ಇಂದಿನ ಇಂಟರ್ನೆಟ್ ದುನಿಯಾದಲ್ಲಿ ತುಂಬ ಜನರಿಗೆ ಸೀಕ್ರೆಟ್ ಆಗಿ ಮೆಸೇಜ್ (Secret Message) ಕಳುಹಿಸಬೇಕಾದರೆ ನಿಮ್ಮ ಗುರುತು ಅವರಿಗೆ ಸಿಗದಂತೆ ಕಾಲ್ ಮಾಡಬೇಕು ಅಂದುಕೊಳ್ಳೋದು ಒಂದಲ್ಲ ಒಂದು ಬಾರಿ ನಿಮ್ಮ ತಲೆಗೆ ಬಂದಿರಬಹುದು. ಈ ರೀತಿ ಮಾಡಲು ಇಲ್ಲೊಂದು ಸಣ್ಣ ಟ್ರಿಕ್ ಬಗ್ಗೆ ಮಾಹಿತಿ ನೀಡಲಿದ್ದೇನೆ. ನೀವು ಯಾರೆಂದು ಮೆಸೇಜ್ ಅಥವಾ ಕರೆ ಪಡೆಯುವವವರಿಗೆ ಗುರುತು ಸಿಗಬಾರದು ಎನ್ನುವುದು ತುಂಬ ಜನರ ಕೋರಿಕೆಯಾಗಿರುತ್ತದೆ. ಅಂತವರಿಗೆ ಅಪರಿಚಿತರಾಗಿ ಮೆಸೇಜ್ ಅಥವಾ ಕರೆ ಮಾಡಲು ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಇದನ್ನು ಯಾವುದೇ ತಪ್ಪು ಉದ್ದೇಶಗಳಿಗೆ ಬಳಸಬಾರದು ಆಗೇನಾದರೂ ನೀವು ಬಳಸಿದರೆ ಮುಂದಾಗುವ ಕಷ್ಟ ನಷ್ಟಕ್ಕೆ ನೀವೇ ಜವಾಬ್ದಾರರಾಗಿರುವಿರಿ.
ಇದಕ್ಕಾಗಿ ನೀವು ಒಂದು ಈ secret.viralsachxd.com ವೆಬ್ಸೈಟ್ಗೆ ಭೇಟಿ ನೀಡಬೇಕು. ಇಲ್ಲಿ ಸೀಕ್ರೆಟ್ ಮೆಸೇಜ್ ಕಳುಹಿಸಲು ಮತ್ತು ಓದಲು ಈ ವೆಬ್‌ಸೈಟ್ ಒಂದು ವೇದಿಕೆಯಾಗಿದ್ದು, ನಿಮ್ಮ ಮನದಾಳದ ಮಾತುಗಳನ್ನು ನಿಮ್ಮ ಸ್ನೇಹಿತರಿಗೆ ತಿಳಿಸಲು ಉಪಯೋಗಿಸಬಹುದು. ಇದರಿಂದ ಮೆಸೇಜ್ ಕಳುಹಿಸಿದರೆ ನಿಮ್ಮ ಹೆಸರು, ಫೋನ್ ನಂಬರ್ ಯಾವುದೂ ಅವರಿಗೆ ಕಾಣಿಸೋದಿಲ್ಲ. ಅದರಂತೆಯೇ ನೀವು ಕೂಡ ಇದರಿಂದ ಅಪರಿಚಿತರಾಗಿ ಮೆಸೇಜ್ ರಿಸೀವ್ ಮಾಡಬಹುದು ಇದನೆಲ್ಲ ಮಾಡಲು ಇಲ್ಲೊಂದು ಸಣ್ಣ ಟ್ರಿಕ್ ಅಂದ್ರೆ ಇದರಲ್ಲಿ ಖಾತೆ ತೆರೆದವರಿಗೆ ಮಾತ್ರ ನೀವು ಮೆಸೇಜ್ ಕಳುಹಿಸಲು ಅಥವಾ ಪಡೆಯಲು ಸಾಧ್ಯವಾಗುತ್ತದೆ ಎನ್ನುವುದನ್ನು ಗಮನಿಸಬೇಕಿದೆ.
ನೀವು ಮೊದಲು secret.viralsachxd.com ವೆಬ್‌ಸೈಟ್ ತೆರೆಯಿರಿ.
ಇಲ್ಲಿ ಇನ್‌ಪುಟ್ ಎಂಬ ಜಾಗದಲ್ಲಿ ನಿಮ್ಮ ಹೆಸರನ್ನು ನಮೂದಿಸಿ ಮತ್ತು ಸೈನ್ ಅಪ್ ಬಟನ್ ಕ್ಲಿಕ್ ಮಾಡಿ.
ಈಗ ಒಂದು ಲಿಂಕ್ ತಯಾರಾಗುತ್ತದೆ. ನೀವು ಅದನ್ನು ಕಾಪಿ ಮಾಡಬಹುದು ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ನೀವು ಈ ಲಿಂಕ್ ಅನ್ನು ನಿಮ್ಮ ಇನ್ಸ್ಟಾಗ್ರಾಮ್ ಬಯೋ ಅಥವಾ ಟ್ವಿಟ್ಟರ್ ಬಯೋದಲ್ಲೂ ಹಾಕಬಹುದು.
ಹೀಗೆ ಮಾಡಿದಾಗ ನಿಮ್ಮ ಸ್ನೇಹಿತರು ಈ ಸೀಕ್ರೇಟ್ ಮೆಸೇಜ್ ಲಿಂಕ್ ಅನ್ನು ಸುಲಭವಾಗಿ ಪಡೆಯುತ್ತಾರೆ. ಅಥವಾ ಅವರ ಲಿಂಕ್ ನಿಮಗೆ ಸಿಗಬಹುದು.
ಈ ಲಿಂಕ್ ಅನ್ನು ತೆರೆದು ಇನ್‌ಪುಟ್ ಜಾಗದಲ್ಲಿ ಅವರು ನಿಮಗೆ ಸೀಕ್ರೇಟ್ ಮೆಸೇಜ್ ಕಳುಹಿಸಬಹುದು.
ಟೈಮ್‌ಲೈನ್ ವಿಭಾಗದಲ್ಲಿ ನಿಮಗೆ ಬಂದ ಸಂದೇಶವನ್ನು ಕೂಡ ನೀವು ಸುಲಭವಾಗಿ ನೋಡಬಹುದು.
Also Read: Tecno MegaPad 10 ಬರೋಬ್ಬರಿ 7000mAh ಬ್ಯಾಟರಿಯೊಂದಿಗೆ ಬಿಡುಗಡೆ! ವಿಶೇಷತೆಗಳೇನು ತಿಳಿಯಿರಿ!
ಕೊನೆಯದಾಗಿ ಇದರಲ್ಲಿ ನಿಮ್ಮ ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ (VoIP) ಫೀಚರ್ ಮೂಲಕ ಕೂಡ ಫೋನ್ ಕರೆ ಅಥವಾ ಮೆಸೇಜ್ ಅನ್ನು ಕಳುಹಿಸಬಹುದು. ಇದರಲ್ಲಿ ನೀವು ಕರೆ ಮಾಡಿದಾಗ ನಿಮ್ಮ ವಾಯ್ಸ್ ಸಹ ಡಿಜಿಟಲ್ ಸಿಗ್ನಲ್ ಆಗಿ ಪರಿವರ್ತಿಸಲಾಗುತ್ತದೆ. ಅಂತೆಯೇ ನಿಮ್ಮ ಡೆಸ್ಕ್‌ಟಾಪ್ ಕಂಪ್ಯೂಟರ್, ಫೋನ್ ಅಥವಾ ಹೆಚ್ಚಿನ ವೇಗದ ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವ ಯಾವುದರಲ್ಲೂ VoIP ಅನ್ನು ಬಳಸಿ ರಹಸ್ಯ ಮೆಸೇಜ್ ಕಳುಹಿಸಬಹುದು.