On Android device:
ಮೊದಲ ಪ್ಲೇ ಸ್ಟೋರಿನಿಂದ Timbre ಅಪ್ಲಿಕೇಶನನ್ನು ಸ್ಥಾಪಿಸಿಕೊಳ್ಳಿ ನಂತರ ಅದನ್ನು ತೆರೆದು ಅಪ್ಲಿಕೇಶನ್ ಒಳಗೆ ಮ್ಯೂಟ್ ಆಯ್ಕೆಯನ್ನು ನೋಡಲು ಕೆಳಗೆ ಸ್ಕ್ರಾಲ್ ಮಾಡಿ ಅದರ ಮೇಲೆ ಕ್ಲಿಕ್ ಮಾಡಿ. ಇದರ ಸಂಪಾದನೆಗಾಗಿ ವೀಡಿಯೊವನ್ನು ಆಯ್ಕೆ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಅಲ್ಲಿ ನೀವು ನಿಮ್ಮ ಸಾಧನದಲ್ಲಿನ ಗ್ಯಾಲರಿಗೆ ತೆರಳಿ ನೀವು ನಿಮಗೆ ಬೇಕಾದ ಆಯ್ಕೆ ಮಾಡಿದ ವೀಡಿಯೊವನ್ನು ಕ್ಲಿಕ್ ಮಾಡಿ. ಮತ್ತು ಅದನ್ನು ಅಪ್ಲಿಕೇಶನ್ಗೆ ಸೆಂಡ್ ಮಾಡಿಕೊಳ್ಳಲಾಗುತ್ತದೆ. ನಂತರ ಆಡಿಯೊವನ್ನು ತೆಗೆದುಹಾಕಲು ನೀವು ಮ್ಯೂಟ್ ಬಟನ್ ಕ್ಲಿಕ್ ಮಾಡಬೇಕು. ಪಾಪ್ಅಪ್ಗೆ ಅನುಮತಿಯನ್ನು ನೀಡಿರಿ ಮತ್ತು ಉಳಿಸು ಬಟನನ್ನು ಹಿಟ್ ಮಾಡಿ. ಈ ವೀಡಿಯೊವನ್ನು ನಿಮ್ಮ ಗ್ಯಾಲರಿ ಅಪ್ಲಿಕೇಶನ್ನಲ್ಲಿ ಉಳಿಸಲಾಗುವುದು. ಇದರಿಂದಾಗಿ ನೀವು ಅದನ್ನು ವೀಕ್ಷಿಸಬಹುದು ಅದು ಆಡಿಯೋ ಇಲ್ಲದೆ ಇರುತ್ತದೆ! ಈಗ ಇದರೊಂದಿಗೆ ನಿಮ್ಮ ಧ್ವನಿಯನ್ನು ಸೇರಿಸಿ ಸಂತೋಷಪಡಬವುದು.
On iOS device:
ಈಗ ನಿಮ್ಮ iOS ಸಾಧನದಲ್ಲಿ ಈಗಾಗಲೇ Video Mute ಎಂಬ ಅಪ್ಲಿಕೇಶನ್ ಅನ್ನು ಸ್ಥಾಪಿಸಿರುತ್ತದೆ ಇಲ್ಲದಿದ್ದರೆ ಸ್ಥಾಪಿಸಿಕೊಳ್ಳಿರಿ ಮತ್ತು ಈ ಅಪ್ಲಿಕೇಶನ್ ಒಳಗೆ ನಿಮ್ಮ ಸಾಧನದಿಂದ ತೋರಿಸಲಾದ ಮಾಧ್ಯಮದ ವಿಷಯವನ್ನು ವೀಡಿಯೊ ಆಯ್ಕೆಮಾಡಿ. ಇದರ ವೀಡಿಯೊದ ಆಡಿಯೊ ಮಟ್ಟವನ್ನು ಸೊನ್ನೆ ಅಥವಾ ನೀಲ್ಗೆ ಸ್ಲೈಡರ್ ಮೂಲಕ ಹೊಂದಿಸಿರಿ ನಂತರ ಪೂರ್ವವೀಕ್ಷಣೆಯ ಮೇಲ್ಭಾಗದಲ್ಲಿ ಸೆಂಡ್ ಬಟನನ್ನು ಹಿಟ್ ಮಾಡಿ. ಸಂಸ್ಕರಿಸಿದ ನಂತರ ನೀವು ವೀಡಿಯೊವನ್ನು ನಿಮ್ಮ ಸಾಧನಕ್ಕೆ ಉಳಿಸಬಹುದು ಮತ್ತು ನಂತರ ಅದನ್ನು ಲೋಡ್ ಮಾಡಿ ಉಪಯೋಗಿಸಿರಿ.
On Windows device:
ನಾವು ಆಡಿಯೋ ತೆಗೆಯುವ ಪ್ರಕ್ರಿಯೆಗಾಗಿ ಅತ್ಯಂತ ಜನಪ್ರಿಯ ವೀಡಿಯೊ ಪ್ಲೇಯರ್ VLC ಯನ್ನು ಬಳಸುತ್ತೇವೆ. ಏಕೆಂದರೆ ಇದು ತುಂಬ ಸರಳವಾಗಿ VLC ಯಾ ಮೀಡಿಯಾ ಪ್ಲೇಯರನ್ನು ಪ್ರಾರಂಭಿಸಿದೆ. ಅಲ್ಲದೆ ಇದರ ಮೆನ್ಯು ಬಾರ್ನಿಂದ ಮೀಡಿಯಾ ಆಯ್ಕೆಗೆ ಹೋಗಿರಿ ಕಾನ್ವರ್ಟ್ / ಸೇವ್ ಆಯ್ಕೆಯನ್ನು ಕ್ಲಿಕ್ ಮಾಡಿ. ಸೇರಿಸು ಗುಂಡಿಯನ್ನು ಬಳಸಿ ನೀವು ಆಡಿಯೊವನ್ನು ತೆಗೆದುಹಾಕಲು ಬಯಸುವ ಮಾಧ್ಯಮ ಅಥವಾ ವೀಡಿಯೊ ಫೈಲನ್ನು ಸೇರಿಸುತ್ತದೆ. ಈ ಪ್ಯಾನಲ್ನಲ್ಲಿರುವ ಪರಿವರ್ತನೆ / ಉಳಿಸು ಬಟನ್ ಕ್ಲಿಕ್ ಮಾಡಿ ಮತ್ತು ನಂತರ ಮುಂದಿನ ಪ್ಯಾನೆಲ್ನಲ್ಲಿ ಡ್ರಾಪ್-ಡೌನ್ ಕ್ಷೇತ್ರದ ಬಳಿ ಪರಿವರ್ತನ ವಿಭಾಗಕ್ಕೆ ಪರಿಕರಗಳನ್ನು ಕ್ಲಿಕ್ ಮಾಡಿ. ಈಗ ಆಡಿಯೊ ಕೋಡೆಕ್ ವಿಭಾಗವನ್ನು ಆರಿಸಿ ನಂತರ ಆಡಿಯೋ ಸಬ್ಹೆಡಿಂಗ್ ಅನ್ನು ಅನ್ಚೆಕ್ ಮಾಡಿ. ಸೆಟ್ಟಿಂಗ್ಗಳನ್ನು ಉಳಿಸಿ ಮತ್ತು ನೀವು ಹಿಂದಿನ ಪುಟಕ್ಕೆ ಹಿಂತಿರುಗಿಸುವಾಗ ಫೈಲ್ ಗಮ್ಯಸ್ಥಾನವನ್ನು ತುಂಬಿರಿ ಮತ್ತು ನಂತರ ಸ್ಟಾರ್ಟ್ ಬಟನ್ ಕ್ಲಿಕ್ ಮಾಡಿ. ಆಯ್ಕೆಮಾಡಿದ ಗಮ್ಯಸ್ಥಾನಕ್ಕೆ ವೀಡಿಯೊ ಫೈಲ್ ಅನ್ನು ಪರಿವರ್ತಿಸಲಾಗುತ್ತದೆ ಮತ್ತು ಉಳಿಸಲಾಗುತ್ತದೆ.