ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ Duplicate Driving Licence ಪಡೆಯುವುದು ಹೇಗೆ ತಿಳಿಯಿರಿ!

ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ Duplicate Driving Licence ಪಡೆಯುವುದು ಹೇಗೆ ತಿಳಿಯಿರಿ!
HIGHLIGHTS

ಇದೀಗ ಆನ್‌ಲೈನಿನಲ್ಲೇ ನಕಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಧ್ಯವಿದೆ

ಯಾವುದೇ ವಾಹನವನ್ನು ಚಾಲನೆ ಮಾಡಿದರೂ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಲೇಬೇಕು

ಡ್ರೈವಿಂಗ್ ಲೈಸೆಸ್ ಈಗ ಕೇವಲ ವಾಹನ ಚಲಾಯಿಸಲು ಇರುವ ಪರವಾನಗಿ ಮಾತ್ರವಲ್ಲದೇ ಒಂದು ಗುರುತಿನ ಐಡಿ ಕಾರ್ಡ್ ಕೂಡ ಆಗಿದೆ.

ನಿಮ್ಮ ಡ್ರೈವಿಂಗ್ ಲೈಸೆನ್ಸ್ ದಾಖಲೆಯನ್ನು ಕಳೆದುಕೊಂಡಿದ್ದರೆ ಹಾಗೂ ನಿಮ್ಮ ಡ್ರೈವಿಂಗ್ ಲೈಸೆಸ್ಸ್‌ನ ಯಾವುದೇ ನಕಲು ಪ್ರತಿಗಳನ್ನು ಹೊಂದಿಲ್ಲದಿದ್ದರೆ ಚಿಂತಿಸಬೇಡಿ. ಏಕೆಂದರೆ ಇದೀಗ ಆನ್‌ಲೈನಿನಲ್ಲೇ ಓರಿಜಿನಲ್ ಡಿಎಲ್‌ ಕಳೆದು ಹೋದರೇ ಅಥವಾ ಹಾಳಾಗಿದ್ದರೆ ನಕಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಧ್ಯವಿದೆ. ಯಾವುದೇ ವಾಹನವನ್ನು ಚಾಲನೆ ಮಾಡಿದರೂ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಲೇಬೇಕು ಹಾಗೂ ಡ್ರೈವಿಂಗ್ ಲೈಸೆಸ್ ಈಗ ಕೇವಲ ವಾಹನ ಚಲಾಯಿಸಲು ಇರುವ ಪರವಾನಗಿ ಮಾತ್ರವಲ್ಲದೇ ಒಂದು ಗುರುತಿನ ಐಡಿ ಕಾರ್ಡ್ ಕೂಡ ಆಗಿದೆ. ಹಾಗಾದರೆ ಆನ್‌ಲೈನ್‌ ಮೂಲಕ ನಕಲಿ ಡ್ರೈವಿಂಗ್ ಲೈಸೆಸ್ಸ್ ದಾಖಲೆಯನ್ನು ಪಡೆಯುವುದು ಹೇಗೆ ತಿಳಿಯೋಣ..

ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮಾನ್ಯವಾಗಿದ್ದರೆ ಮತ್ತು ಅದು ಕದ್ದಿದ್ದರೆ ಅಥವಾ ಕಳೆದುಹೋದರೆ ನೀವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಬೇಕಾಗುತ್ತದೆ ಮತ್ತು ನಕಲಿ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ವರದಿಯು ಪ್ರಮುಖ ದಾಖಲೆಯಾಗಿದೆ. ನಕಲಿ ಡಿಎಲ್‌ಗಾಗಿ ಅರ್ಜಿ ಸಲ್ಲಿಸಿದಾಗ ನಿಮಗೆ ಈ ಎಫ್‌ಐಆರ್‌ನ ನಕಲು ಅಗತ್ಯ ಇರುತ್ತದೆ. ಆದರೆ ಒಂದು ವೇಳೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಹರಿದು ಹೋಗಿದ್ದರೇ ಅಥವಾ ಹಾಳಾಗಿದ್ದರೇ ಇಂತಹ ಸಂದರ್ಭದಲ್ಲಿ ನಕಲಿ ಡಿಎಲ್‌ ಪಡೆಯಲು ಅರ್ಜಿ ಜೊತೆಗೆ ಓರಿಜಿನಲ್ ಡಿಎಲ್ ಅನ್ನು ಸಲ್ಲಿಸಬೇಕಾಗುತ್ತದೆ. ಈ ವಿಷಯಗಳನ್ನು ತಿಳಿದು ನೀವು ಆನ್‌ಲೈನ್ ಮೂಲಕ ನಕಲಿ DL ಪಡೆಯಲು ಅರ್ಜಿ ಸಲ್ಲಿಸಲು ಈ ಕ್ರಮಗಳನ್ನು ಪಾಲಿಸಬೇಕು.

ಡ್ರೈವಿಂಗ್ ಲೈಸೆಸ್ಸ್‌ನ ನಕಲು ಪ್ರತಿ ಪಡೆಯುವುದು ಹೇಗೆ? 

ಹಂತ 1: ಮೊದಲು ರಸ್ತೆ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ (https://parivahan.gov.in/parivahan/) ಭೇಟಿ ನೀಡಿ. 

ಹಂತ 2: ನಂತರ ಅಲ್ಲಿ ನೀವು ಡ್ರಾಪ್ ಡೌನ್ ಮೆನುವಿನಲ್ಲಿ ಸೇವೆಯನ್ನು ತೆಗೆದುಕೊಳ್ಳಬೇಕಾದ ರಾಜ್ಯವನ್ನು ಆಯ್ಕೆ ಮಾಡಿ 

ಹಂತ 3: ಮುಂದಿನ ವಿಂಡೋದಲ್ಲಿ ಸರ್ವಿಸ್ ಆನ್ ಡ್ರೈವಿಂಗ್ ಲೈಸೆನ್ಸ್ ಆಯ್ಕೆಯನ್ನು ಆಯ್ಕೆ ಮಾಡಿ

ಹಂತ 4: ನಂತರ ದಯವಿಟ್ಟು ಆನ್‌ಲೈನ್‌ನಲ್ಲಿ ಅನ್ವಯಿಸು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. 

ಹಂತ 5: ಕೆಳಗಿನ ಸ್ಕ್ರೀನ್ ಮೇಲೆ ಎಲ್ಲ ವಿವರಗಳನ್ನು ಓದಿ ಮತ್ತು ಮುಂದಿನ ಪರದೆಯನ್ನು ಪಡೆಯಲು ಮುಂದುವರಿಸಿ ಒತ್ತಿರಿ.

ಹಂತ 6: ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ LLD ಫಾರ್ಮ್ ಅನ್ನು ಭರ್ತಿ ಮಾಡಿ.

ಹಂತ 7: ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ನಿಮ್ಮ ಪ್ರಿಂಟ್ ಔಟ್ ತೆಗೆದುಕೊಂಡು ಅದನ್ನು ಇರಿಸಿಕೊಳ್ಳಿ. 

ಇದರೊಂದಿಗೆ ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿದ ಬಳಿಕ ಈ ಫಾರ್ಮ್ ಅನ್ನು RTO ಕಚೇರಿಗೆ ಹೋಗಿ ಸಲ್ಲಿಸಬೇಕು. ಹಾಗಾಗಿ ಸ್ವೀಕೃತಿ ಸೇರಿದಂತೆ ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಂಡು 11:30 a.m. ಮೊದಲು ಹತ್ತಿರದ RTO ಕಚೇರಿಗೆ ಹೋಗಿ ಮತ್ತು RTO ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸಿ. ಪಾವತಿಸಬೇಕಾದ ಶುಲ್ಕದ ಮೊತ್ತವನ್ನು ಅಧಿಕಾರಿಗಳು ಸಲಹೆ ನೀಡುತ್ತಾರೆ. ಸೂಕ್ತವಾದ ಕೌಂಟರ್‌ನಲ್ಲಿ ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಿ ಈ ಪ್ರಕ್ರಿಯೆ ಮುಗಿದ 30 ದಿನಗಳ ನಂತರ ನೀವು ನಕಲು DL ಅನ್ನು ಪಡೆಯುತ್ತೀರಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo