ನಿಮ್ಮ ಆಧಾರ್ ಕಾರ್ಡ್’ಲ್ಲಿ ಅಡ್ರೆಸ್, ಹೆಸರು, ಫೋನ್ ನಂಬರ್ ಅಪ್ಡೇಟ್ ಮಾಡೋದೇಗೆ

ನಿಮ್ಮ ಆಧಾರ್ ಕಾರ್ಡ್’ಲ್ಲಿ ಅಡ್ರೆಸ್, ಹೆಸರು, ಫೋನ್ ನಂಬರ್ ಅಪ್ಡೇಟ್ ಮಾಡೋದೇಗೆ
HIGHLIGHTS

ನಿಮ್ಮ ಆಧಾರ್ ಕಾರ್ಡ್'ಲ್ಲಿ ಅಡ್ರೆಸ್, ಹೆಸರು, ಫೋನ್ ನಂಬರ್ ಅಪ್ಡೇಟ್ ಮೂಲಕ ಮಾಡಲು ಒನ್ ಟೈಮ್ ಪಾಸ್‌ವರ್ಡ್ (OTP) ಮುಖ್ಯವಾಗಿರುತ್ತದೆ.

ಇವೇಲ್ಲವನ್ನು ಮೊಬೈಲ್ ಸಂಖ್ಯೆಗಳನ್ನು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ

ಈ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಮೂದಿಸಿರುವ ಅಡ್ರೆಸ್, ಹೆಸರು, ಫೋನ್ ನಂಬರ್ ಅಪ್ಡೇಟ್ ಅಥವಾ ಬದಲಾಯಿಸಬವುದಾದ ಸೌಲಭ್ಯವನ್ನು ಒದಗಿಸಿದೆ. ಇವನ್ನು ಆನ್‌ಲೈನ್‌ನಲ್ಲಿ ಅಪ್ಡೇಟ್ ಅಥವಾ ಬದಲಾಯಿಸಬಹುದು. ಗಮನದಲ್ಲಿಡಿ ಇವೇಲ್ಲವನ್ನು ಮೊಬೈಲ್ ಸಂಖ್ಯೆಗಳನ್ನು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ. ಹಾಗಾಗಿ ಆನ್‌ಲೈನಲ್ಲಿ ನಿಮ್ಮ ಆಧಾರ್ ಕಾರ್ಡ್'ಲ್ಲಿ ಅಡ್ರೆಸ್, ಹೆಸರು, ಫೋನ್ ನಂಬರ್ ಅಪ್ಡೇಟ್ ಮೂಲಕ ಮಾಡಲು ಒನ್ ಟೈಮ್ ಪಾಸ್‌ವರ್ಡ್ (OTP) ಮುಖ್ಯವಾಗಿರುತ್ತದೆ. ಇದನ್ನು ಕಂಫಾರ್ಮ್ ಮಾಡುವುದರಿಂದ ಆನ್‌ಲೈನ್ ಮೂಲಕ ಇವೇಲ್ಲಾವನ್ನು ನೀವೇ ಮಾಡಬವುದು.

1) ಮೊದಲಿಗೆ UIDAI ವೆಬ್‌ಸೈಟ್‌ಗೆ ಭೇಟಿ ನೀಡಿ.

2) ನಂತರ ಇಲ್ಲಿ ಕ್ಲಿಕ್ ಮಾಡಿ https://ssup.uidai.gov.in/ssup/login.html ಸೂಚನೆಗಳನ್ನು ಅನುಸರಿಸಿ.  

3) ನೀವು ಮಾನ್ಯವಾಗಿರುವ ದಾಖಲೆಗಳನ್ನು ಹೊಂದಿದ್ದರೆ 'ವಿಳಾಸವನ್ನು ನವೀಕರಿಸಲು ಮುಂದುವರಿಯಿರಿ' ಟ್ಯಾಬ್ ಕ್ಲಿಕ್ ಮಾಡಿ. 

4) ಬೇರೆ ವಿವರಗಳನ್ನು ನಮೂದಿಸಿ, ಮಾನ್ಯ ದಾಖಲೆಯನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸಿರಿ.

5) ಒಂದು ವೇಳೆ ನಿಮ್ಮ ಬಳಿ ವಿಳಾಸ ಪುರಾವೆ ಇಲ್ಲವಾದರೆ ವಿಳಾಸ ಮೌಲ್ಯಮಾಪನ ಪತ್ರದ ಆಯ್ಕೆಯೊಂದಿಗೆ ನೀವು ಇನ್ನೂ ನಿಮ್ಮ ವಿಳಾಸವನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಅವೆಂದರೆ 

-Resident initiates request

-Address verifier consents

-Resident submits request

-Use secret code to complete

ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ

ನಿಮ್ಮ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ನವೀಕರಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ ನವೀಕರಣಕ್ಕಾಗಿ ನೀವು ಮಾನ್ಯ ಮತ್ತು ಮೂಲ ದಾಖಲೆಗಳನ್ನು ಸಾಗಿಸಬೇಕಾಗುತ್ತದೆ. ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ನಿಮಗೆ ಹಿಂತಿರುಗಿಸಲಾಗುತ್ತದೆ. ಅಪ್ಡೇಟ್ ವಿನಂತಿ ಸಂಖ್ಯೆ (Update Request Number -URN) ಬಳಸಿ ನಿಮ್ಮ ಆನ್‌ಲೈನ್ ವಿಳಾಸ ಅಪ್ಡೇಟ್  ವಿನಂತಿಯ ಸ್ಟೇಟಸ್ ಪರಿಶೀಲಿಸಬವುದು. ಸೇವಾ ವಿನಂತಿ ಸಂಖ್ಯೆ (Service Request Number -SRN) ಅನ್ನು ಬಳಸಿಕೊಂಡು ವಿಳಾಸ ಕ್ರಮ ಪತ್ರವನ್ನು ರಚಿಸುವ ನಿಮ್ಮ ವಿನಂತಿಯ ಸ್ಥಿತಿಯನ್ನು ಸಹ ನೀವು ಪರಿಶೀಲಿಸಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo