ನಿಮಗೊತ್ತಾ UPI ಪಿನ್ ಇಲ್ಲದೆಯೂ ನಿಮ್ಮ ಫೋನ್‍ಗಳಿಂದ ಪೇಮೆಂಟ್ ಮಾಡಬಹುದು! ಅದೆಷ್ಟು ಸರಿ..?

Updated on 12-May-2023
HIGHLIGHTS

UPI ಲೈಟ್ ಸಕ್ರಿಯ ಅಥವಾ ಸೆಟಪ್ ಆದ ನಂತರ ಬಳಕೆದಾರರು PIN ಇಲ್ಲದೆಯೇ ರೂ 200 ರವರೆಗಿನ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.

UPI ಲೈಟ್ ಅನ್ನು ಬಳಸಲು ಬಳಕೆದಾರರು ತಮ್ಮ Paytm ವ್ಯಾಲೆಟ್‌ನಲ್ಲಿ ಹಣವನ್ನು ಹೊಂದಿರಬೇಕು.

iPhone ನಲ್ಲಿ Paytm UPI ಲೈಟ್ ಬಳಸಲು ಕೆಳಗೆ ನೀಡಿದ ಹಂತಗಳನ್ನು ಅನುಸರಿಸಿ.

UPI Lite: ಸಾಮನ್ಯವಾಗಿ ನೀವು ಯಾವುದೇ ಪೇಮೆಂಟ್ ಮಾಡಲು ಮೊತ್ತದ ನಂತರ ನಿಮ್ಮ ಪಾಸ್ವರ್ಡ್ ಅಥವಾ ಪಿನ್ ಹಾಕುವುದು ಅನಿವಾರ್ಯವಾಗಿದೆ. ಆದರೆ ಈಗ ನೀವು  ಐಫೋನ್ ಅಥವಾ ಆಂಡ್ರಾಯ್ಡ್ ಫೋನ್ಗಳನ್ನು ಬಳಸಿ ಯಾವುದೇ ಪಿನ್ ಅಥವಾ ಪಾಸ್ವರ್ಡ್ ಇಲ್ಲದೆಯೇ ಪೇಮೆಂಟ್ ಮಾಡಲು ಅವಕಾಶವಿದೆ. ಆದರೆ ಜನಸಾಮಾನ್ಯರ ಪ್ರಶ್ನೆ ಎಂದರೆ ಈ ಸೇವೆ ಅದೆಷ್ಟರ ಮಟ್ಟಕ್ಕೆ ಸರಿ ಅನ್ನೋದು? ಏಕೆಂದರೆ ನಿಮ್ಮ ಸ್ನೇಹಿತರಲ್ಲಿ ಅಥವಾ ಮನೆಯಲ್ಲಿ ಅಪ್ಪಿತಪ್ಪಿ ನಿಮ್ಮ ಫೋನ್ ಬೇರೆಯವದರ ಕೈ ಸೇರಿದರೆ ನಿಮ್ಮ ಯಾವುದೇ ಅಪ್ಪಣೆಯಿಲ್ಲದೆ ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಮಾಡುವುದು ಸುಲಭದ ಕೆಲಸವಾಗಿದೆ. ಆದರೂ ಸಹ ಸರ್ಕಾರ UPI Lite ಎನ್ನುವ ಹೊಸ ಸೇವೆಯನ್ನು ಈಗಾಗಲೇ ಬಿಡುಗಡೆಗೊಳಿಸಿದೆ.

UPI ಲೈಟ್ ಎಂದರೇನು?

UPI ಲೈಟ್ ಎಂಬುದು ಆನ್-ಡಿವೈಸ್ ವ್ಯಾಲೆಟ್‌ನಂತೆ ಕಾರ್ಯನಿರ್ವಹಿಸುತ್ತದೆ. ನೀವು ಇದರಲ್ಲಿ 2,000 ರೂಪಾಯಿಗಳವರೆಗೆ ಹಣವನ್ನು ಕಳುಹಿಸಬಹುದು. Paytm ತನ್ನ ಅಪ್ಲಿಕೇಶನ್‌ನಲ್ಲಿ UPI ಲೈಟ್ ಅನ್ನು ಪರಿಚಯಿಸಿದ ಮೊದಲ ಪಾವತಿ ಬ್ಯಾಂಕ್ ಆಗಿದೆ. iOS ಬಳಕೆದಾರರು ಈಗ UPI ಲೈಟ್ ಅನ್ನು ಸಹ ಬಳಸಬಹುದು. UPI ಲೈಟ್ ಸಕ್ರಿಯ ಅಥವಾ ಸೆಟಪ್ ಆದ ನಂತರ ಬಳಕೆದಾರರು PIN ಇಲ್ಲದೆಯೇ ರೂ 200 ರವರೆಗಿನ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. UPI ಲೈಟ್ ಅನ್ನು ಬಳಸಿಕೊಂಡು ಬಳಕೆದಾರರು ದಿನಕ್ಕೆ ಎರಡು ಬಾರಿ ರೂ 2,000 ವರೆಗೆ ಹಣವನ್ನು ಕಳುಹಿಸಬಹುದು.

UPI ಲೈಟ್ ಬಳಸುವುದು ಹೇಗೆ?

UPI ಲೈಟ್ ಅನ್ನು ಬಳಸಲು ಬಳಕೆದಾರರು ತಮ್ಮ Paytm ವ್ಯಾಲೆಟ್‌ನಲ್ಲಿ ಹಣವನ್ನು ಹೊಂದಿರಬೇಕು. ನಂತರ ಅವರು ಯಾರಿಗಾದರೂ ಹಣವನ್ನು ಪಾವತಿ ಮಾಡಬಹುದು. ಇದಕ್ಕಾಗಿ ಪಿನ್ ಅನ್ನು ಮತ್ತೆ-ಮತ್ತೆ ನಮೂದಿಸುವ ಅಗತ್ಯವಿಲ್ಲ. iPhone ನಲ್ಲಿ Paytm UPI ಲೈಟ್ ಬಳಸಲು ಕೆಳಗೆ ನೀಡಿದ ಹಂತಗಳನ್ನು ಅನುಸರಿಸಿ.

• ಮೊದಲನೆಯದಾಗಿ ನೀವು Paytm ಅಪ್ಲಿಕೇಶನ್ ಅನ್ನು ತೆರೆಯಬೇಕು.

• ನಂತರ ನೀವು ಹೋಮ್ ಸ್ಕ್ರೀನ್‌ಗೆ ಹೋಗಿ UPI ಲೈಟ್ ಐಕಾನ್ ಅನ್ನು ಕ್ಲಿಕ್ ಮಾಡಬೇಕು.

• ಇದರ ನಂತರ ನೀವು ನಿಮ್ಮ ಬ್ಯಾಂಕ್ ಖಾತೆ ಡೇಟಾವನ್ನು ನಮೂದಿಸಬೇಕಾಗುತ್ತದೆ.

• ನಿಮ್ಮ UPI ಲೈಟ್ ವ್ಯಾಲೆಟ್‌ಗೆ ಹಣವನ್ನು ಹಾಕಿ ಆನ್‌ಲೈನ್‌ನಲ್ಲಿ ಪಾವತಿಸುವಾಗ UPI ಲೈಟ್ ಆಯ್ಕೆ ಮಾಡಿ.

• ಇದರ ನಂತರ ಹಣವನ್ನು ಕಳುಹಿಸಲು ಸ್ವೀಕರಿಸುವವರ UPI ಐಡಿಯನ್ನು ನಮೂದಿಸಿ. QR ಕೋಡ್ ಅನ್ನು ಸಹ ಸ್ಕ್ಯಾನ್ ಮಾಡಬಹುದು.

• ನಂತರ ನೀವು ಪಾವತಿ ಮಾಡಲು ಬಯಸುವ ಮೊತ್ತವನ್ನು ನಮೂದಿಸಿ ನಂತರ ಪೇ ಮೇಲೆ ಕ್ಲಿಕ್ ಮಾಡಿ.

Paytm ಪೇಮೆಂಟ್ಸ್ ಬ್ಯಾಂಕ್ ಬಿಡುಗಡೆ

ಈ ಸೇವೆಯನ್ನು ಮೊದಲಿಗೆ Paytm UPI ಲೈಟ್ ಬೆಂಬಲವನ್ನು ಅಂತಿಮವಾಗಿ Paytm ಪೇಮೆಂಟ್ಸ್ ಬ್ಯಾಂಕ್ ಬಿಡುಗಡೆ ಮಾಡಿದೆ. UPI ಲೈಟ್‌ನ ಈ ಹೊಸ ಫೀಚರ್‌ನಲ್ಲಿ UPI PIN ಅನ್ನು ಬಳಕೆ ಮಾಡದೆಯೇ iPhone ಬಳಕೆದಾರರು ಪಾವತಿಗಳನ್ನು ಮಾಡಬಹುದು. ಇದರಿಂದ ಪಾವತಿಗಳನ್ನು ಮಾಡವುದು ಈಗ ತುಂಬಾ ಸರಳವಾಗಿರುತ್ತದೆ. IOS ಗಾಗಿ UPI ಲೈಟ್  ಬೆಂಬಲದೊಂದಿಗೆ Paytm UPI ಗೆ RuPay ಕ್ರೆಡಿಟ್ ಕಾರ್ಡ್, ಸ್ಪ್ಲಿಟ್ ಬಿಲ್ ಮತ್ತು ಪರ್ಯಾಯ UPI ಐಡಿಯಂತಹ ಫೀಚರ್‌ ಗಳು ಲಭ್ಯವಾಗುವಂತೆ ಮಾಡಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :