PVC Aadhaar: ಕೇವಲ 50 ರೂಗಳಿಗೆ ಸಿಗುತ್ತೆ ಈ ಸ್ಮಾರ್ಟ್ ಪಿವಿಸಿ ಆಧಾರ್! ಪಡೆಯೋದು ಹೇಗೆ?

PVC Aadhaar: ಕೇವಲ 50 ರೂಗಳಿಗೆ ಸಿಗುತ್ತೆ ಈ ಸ್ಮಾರ್ಟ್ ಪಿವಿಸಿ ಆಧಾರ್! ಪಡೆಯೋದು ಹೇಗೆ?
HIGHLIGHTS

ಮನೆಯಲ್ಲೇ ಕುಳಿತು PVC Aadhaar ಅನ್ನು ಕೇವಲ 50 ರೂಗಳನ್ನು ಖರ್ಚು ಮಾಡಿ ಪಡೆಯಬಹುದು.

ಭಾರತದಲ್ಲಿ ಆಧಾರ್ ಕಾರ್ಡ್ (Aadhaar Card) ಅನ್ನು ಹೆಚ್ಚಾಗಿ ವಿಳಾಸ ಪುರಾವೆಯಾಗಿ ಬಳಸಲಾಗುತ್ತಿದೆ.

ಭಾರತದಲ್ಲಿ ನೀವೊಂದು ಹೊಸ ಬ್ಯಾಂಕ್ ಖಾತೆಯನ್ನು ತೆರೆಯಲು ಅಥವಾ ಹೊಸ ಸಿಮ್ ಕಾರ್ಡ್ ಪಡೆಯಲು ಅಥವಾ ಯಾವುದೇ ಸರ್ಕಾರಿ ಯೋಜನೆಯ ಲಾಭ ಪಡೆಯಬೇಕೆಂದು ಬಯಸಿದರೆ ಈ ಆಧಾರ್ ಸಂಖ್ಯೆ ಅತಿ ಮುಖ್ಯವಾಗಿರುತ್ತದೆ. ಏಕೆಂದರೆ ಪ್ರಸ್ತುತ ಭಾರತದಲ್ಲಿ ಆಧಾರ್ ಕಾರ್ಡ್ (Aadhaar Card) ಅನ್ನು ಹೆಚ್ಚಾಗಿ ವಿಳಾಸ ಪುರಾವೆಯಾಗಿ ಬಳಸಲಾಗುತ್ತಿದೆ. ಇದಲ್ಲದೇ ಮಕ್ಕಳ ದಾಖಲಾತಿಗೂ ಆಧಾರ್ ಕಾರ್ಡ್ ಅಗತ್ಯವಿದೆ. ಇಂತಹ ಮಹತ್ವದ ದಾಖಲೆಯಾಗಿರುವ ಈ ಆಧಾರ್ ಈಗ ಸದಾ ನಿಮ್ಮೊಂದಿಗೆ ಪಾಕೆಟ್ ಸ್ನೇಹಿಯಂತೆ ಜೊತೆಗಿಡಲು ಹೆಚ್ಚು ಭದ್ರತೆಗಳನ್ನು ಹೊಂದಿರುವ ಈ PVC Aadhaar ಮನೆಯಲ್ಲೇ ಕುಳಿತು ಆರ್ಡರ್ ಮಾಡಿ ಪಡೆಯಬಹುದು.

Also Read: ಭಾರತದಲ್ಲಿ POCO X6 Series ಲಾಂಚ್ ಡೇಟ್ ಫಿಕ್ಸ್! ಇಲ್ಲಿದೆ ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು?

ಕೇವಲ 50 ರೂಪಾಯಿಗಳಿಗೆ PVC Aadhaar ಲಭ್ಯ

ಹೊಸ ಪಾಲಿವಿನೈಲ್ ಕ್ಲೋರೈಡ್ (PVC) ಕಾರ್ಡ್ ಇದು ನಿಖರವಾಗಿ ಎಟಿಎಂ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್‌ನಂತೆ ಕಾಣುತ್ತದೆ. ಅದನ್ನು ನೀವು ನಿಮ್ಮ ವ್ಯಾಲೆಟ್‌ನಲ್ಲಿ ಸುಲಭವಾಗಿ ಕೊಂಡೊಯ್ಯಬಹುದು. ಈಗ ಹೆಚ್ಚಿನ ಜನರು PVC ಆಧಾರ್ ಕಾರ್ಡ್ ಅನ್ನು ಹೊಂದಿದ್ದಾರೆ. ಇದಕ್ಕಾಗಿ ನೀವು ಕೇವಲ 50 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಇದರಲ್ಲಿ ಸ್ಪೀಡ್ ಪೋಸ್ಟ್ ವೆಚ್ಚವೂ ಸೇರಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈಗ ಆಧಾರ್ ಕಾರ್ಡ್‌ನ ಪಾಲಿವಿನೈಲ್ ಕ್ಲೋರೈಡ್ (PVC) ಕಾರ್ಡ್ ಅನ್ನು ನೀಡುತ್ತಿದೆ.

ಪಿವಿಸಿ ಆಧಾರ್ ಕಾರ್ಡ್ ಆರ್ಡರ್ ಮಾಡುವುದು ಹೇಗೆ?

➥ಮೊದಲು UIDAI ನ ಅಧಿಕೃತ ವೆಬ್‌ಸೈಟ್ ತೆರೆಯಿರಿ (https://uidai.gov.in) ನಂತರ ನನ್ನ ಆಧಾರ್ ವಿಭಾಗ ಆರ್ಡರ್ ಆಧಾರ್ PVC ಕಾರ್ಡ್ ಕ್ಲಿಕ್ ಮಾಡಿ.

➥ನೀವು ಆರ್ಡರ್ ಆಧಾರ್ PVC ಕಾರ್ಡ್ ಅನ್ನು ಕ್ಲಿಕ್ ಮಾಡಿದ ತಕ್ಷಣ ನೀವು 12 ಅಂಕಿಗಳ ಆಧಾರ್ ಸಂಖ್ಯೆ ಅಥವಾ 16 ಅಂಕಿಯ ವರ್ಚುವಲ್ ಐಡಿ ಅಥವಾ 28 ಅಂಕಿಯ EID ಅನ್ನು ನಮೂದಿಸಬೇಕಾಗುತ್ತದೆ.

➥ಈ ಮೂರರಲ್ಲಿ ಯಾವುದಾದರೂ ಒಂದನ್ನು ನಮೂದಿಸಬೇಕು. ಜಾಹೀರಾತು ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ ಕೆಳಗಿನ ಭದ್ರತಾ ಕೋಡ್ ಅಥವಾ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.

➥ಇದರ ನಂತರ ಕೆಳಗಿನ Send OTP ಮೇಲೆ ಕ್ಲಿಕ್ ಮಾಡಿ. ಅದರ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ನಮೂದಿಸಿದ ನಂತರ ಕೆಳಗೆ ತೋರಿಸಿರುವ ಸಲ್ಲಿಸು ಕ್ಲಿಕ್ ಮಾಡಿ.

➥ಅದರ ನಂತರ PVC ಕಾರ್ಡ್‌ನ ಪ್ರಿವ್ಯೂ ಸ್ಕ್ರಿನ್ ಮೇಲೆ ಕಾಣಿಸುತ್ತದೆ ಇದರಲ್ಲಿ ನಿಮ್ಮ ಆಧಾರ್‌ಗೆ ಸಂಬಂಧಿಸಿದ ವಿವರಗಳನ್ನು ಕಾಣಬಹುದು.

➥ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಡೇಟಾಬೇಸ್‌ನೊಂದಿಗೆ ನೋಂದಾಯಿಸದಿದ್ದರೆ ನಂತರ ವಿನಂತಿ OTP ಮುಂದೆ ನೀಡಿರುವ ಸಂಬಂಧಿತ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

PVC Aadhaar

➥ಈ ಆಯ್ಕೆಯನ್ನು ಆಯ್ಕೆ ಮಾಡಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೇಳಲಾಗುತ್ತದೆ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ನೀವು Send OTP ಬಟನ್ ಅನ್ನು ಕ್ಲಿಕ್ ಮಾಡಬೇಕು.

➥ಅಂತಿಮವಾಗಿ ಪಾವತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ವಿವಿಧ ಡಿಜಿಟಲ್ ಮಾಧ್ಯಮಗಳ ಮೂಲಕ ಒಂದು ಕಾರ್ಡ್‌ಗೆ ರೂ 50 ಪಾವತಿಸಬೇಕಾಗುತ್ತದೆ.

➥ಅದರ ನಂತರ ಆಧಾರ್ ಪಿವಿಸಿ ಕಾರ್ಡ್ ಅನ್ನು ಆರ್ಡರ್ ಮಾಡಲಾಗುತ್ತದೆ. ಇದು ಸಾಮನ್ಯವಾಗಿ 5 – 10 ವರ್ಕಿಂಗ್ ದಿನಗಳಲ್ಲಿ ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ PVC ಆಧಾರ್ ಕಾರ್ಡ್ ನಿಮ್ಮ ಮನೆಗೆ ತಲುಪುತ್ತದೆ.

ಪಿವಿಸಿ ಆಧಾರ್ ಕಾರ್ಡ್ ಆಧುನಿಕ ಭದ್ರತಾ ಫೀಚರ್ಗಳು

ಈ ಪಿವಿಸಿ ಆಧಾರ್ ಕಾರ್ಡ್ ಹೆಚ್ಚು ಭದ್ರತೆಗಾಗಿ ಹೊಲೊಗ್ರಾಮ್, ಗಿಲೋಚೆ ಪ್ಯಾಟರ್ನ್, ಘೋಸ್ಟ್ ಇಮೇಜ್ ಮತ್ತು ಮೈಕ್ರೋಟೆಕ್ಸ್ಟ್ ವೈಶಿಷ್ಟ್ಯಗಳೊಂದಿಗೆ ಒದಗಿಸಲಾಗಿದೆ. ಇದನ್ನು QR ಕೋಡ್ ಮೂಲಕ ಕಾರ್ಡ್‌ನ ದೃಢೀಕರಣವನ್ನು ತಕ್ಷಣವೇ ದೃಢೀಕರಿಸಬಹುದು. ಇದರಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಇರುವುದಿಲ್ಲ. ಈಗಾಗಲೇ ಹೇಳಿರುವಂತೆ ಇದು ಹರಿದುಹೋಗುವುದು, ಡ್ಯಾಮೇಜ್ ಆಗುವುದು, ನೀರಿನಿಂದ ಒದ್ದೆಯಾಗೋದು ಇಂತಹ ಕಾರಣಗಳಿಗೆ PVC Aadhaar ಅವಕಾಶ ನೀಡೋದಿಲ್ಲ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo