IRCTC e-Wallet User Guide: ಭಾರತದ ಅತಿದೊಡ್ಡ ಜಾಲದಲ್ಲಿ ರೈಲ್ವೆ ಇಲಾಖೆಯ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್ (IRCTC) ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಯೋಜಿತ ಪ್ರವಾಸದ ಸಂಸ್ಥೆಯಾಗಿದ್ದು ಇದು ರೈಲ್ವೆ ಇಲಾಖೆಗೆ ಸಂಬಂಧಿಸಿದ ಆಹಾರ ಸರಬರಾಜು, ಪ್ರವಾಸ ಮತ್ತು ಆನ್ ಲೈನ್ ಟಿಕೆಟ್ ಕಾದಿರಿಸುವ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಭಾರತದಲ್ಲಿ ಕೈಗೆಟುಕುವ ಬೆಲೆಯಿಂದಾಗಿ ಅನೇಕ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ರೈಲ್ವೇ ಕೂಡ ಪ್ರಯಾಣಿಕರಿಗಾಗಿ ಹಲವು ರೀತಿಯ ಸೌಲಭ್ಯಗಳನ್ನು ತಂದಿದೆ.
ಈಗ ಪ್ರಯಾಣಿಕರು IRCTC ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಸುಲಭವಾಗಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇದಲ್ಲದೆ IRCTC ಪಾವತಿಗೆ ವೇದಿಕೆಯನ್ನು ಹೊಂದಿದೆ. ಈ ವೇದಿಕೆಯನ್ನು ಐಆರ್‌ಸಿಟಿಸಿ ಇ-ವ್ಯಾಲೆಟ್ (IRCTC e-Wallet) ಎಂದು ಕರೆಯಲಾಗುತ್ತದೆ. ಈ ವ್ಯಾಲೆಟ್ ಬಳಸಿ ಬಳಕೆದಾರರು ಸುಲಭವಾಗಿ ಟಿಕೆಟ್‌ಗಳನ್ನು ಪಾವತಿಸಬಹುದು. ಈ ಐಆರ್‌ಸಿಟಿಸಿ ಇ-ವಾಲೆಟ್‌ನಿಂದ ಜನಪ್ರಿಯ ಪೇಮೆಂಟ್ ಗೇಟ್ ಆಗಿರುವ Paytm Wallet ಮತ್ತು Phonepe Wallet ನಂತೆ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ನಿಮ್ಮ ಹಣ ವರ್ಗಾವಣೆ ಮತ್ತು ಹಿಂತೆಗೆದುಕೊಳ್ಳುವುದು ಹೇಗೆ ತಿಳಿಯಿರಿ!
➥ಮೊದಲಿಗೆ ನೀವು ನಿಮ್ಮ IRCTC ಖಾತೆಗೆ ಲಾಗ್ ಇನ್ ಮಾಡಿ ನೇರವಾಗಿ IRCTC e-Wallet ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.
➥ಇದನ್ನು ನೀವು ನೋಂದಾಯಿಸಲು PAN ಕಾರ್ಡ್ ಅಥವಾ Aadhaar ಕಾರ್ಡ್ ಅನ್ನು ಮಾಹಿತಿ ನೀಡಿ ಪರಿಶೀಲಿಸಬೇಕು.
➥ಈ ಪರಿಶೀಲನೆಯ ನಂತರ ನೀವು ಇ-ವ್ಯಾಲೆಟ್ ನೋಂದಣಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
➥ಪಾವತಿಯ ನಂತರ IRCTC ಇ-ವ್ಯಾಲೆಟ್ ಲಾಗ್ ಔಟ್ ಆಗುತ್ತದೆ ನೀವು ಮತ್ತೇ ರೀಚಾರ್ಜ್ ಮಾಡಲು ಮತ್ತೊಮ್ಮೆ ಲಾಗ್ ಇನ್ ಮಾಡಬೇಕಾಗುತ್ತದೆ.
➥ಮೊದಲಿಗೆ ನೀವು ನಿಮ್ಮ IRCTC ಖಾತೆಗೆ ಲಾಗ್ ಇನ್ ಆಗಬೇಕು ಇಲ್ಲಿ ನೀವು ಇ-ವ್ಯಾಲೆಟ್‌ಗೆ ಆಯ್ಕೆಗೆ ಹೋಗಬೇಕು ನಂತರ ಡೆಪಾಸಿಟ್ ಆಯ್ಕೆಯನ್ನು ಆರಿಸಬೇಕು.
➥ಇದರ ನಂತರ ನೀವು ವರ್ಗಾಯಿಸಲು ಬಯಸುವ ಮೊತ್ತವನ್ನು ಆಯ್ಕೆಮಾಡಿ ಈಗ ಡ್ರಾಪ್‌ಡೌನ್ ಮೆನುವಿನಿಂದ ಪಾವತಿ ಆಯ್ಕೆಯನ್ನು ಆರಿಸಿಕೊಳ್ಳಿ.
➥ಇದರ ನಂತರ ಪಾವತಿ ಮಾಡಲು ಸಲ್ಲಿಸು ಕ್ಲಿಕ್ ಮಾಡಿ ಪಾವತಿಯನ್ನು ಮಾಡಿದ ನಂತರ ದೃಢೀಕರಣ ಅಧಿಸೂಚನೆಯು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.
➥IRCTC ಇ-ವ್ಯಾಲೆಟ್‌ನಲ್ಲಿ ನೀವು ಕನಿಷ್ಟ 100 ಮತ್ತು ಗರಿಷ್ಠ 10,000 ರೂಗಳನ್ನು ಡೆಪಾಸಿಟ್ ಮಾಡಬಹುದು.
ನಿಮ್ಮ ಐಆರ್‌ಸಿಟಿಸಿ ಇ-ವಾಲೆಟ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ನೀವು ಟಿಕೆಟ್ ಬುಕ್ ಮಾಡಿದಾಗಲೆಲ್ಲಾ ಪಾವತಿಗಾಗಿ ನೀವು IRCTC ಇ-ವ್ಯಾಲೆಟ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಮೂಲಕ ಇ-ವ್ಯಾಲೆಟ್ ಮೂಲಕ ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದು. ನಿಮ್ಮ ಇ-ವ್ಯಾಲೆಟ್‌ನಲ್ಲಿರುವ ಹಣ ಖಾಲಿಯಾದಾಗ ನೀವು ಅದನ್ನು ಮತ್ತೆ ಚಾರ್ಜ್ ಮಾಡಬಹುದು.