Instagram Tips: ಇನ್‌ಸ್ಟಾಗ್ರಾಮ್‌ನ ರೀಲ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಡೌನ್ಲೋಡ್ ಮಾಡೋದು ಹೇಗೆ?

Updated on 10-May-2023
HIGHLIGHTS

Instagram ರೀಲ್‌ಗಳನ್ನು ಸುಲಭವಾಗಿ ವೀಕ್ಷಿಸಬಹುದು ಮತ್ತು ಹಂಚಿಕೊಳ್ಳಬಹುದು.

Instagram ಇನ್‌ಸ್ಟಾಗ್ರಾಮ್‌ನ ರೀಲ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಡೌನ್ಲೋಡ್ ಮಾಡಲು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಬಳಸುವ ಅಗತ್ಯವಿಲ್ಲ.

ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಇಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ಗೆ Instagram ರೀಲ್‌ಗಳನ್ನು ನೀವು ಹೇಗೆ ಡೌನ್‌ಲೋಡ್ ಮಾಡಬಹುದು ಎಂಬುದು ಇಲ್ಲಿದೆ.

Instagram Tips: ಸಾಮಾನ್ಯವಾಗಿ ನೀವು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಥವಾ ರೀಲ್ ನೋಡುವುದು ಸಹಜ. ಆದರೆ ಅದರಲ್ಲಿ ಕೆಲವೊಂದು ನಿಮಗೆ ಹೆಚ್ಚು ಇಂಟ್ರೆಸ್ಟಿಂಗ್ ಆಗಿ ಸಹ ಕಾಣುತ್ತವೆ. ಅದೇ ಕ್ಷಣ ಡೌನ್ಲೋಡ್ ಆಯ್ಕೆಯ ಬಗ್ಗೆ ಯೋಚಿಸುವುದು ಅನಿವಾರ್ಯ. ಆದರೆ ಈ ಲೇಖನದಲ್ಲಿ ನೀವು ನೋಡವುವ ಯಾವುದಾದರು ಸರಿ ರೀಲ್ ಅನ್ನು ಒನ್ ಕ್ಲಿಕ್ ಮೂಲಕ ಡೌನ್ಲೋಡ್ ಮಾಡುವುದು ಹೇಗೆ ಎಂದು ತಿಳಿಯಿರಿ. ಏಕೆಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರಪಂಚದಾದ್ಯಂತ ರೀಲ್‌ಗಳು ಬೆಳೆಯುತ್ತಲೇ ಇವೆ ಎಂದು ಮೆಟಾ ಇತ್ತೀಚೆಗೆ ದೃಢಪಡಿಸಿದೆ.

ಒಂದೇ ಕ್ಲಿಕ್‌ನಲ್ಲಿ Insta Reels ಡೌನ್ಲೋಡ್ ಮಾಡೋದು ಹೇಗೆ?

ಪ್ಲಾಟ್‌ಫಾರ್ಮ್‌ನಲ್ಲಿ ರೀಲ್‌ಗಳನ್ನು ಸುಲಭವಾಗಿ ವೀಕ್ಷಿಸಬಹುದು ಮತ್ತು ಹಂಚಿಕೊಳ್ಳಬಹುದು. ಈ ಪ್ಲಾಟ್‌ಫಾರ್ಮ್‌ಗಳ ಹೊರಗೆ ಅವುಗಳನ್ನು ಹಂಚಿಕೊಳ್ಳುವುದು ಕಷ್ಟ. ಅನೇಕ ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳು ಒಂದೇ ಕ್ಲಿಕ್‌ನಲ್ಲಿ ಸುಲಭವಾಗಿ ರೀಲ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಅವುಗಳು ಬಳಕೆದಾರರ ಮಾಹಿತಿಯನ್ನು ಕದಿಯಬಹುದು ಮತ್ತು ಅವುಗಳಲ್ಲಿ ಹೆಚ್ಚಿನವು ಜಾಹೀರಾತುಗಳಿಂದ ತುಂಬಿ ಬಳಕೆದಾರರ ಅನುಭವವನ್ನು ಕಿರಿಕಿರಿ ಉಂಟು ಮಾಡುತ್ತವೆ. 

ಇನ್‌ಸ್ಟಾಗ್ರಾಮ್‌ನ ರೀಲ್‌ಗಳನ್ನು ಡೌನ್ಲೋಡ್ ಮಾಡೋದು ಹೇಗೆ?

  • ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Instagram ಅಪ್ಲಿಕೇಶನ್ ತೆರೆದು ನೀವು ಡೌನ್‌ಲೋಡ್ ಮಾಡಬೇಕಿರುವ ರೀಲ್ ಅನ್ನು ಪ್ಲೇ ಮಾಡಿ.
  • ಈಗ ಪೇಪರ್ ಪ್ಲೇನ್‌ನಂತೆ ಕಾಣುವ ಶೇರ್ (Share) ಐಕಾನ್ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮ್ಮ ಸ್ಟೋರಿಗೆ ಆಡ್ ರೀಲ್‌ಗಳ ಮೇಲೆ ಕ್ಲಿಕ್ ಮಾಡಿ
  • ಮುಂದಿನ ಪುಟದಲ್ಲಿ ಮೇಲಿನ ಬಲ ಮೂಲೆಯಲ್ಲಿರುವ 3 ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ
  • ಇದರಲ್ಲಿ ನಿಮಗೆ ಡ್ರಾ (Draw) ಮತ್ತು ಸೇವ್ (Save) ಆಯ್ಕೆ ನೋಡಬಹುದು. ಇದರಲ್ಲಿ ಸೇವ್ (Save) ಆಯ್ಕೆ ಮೇಲೆ ಕ್ಲಿಕ್ ಮಾಡಿ ಯಾವುದೇ ರೀಲ್ ಅನ್ನು ಉಚಿತ ಮತ್ತು ಸರಳವಾಗಿ ಡೌನ್ಲೋಡ್ ಮಾಡಬಹುದು.
  • ಈ ರೀತಿ ಈಗ ಯಾವುದೇ ರೀಲ್ ಅನ್ನು Instagram ಫೋಲ್ಡರ್‌ಗೆ ಡೌನ್‌ಲೋಡ್ ಮಾಡಲಾಗುತ್ತದೆ ಅದನ್ನು ಗ್ಯಾಲರಿ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದು.

ಯಾವುದೇ ಅಥರ್ಡ್ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬೇಕಿಲ್ಲ!

ಹೌದು ಈಗ ನೀವು ಇನ್‌ಸ್ಟಾಗ್ರಾಮ್‌ನ ರೀಲ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಡೌನ್ಲೋಡ್ ಮಾಡಲು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಬಳಸುವ ಅಗತ್ಯವಿಲ್ಲ. ಇಲ್ಲದೆ Instagram ನಲ್ಲಿ ರೀಲ್‌ಗಳನ್ನು ಡೌನ್‌ಲೋಡ್ ಮಾಡಲು ಒಂದು ಟ್ರಿಕ್ ಇದೆ. Android ಮತ್ತು iOS ಸಾಧನಗಳಲ್ಲಿ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಇಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ಗೆ Instagram ರೀಲ್‌ಗಳನ್ನು ನೀವು ಹೇಗೆ ಡೌನ್‌ಲೋಡ್ ಮಾಡಬಹುದು ಎಂಬುದು ಇಲ್ಲಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :