ವಾಟ್ಸಾಪ್ (WhatsApp) ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು ಇತ್ತೀಚಿಗೆ ಹತ್ತು-ಹಲವು ಫೀಚರ್ಗಳನ್ನ ಜಾರಿಗೆ ತಂದಿದೆ. ವಾಟ್ಸಾಪ್ನ ಬಳಕೆದಾರರು ಇತ್ತೀಚಿಗೆ ಬಿಡುಗಡೆಯಾಗಿರುವ ಹಲವಾರು ಹೊಸ ಫೀಚರ್ಗಳ ಉಪಯೋಗವನ್ನು ಈಗಾಗಲೇ ಪಡೆಯುತ್ತಿದ್ದಾರೆ. ಈ ಮೂಲಕ ನಿಮ್ಮ ಮನೆ ಅಥವಾ ಆಫೀಸ್ ಎಲೆಕ್ಟ್ರಿಸಿಟಿ ಬಿಲ್ ಕಟ್ಟಲು ನಿಮಗೆ ಕಚೇರಿಗೆ ಹೋಗಬೇಕಿಲ್ಲ ಮನೆಯಲ್ಲೇ ಕುಳಿತು ವಾಟ್ಸಾಪ್ (WhatsApp) ಅಲ್ಲಿ ವಿದ್ಯುತ್ ಬಿಲ್ (Electricity Bill) ಪಾವತಿ ಮಾಡುವುದು. ಇದನ್ನು ಮಾಡುವುದು ಹೇಗೆ ಎಂಬುದನ್ನು ಹಂತ ಹಂತವಾಗಿ ತಿಳಿಯೋಣ.
ಎಲೆಕ್ಟ್ರಿಸಿಟಿ ಬಿಲ್ ಅನ್ನು ಇದೀಗ ವಾಟ್ಸಾಪ್ ನಲ್ಲಿ ಪಾವತಿ ಮಾಡಬಹುದು ಎಂಬ ಸುದ್ದಿಯಾಗಿದೆ. ವಿದ್ಯುತ್ ಬಿಲ್ ಪಾವತಿ ಮಾಡಲು ಜನರು ಇನ್ನು ಮುಂದೆ ವಾಟ್ಸಾಪ್ ಅನ್ನೇ ಬಳಸಬಹುದು. ವಾಟ್ಸಾಪ್ ನ ಈ ಫೀಚರ್ ಜನರಿಗೆ ಉಪಯೋಗವಾಗಲಿದೆ. ಮಧ್ಯಪ್ರದೇಶದ ವಿದ್ಯುತ್ ಗ್ರಾಹಕರು ಈಗಾಗಲೇ ವಿದ್ಯುತ್ ಬಿಲ್ ಗಳನ್ನೂ ವಾಟ್ಸಾಪ್ ಮೂಲಕವೇ ಪಾವತಿ ಮಾಡುತ್ತಿದ್ದಾರೆ.
ವಿದ್ಯುತ್ ಬಿಲ್ ಪಾವತಿ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಪ್ರದೇಶ ವಿದ್ಯುತ್ ವಿತರಣಾ ಕಂಪನಿಯ ಅಧಿಕಾರಿ ಒಬ್ಬರು ಡಿಜಿಟಲ್ ಪಾವತಿಯನ್ನು ಉತ್ತೇಜಿಸುವಲ್ಲಿ ಬೇರೆಯವರಿಗಿಂತ ನಾವು ಮುಂದೆ ಇದ್ದೇವೆ. ವಿದ್ಯುತ್ ಬಿಲ್ ಪಾವತಿಸಲು ಹಲವಾರು ಆಯ್ಕೆಗಳಿವೆ. ಇವುಗಳಲ್ಲಿ ವಾಟ್ಸಾಪ್ ಪೇ ಕೂಡ ಒಂದು ಆಯ್ಕೆಯಾಗಿದೆ.
ಬಳಕೆದಾರರು ವಾಟ್ಸಾಪ್ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಲು ತಮ್ಮ ಫೋನ್ ನಲ್ಲಿ ಕಂಪನಿಯ ಟೋಲ್ ಫ್ರಿ ಸಂಖ್ಯೆ 075525512222 ಅನ್ನು ಸೇವ್ ಮಾಡಬೇಕು. ಇದರ ನಂತರ ಈ ಟೋಲ್ ಫ್ರಿ ಸಂಖ್ಯೆಗೆ ಚಾಟ್ ಮಾಡಬಹುದು. ಬಳಕೆದಾರರು ವೀಕ್ಷಿಸಿ ಮತ್ತು ಬಿಲ್ ಪಾವತಿ ಆಯ್ಕೆಯನ್ನು ಬಳಸಿಕೊಂಡು ನಿಮ್ಮ ಪಾವತಿಯನ್ನು ಪೂರ್ಣಗೊಳಿಸಲು ಸೂಚನೆಗಳೊಂದಿಗೆ ಪ್ರಾಂಪ್ಟ್ ಅನ್ನು ಸ್ವೀಕರಿಸಬೇಕು. ಪೇಮೆಂಟ್ ಪೂರ್ಣಗೊಂಡ ಬಳಿಕ ನೀವು ದೃಡೀಕರಣ ಮೆಸೇಜ್ ಅನ್ನು ಪಡೆಯುತ್ತೀರಿ.