ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್’ಗೆ ಹೀಗೆ ಲಿಂಕ್ ಮಾಡಿ! ಏಕೆಂದರೆ ಲಿಂಕ್ ಮಾಡಲು ನಾಳೆ ಕೊನೆ ದಿನ

ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್’ಗೆ ಹೀಗೆ ಲಿಂಕ್ ಮಾಡಿ! ಏಕೆಂದರೆ ಲಿಂಕ್ ಮಾಡಲು ನಾಳೆ ಕೊನೆ ದಿನ

ಹೊಸ ವರ್ಷದೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡುವಂತೆ ಸೂಚಿಸಿದೆ. ಅಂದ್ರೆ 31ನೇ ಡಿಸೆಂಬರ್ 2019 ರೊಳಗೆ ಕಡೆಯ ದಿನವೆಂದು ತಿಳಿಸಿದೆ. ಪ್ಯಾನ್ ಕಾರ್ಡ್ ಆಧಾರ್​​​ ನೊಂದಿಗೆ ಲಿಂಕ್ ಆಗದಿದ್ದರೆ ಆನ್​ಲೈನ್​ನಲ್ಲಿ ITR ಫೈಲ್ ಸಲ್ಲಿಸಲಾಗುವುದಿಲ್ಲ. ಇದನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139AA ಅಡಿಯಲ್ಲಿ ಆಧಾರ್​​​ ನೊಂದಿಗೆ ಜೋಡಣೆಯಾಗದ ಪ್ಯಾನ್ ಸಂಖ್ಯೆಯನ್ನು ಅಮಾನ್ಯ ಎಂದು ಅಧಿಕೃತವಾಗಿ ಪರಿಗಣಿಸಲಾಗುತ್ತದೆಂದು ಕೇಂದ್ರ ನೇರ ತೆರಿಗೆ ಮಂಡಳಿ ತಿಳಿಸಿದೆ. 

ಇದರಿಂದ ತೆರಿಗೆ ಮರುಪಾವತಿ ಸಮಸ್ಯೆ ಉಂಟಾಗಲಿದೆ. ಹಾಗೆಯೇ ಪ್ಯಾನ್ ಕಾರ್ಡ್ ಇನ್ವಾಲಿಡ್ ಅಂದ್ರೆ ಅಮಾನ್ಯವಾಗಲಿದೆ ಎಂದು ತಿಳಿಸಲಾಗಿದೆ. ಆದ್ದರಿಂದ ನೀವಿನ್ನು ಆಧಾರ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಇನ್ನು ಲಿಂಕ್ ಮಾಡಿಲ್ಲವಾದರೆ ಕೂಡಲೇ ಈ ಕೆಳಗಿನ ಮಾಹಿತಿಯನ್ನು ಅನುಸರಿಸಿ ಲಿಂಕ್ ಮಾಡಿಕೊಳ್ಳಿ.

-ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ www.incometaxindiaefiling.gov.in ಲಾಗಿನ್ ಆಗಿ. ಆ ಬಳಿಕ ಪ್ಯಾನ್ ಸಂಖ್ಯೆಯನ್ನು ನಮೂದಿಸಿ. ಇದಾದ ಮೇಲೆ ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಿ.

-ಆ ನಂತರ ನಿಮ್ಮ ಹೆಸರು, ಜನ್ಮ ದಿನಾಂಕ ಇತ್ಯಾದಿಗಳನ್ನು ತಪ್ಪಿಲ್ಲದೇ ನಮೂದಿಸಿ. ಇದಾದ ಬಳಿಕ ಕ್ಯಾಪ್ಚಾ ಕೋಡ್ ನಮೂದಿಸಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದರೆ ಸಾಕು.

-ಇದಾದ ಮೇಲೆ UIDAI ನಿಂದ ವೆರಿಫಿಕೇಶನ್ ಆದ ಬಳಿಕ ಆಧಾರ್-ಪ್ಯಾನ್ ಲಿಂಕ್ ಆಗಲಿದೆ.

-ಇನ್ನು SMS ಕಳುಹಿಸುವ ಮೂಲಕ ಕೂಡ ಆಧಾರ್-ಪ್ಯಾನ್ ಲಿಂಕ್ ಮಾಡಬಹುದು.

-ನಿಮ್ಮ ಮೊಬೈಲ್ನಲ್ಲಿ UIDPAN ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು ನಿಮ್ಮ 12 ಡಿಜಿಟ್ ಆಧಾರ್ ನಂಬರ್ ನಮೂದಿಸಿ. ಆ ಬಳಿಕ ಸ್ಪೇಸ್ ಕೊಟ್ಟು 10 ಡಿಜಿಟ್ ಪ್ಯಾನ್ ನಂಬರ್ ನಮೂದಿಸಿ.

-ಈ SMS ಅನ್ನು ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ನಿಂದ 567678 ಅಥವಾ 56161 ನಂಬರ್ಗೆ ಕಳುಹಿಸಿದರೆ ಆಧಾರ್-ಪ್ಯಾನ್ ಸಂಖ್ಯೆಗಳು ಲಿಂಕ್ ಆಗಲಿವೆ. ಈ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು Facebook ಮತ್ತು WhatsApp ಅಲ್ಲಿ ಶೇರ್, ಲೈಕ್ ಮಾಡಿ ಇದೆ ರೀತಿಯ ಇತ್ತೀಚಿನ ಟೆಕ್ನಾಲಜಿ ಸಂಭಧಿತ ನ್ಯೂಸ್ ಮತ್ತು ಅಪ್ಡೇಟ್ಗಾಗಿ ಡಿಜಿಟ್ ಕನ್ನಡವನ್ನ ಫಾಲೋ ಮಾಡುತ್ತೀರಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo