ಗೂಗಲ್ ಮ್ಯಾಪ್‌ನಲ್ಲಿ (Google Maps) ಮನೆ ಅಥವಾ ಸ್ಟೋರ್ ಲೊಕೇಶನ್ ಪಟ್ಟಿ ಮಾಡುವುದು ಹೇಗೆ ತಿಳಿಯಬಹುದು.
ಪ್ರಸ್ತುತ ಎಲ್ಲ ಸ್ಮಾರ್ಟ್ಫೋನ್ಗಳಲ್ಲಿ ಈ ಗೂಗಲ್ ಮ್ಯಾಪ್ (Google Maps) ಅಪ್ಲಿಕೇಶನ್ ಇದ್ದೆ ಇರುತ್ತದೆ.
ನೀವು ಯಾರನ್ನಾದರೂ ಭೇಟಿ ಮಾಡಿದಾಗ ಅಥವಾ ಅವರಿಗೆ ನಿರ್ದೇಶನಗಳನ್ನು ನೀಡುವಾಗ ಹೆಚ್ಚು ಸಹಕಾರಿಯಾಗಲಿದೆ.
ನೀವು ಈಗ ನಿಮ್ಮ ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ ಮನೆಯ ಲೊಕೇಶನ್ (Home Location) ಅನ್ನು ಪಟ್ಟಿ ಮಾಡುವುದು ಹೇಗೆ ಎಂಬುದನ್ನು ಆರಾಮಾಗಿ ತಿಳಿಯಬಹುದು. ಗ್ರಾಹಕರು ತಮ್ಮ ಗಮ್ಯಸ್ಥಾನವನ್ನು ವೇಗವಾಗಿ ತಲುಪಲು ಗೂಗಲ್ ಮ್ಯಾಪ್ (Google Maps) ಅನ್ನು ಬಳಸಬಹುದು. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಈ ಅಪ್ಲಿಕೇಶನ್ ಅನ್ನು ಹೊಂದಿವೆ. ಅದರಲ್ಲಿ ನೀವು ಆಫ್‌ಲೈನ್ ಸ್ಥಳಗಳನ್ನು ಸಹ ಪ್ರವೇಶಿಸಬಹುದು. ಇದರಲ್ಲಿ ನೀವು ತುಂಬಾ ಇಷ್ಟಪಡುವ ಮತ್ತೊಂದು ವೈಶಿಷ್ಟ್ಯದ ಬಗ್ಗೆ ನಿಮಗೆ ಹೆಚ್ಚು ಮಾಹಿತಿಯನ್ನು ನೀಡಲಿದ್ದು ಇದರಲ್ಲಿ ನಿಮ್ಮ ಮನೆ ಅಥವಾ ನಿಮ್ಮ ಸ್ಟೋರ್ ಸ್ಥಳವನ್ನು ನೀವು ನೋಂದಾಯಿಸಿಕೊಳ್ಳಬಹುದು. ಆದರೆ ತುಂಬಾ ಜನರಿಗೆ ತಿಳಿಯದ ಈ ಮಾಹಿತಿಯನ್ನು ನೀವೊಮ್ಮೆ ತಿಳಿದುಕೊಳ್ಳಿ.
ಗೂಗಲ್ ಮ್ಯಾಪ್‌ನಲ್ಲಿ (Google Maps) ಮನೆಯ ಸ್ಥಳವನ್ನು ಹೇಗೆ ಪಟ್ಟಿ ಮಾಡುವುದು:
➥ಮೊದಲಿಗೆ ಗೂಗಲ್ ಮ್ಯಾಪ್ (Google Maps) ಅಪ್ಲಿಕೇಶನ್ ಅಪ್ಡೇಟ್ ಮಾಡಿಕೊಂಡು ತೆರೆಯಿರಿ.
➥ಇದರ ನಂತರ ಸರ್ಚ್ ಪಟ್ಟಿಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಮನೆಯ ವಿಳಾಸವನ್ನು ಟೈಪ್ ಮಾಡಿ.
➥ಸರಿಯಾದ ವಿಳಾಸವು ಕಾಣಿಸಿಕೊಂಡಾಗ ಸ್ಕ್ರೀನ್ ಕೆಳಭಾಗದಲ್ಲಿ ಹೋಮ್ ಕಾಣಿಸಿಕೊಳ್ಳುತ್ತದೆ.
➥ಹೋಮ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಮನೆಯ ವಿಳಾಸವನ್ನು ಹೋಮ್ ಎಂದು ಸೇವ್ ಮಾಡಿ.
ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ Home Location ಸೇರಿಸುವ ಪ್ರಯೋಜನಗಳು:
ಸುಲಭವಾದ ಮಾರ್ಗಶೋಧನೆಗಾಗಿ ನೀವು ನೇರವಾಗಿ ಹೋಮ್ ಅನ್ನು ಟ್ಯಾಪ್ ಮಾಡುವ ಮೂಲಕ ನೀವು ಮನೆಗೆ ಹಿಂದಿರುಗುವ ಮಾರ್ಗವನ್ನು ಸುಲಭವಾಗಿ ಕಂಡುಹಿಡಿಯಬಹುದು ಅಥವಾ ಗೂಗಲ್ ಮ್ಯಾಪ್ (Google Maps) ನಿರ್ದೇಶನಗಳನ್ನು ಪಡೆಯಬಹುದು. ನಿಮ್ಮ ಮನೆಯ ಸ್ಥಳವನ್ನು ನೀವು ಇತರರೊಂದಿಗೆ ಸುಲಭವಾಗಿ ಹಂಚಿಕೊಳ್ಳಬಹುದು. ನಿಮ್ಮ ಮನೆಯ ಸಮೀಪದಲ್ಲಿರುವ ಸ್ಟೋರ್ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಸ್ಥಳಗಳ ಕುರಿತು ನೀವು ಮಾಹಿತಿಯನ್ನು ಪಡೆಯಬಹುದು.
Also Read: 6GB RAM ಮತ್ತು 50MP ಕ್ಯಾಮೆರಾದ REALME NARZO N65 5G ಬಿಡುಗಡೆ! ಬೆಲೆಯೊಂದಿಗೆ ಟಾಪ್ 5 ಫೀಚರ್ಗಳೇನು ತಿಳಿಯಿರಿ
ದಿಕ್ಕುಗಳನ್ನು ಹುಡುಕುವುದು ಸುಲಭ: ನಿಮ್ಮ ಮನೆ ಅಥವಾ ಕೆಲಸಕ್ಕೆ ಹಿಂತಿರುಗುವ ಮಾರ್ಗವನ್ನು ನೀವು ಸುಲಭವಾಗಿ ಕಂಡುಕೊಳ್ಳಬಹುದು ಅಥವಾ “ಮನೆ” ಅಥವಾ “ಕೆಲಸ” ಟ್ಯಾಪ್ ಮಾಡುವ ಮೂಲಕ ಗೂಗಲ್ ಮ್ಯಾಪ್ (Google Maps) ನಿರ್ದೇಶನಗಳನ್ನು ಪಡೆಯಬಹುದು.
ನಿಮ್ಮ ಸ್ಥಳವನ್ನು ಹಂಚಿಕೊಳ್ಳಿ: ನಿಮ್ಮ ಮನೆ ಅಥವಾ ಕಚೇರಿ ಸ್ಥಳವನ್ನು ಇತರರೊಂದಿಗೆ ನೀವು ಸುಲಭವಾಗಿ ಹಂಚಿಕೊಳ್ಳುವುದರೊಂದಿಗೆ ವಿಶೇಷವಾಗಿ ನೀವು ಯಾರನ್ನಾದರೂ ಭೇಟಿ ಮಾಡಿದಾಗ ಅಥವಾ ಅವರಿಗೆ ನಿರ್ದೇಶನಗಳನ್ನು ನೀಡಲು ಬಯಸಿದಾಗ ಇದು ಹೆಚ್ಚು ಸಹಕಾರಿಯಾಗಲಿದೆ.
ಪ್ರಯಾಣದ ಸಮಯವನ್ನು ಉಳಿಸಿ: ಗೂಗಲ್ ಮ್ಯಾಪ್ (Google Maps) ನಿಮ್ಮ ಮನೆ ಅಥವಾ ಕೆಲಸದ ವಿಳಾಸವನ್ನು ಆಧರಿಸಿ ನಿಮ್ಮ ದೈನಂದಿನ ಮಾರ್ಗಗಳನ್ನು ಆಪ್ಟಿಮೈಜ್ ಮಾಡಬಹುದು. ಇದರೊಂದಿಗೆ ನಿಮ್ಮ ಪ್ರಯಾಣದ ಸಮಯವನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತದೆ.
ಸ್ಥಳೀಯ ಮಾಹಿತಿಯನ್ನು ಪಡೆಯಿರಿ: ವ್ಯಾಪಾರಗಳು, ರೆಸ್ಟೋರೆಂಟ್‌ಗಳು ಮತ್ತು ನಿಮ್ಮ ಮನೆ ಅಥವಾ ಕೆಲಸದ ಸಮೀಪವಿರುವ ಇತರ ಸ್ಥಳಗಳ ಕುರಿತು ಮಾಹಿತಿಯನ್ನು ಪಡೆಯಬಹುದು, ಅವುಗಳ ರೇಟಿಂಗ್‌ಗಳು, ತೆರೆಯುವ ಸಮಯಗಳು ಮತ್ತು ಸಂಪರ್ಕ ಮಾಹಿತಿಯನ್ನು ನೀಡಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile