೆಯಲ್ಲೆ ಕುಳಿತು ಅಪ್ಡೇಟ್ ಮಾಡಬಹುದು. ಈ ಕೆಳಗಿನ ಸೂಚನೆಗಳನ್ನು ಅನುಸರಿಸುವ ಮೂಲಕ ನೀವು ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸ, ಫೋನ್ ನಂಬರ್, ಹೆಸರು ಮತ್ತು ಜನ್ಮ ದಿನಾಂಕವನ್ನು ಹೇಗೆ ಬದಲಾಯಿಸುವುದು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹಂತ 1: UIDAI ವೆಬ್‌ಸೈಟ್ https://uidai.gov.in/ ನಲ್ಲಿ "ಮೈ ಆಧಾರ್" ಟ್ಯಾಬ್ ತೆರೆಯಿರಿ ಮತ್ತು "ಅಪ್‌ಡೇಟ್ ಆಧಾರ್" ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 2: ಅಪ್‌ಡೇಟ್ ಆಧಾರ್ ವಿಭಾಗದಿಂದ "ಅಪ್‌ಡೇಟ್ ಡೆಮೊಗ್ರಾಫಿಕ್ಸ್ ಡೇಟಾ ಆನ್‌ಲೈನ್" ಅನ್ನು ಆಯ್ಕೆ ಮಾಡಿ.
ಹಂತ 3: ಸ್ಕ್ರೀನ್ ಮೇಲೆ ಕಾಣುವ ಸೆಕ್ಯೂರಿಟಿ ಕೋಡ್ ಮತ್ತು ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ. ಮೆನುವಿನಿಂದ "Send OTP " ಆಯ್ಕೆಮಾಡಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಒನ್-ಟೈಮ್ ಪಾಸ್‌ವರ್ಡ್ (OTP) ಕಳುಹಿಸಲಾಗುತ್ತದೆ.
ಹಂತ 4: ಒದಗಿಸಿದ ಬಾಕ್ಸ್‌ನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಅನ್ನು ನಮೂದಿಸಿ. ನಂತರ "ಲಾಗಿನ್" ಬಟನ್ ಕ್ಲಿಕ್ ಮಾಡಿ.
ಹಂತ 5: ನಿಮ್ಮ ವಿಳಾಸ, ಫೋನ್ ನಂಬರ್, ಹೆಸರು ಅಥವಾ ಜನ್ಮ ದಿನಾಂಕದಂತಹ ಮಾಹಿತಿಯನ್ನು ಬದಲಾಯಿಸಲು ಬಯಸುವ ಕ್ಷೇತ್ರಗಳನ್ನು ಆಯ್ಕೆಮಾಡಿ. ಇಲ್ಲಿ ನೀವು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳನ್ನು ಆಯ್ಕೆ ಮಾಡಬಹುದು.
ಹಂತ 6: ನೀವು ಅಪ್ಡೇಟ್ ಮಾಡಲು ಬಯಸುವ ಬದಲಾವಣೆಗಳನ್ನು ಬೆಂಬಲಿಸುವ ಡಾಕ್ಯುಮೆಂಟ್‌ಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ. ನೀವು ನಿಮ್ಮ ವಿಳಾಸವನ್ನು ಬದಲಾಯಿಸಲು ಬಯಸಿದರೆ ಲೈಟ್ ಬಿಲ್, ಬ್ಯಾಂಕ್ ಸ್ಟೇಟ್‌ಮೆಂಟ್ ಅಥವಾ ಪಾಸ್‌ಪೋರ್ಟ್‌ನಂತಹ ನಿಮ್ಮ ವಿಳಾಸದ ಪುರಾವೆಯನ್ನು ಅಪ್‌ಲೋಡ್ ಮಾಡಿ.
ಹಂತ 7: ನೀವು ಬದಲಾವಣೆ ಮಾಡಿದ ಮಾಹಿತಿಯನ್ನು ಮರುಪರಿಶೀಲಿಸಿದ ನಂತರ "Submit" ಬಟನ್ ಕ್ಲಿಕ್ ಮಾಡಿ.
ಹಂತ 8: ಸ್ಕ್ರೀನ್ ಮೇಲೆ ಕಾಣುವ ಪಟ್ಟಿಯಿಂದ BPO ಸೇವಾ ಪೂರೈಕೆದಾರರನ್ನು ಆಯ್ಕೆಮಾಡಿ. ಆಧಾರ್ ಅಪ್ಡೇಟ್ ವಿನಂತಿಗಳನ್ನು ನಿರ್ವಹಿಸಲು UIDAI BPO ಸೇವಾ ಪೂರೈಕೆದಾರರಿಗೆ ಅನುಮತಿ ನೀಡಿದೆ.
ಹಂತ 9: ಅಪ್ಡೇಟ್ ಗಾಗಿ ನಿಮ್ಮ ವಿನಂತಿಯನ್ನು ದೃಢೀಕರಿಸಿ ಮತ್ತು "Submit" ಬಟನ್ ಕ್ಲಿಕ್ ಮಾಡಿ.
ಹಂತ 10: ಅಪ್ಡೇಟ್ ವಿನಂತಿಯನ್ನು ಸಲ್ಲಿಸಿದ ನಂತರ ನೀವು URN ಸಂಖ್ಯೆ ಜೊತೆಗೆ ದೃಢೀಕರಣ ಇಮೇಲ್ ಅನ್ನು ಪಡೆಯುತ್ತೀರಿ.
ಗಮನಿಸಿ: ಇದರ ನಂತರ ನೀವು UIDAI ವೆಬ್‌ಸೈಟ್ ಅಥವಾ UIDAI ಮೊಬೈಲ್ ಅಪ್ಲಿಕೇಶನ್‌ನಲ್ಲಿ URN ಅನ್ನು ಬಳಸಿಕೊಂಡು ನೀವು ನಿಮ್ಮ ಅಪ್ಡೇಟ್ ವಿನಂತಿಯ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಬಹುದು. ಆಧಾರ್ ಕಾರ್ಡ್‌ನ ಮಾಹಿತಿಯನ್ನು ಆನ್‌ಲೈನ್ ನಲ್ಲಿ ಅಪ್ಡೇಟ್ ಮಾಡಿದ ನಂತರ UIDAI ಪರಿಶೀಲಿಸುತ್ತದೆ. ಅಪ್ಡೇಟ್ ವಿನಂತಿಯನ್ನು ಸಲ್ಲಿಸಿದ ಕೆಲವೇ ದಿನಗಳಲ್ಲಿ ಅಪ್ಡೇಟ್ ಆದ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಪಡೆಯಬಹುದು.