ಯಾವ ಆಂಡ್ರಾಯ್ಡ್ ಅಪ್ಲಿಕೇಶನ್‌ ನಿಮ್ಮ ಫೋನನ್ನು ನಿಧಾನಗೊಳಿಸುತ್ತಿವೆ ಎಂದು ತಿಳಿಯೋದೇಗೆ!

ಯಾವ ಆಂಡ್ರಾಯ್ಡ್ ಅಪ್ಲಿಕೇಶನ್‌ ನಿಮ್ಮ ಫೋನನ್ನು ನಿಧಾನಗೊಳಿಸುತ್ತಿವೆ ಎಂದು ತಿಳಿಯೋದೇಗೆ!
HIGHLIGHTS

ನಿಮ್ಮ ಆಂಡ್ರಾಯ್ಡ್ ಫೋನ್ ಯಾವ ಅಪ್ಲಿಕೇಶನಿಂದಾಗಿ ನಿಮ್ಮ ಫೋನ್ ಸ್ಲೋ ಆಗಿದೆ ಎಂದು ಕಂಡುಹಿಡಿಯುದಕ್ಕೆ ಈ ಹಂತಗಳನ್ನು ಅನುಸರಿಸಿ ನೋಡಿ

ಈ ಲೇಖನದಲ್ಲಿ ಯಾವ ಆಂಡ್ರಾಯ್ಡ್ ಅಪ್ಲಿಕೇಶನ್‌ ನಿಮ್ಮ ಫೋನನ್ನು ನಿಧಾನಗೊಳಿಸುತ್ತಿವೆ ಎಂದು ತಿಳಿಯೋಣ. ನಿಮ್ಮ ಫೋನಲ್ಲಿ ಹೆಚ್ಚು ಹೆಚ್ಚು ಪರ್ಫಾರ್ಮೆನ್ಸ್ ಮತ್ತು ಗ್ರಾಫಿಕ್ ತೀವ್ರವಾದ ಆಂಡ್ರಾಯ್ಡ್ ಅಪ್ಲಿಕೇಶನ್ಗಳು ಮತ್ತು ಗೇಮ್ಗಳನ್ನು ಒಳಗೊಂಡಿದ್ದರೆ ಸ್ಮಾರ್ಟ್ಫೋನ್ ಸೀಮಿತ ಮೆಮೊರಿ ಸಾಮರ್ಥ್ಯ ಕಡಿಮೆಯಾಗುತ್ತದೆ. ಹೀಗಾಗಿ ಸ್ಮಾರ್ಟ್ಫೋನ್ ಬ್ರಾಂಡ್ಗಳು 1GB, 2GB, 3GB ಮತ್ತು 4GB RAM ನಂತರ ಈಗ ನೇರವಾಗಿ  6GB, 8GB ಮತ್ತು 12GB RAM ನೊಂದಿಗೆ ಫೋನ್ಗಳನ್ನು ಪ್ರಾರಂಭಿಸುತ್ತಿವೆ. ಏಕೆಂದರೆ ಹೆಚ್ಚು RAM ನೊಂದಿಗಿನ ಸ್ಮಾರ್ಟ್ಫೋನ್ ಬಳಕೆಯಲ್ಲಿ ಹೆಚ್ಚು ಸುಗಮ ಮತ್ತು ಸರಾಗವಾದ ಅನುಭವವನ್ನು ಪಡೆಯಲು ಒಂದು ಉತ್ತಮ ಮಾರ್ಗವಾಗಿದೆ. ಆದರೂ ಕೆಲವು ಸಣ್ಣ RAM ಹೊಂದಿರುವ ಫೋನ್ಗಳಲ್ಲಿ ಹೇಗೆ ಅದರ ವೇಗವನ್ನು ಉತ್ತಮಗೊಳಿಸಬವುದೆಂದು ಈ ಕೆಳಗೆ ಹಂತ ಹಂತವಾಗಿ ತಿಳಿಸಲಾಗಿದೆ.

-ಮೊದಲಿಗೆ ನಿಮ್ಮ ಫೋನಿನ ಸೆಟ್ಟಿಂಗ್ ಆಯ್ಕೆಗೆ ಹೋಗಿ. 

-ಇಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸ್ಟೋರೇಜ್ / ಮೆಮೊರಿ ಮೇಲೆ ಟ್ಯಾಪ್ ಮಾಡಿ

-ಸ್ಟೋರೇಜ್ ವಿಭಾಗದಲ್ಲಿ ಗರಿಷ್ಠ ಸ್ಟೋರೇಜ್ ಸ್ಥಳವನ್ನು ಯಾವ ಅಪ್ಲಿಕೇಶನ್ ಬಳಸುತ್ತಿದೆ ಎಂಬುದು ತೋರಿಸುತ್ತದೆ.

-ಗಮನದಲ್ಲಿಡಿ ಈ ಪಟ್ಟಿ ನಿಮ್ಮ ಫೋನಿನ ಇಂಟರ್ನಲ್ ಸ್ಟೋರೇಜ್ ಬಳಕೆಯನ್ನು ಮಾತ್ರ ತೋರಿಸುತ್ತದೆ.

-ಇಲ್ಲಿ 3, 6, 12 ಗಂಟೆಗಳ ಮತ್ತು 1 ದಿನದ ಮಾಹಿತಿಯೊಂದಿಗೆ RAM ನ (%) ಪ್ರಮಾಣವನ್ನು ನೋಡಬವುದು.

-ಈ ಮಾಹಿತಿಯ ಆಧಾರದ ಮೇಲೆ ನೀವು ಅಪ್ಲಿಕೇಶನ್ಗಳನ್ನು ಡಿಲೀಟ್ / Uninstall ಮಾಡಬವುದು. 

-ನಿಮ್ಮ ಫೋನಿನ ಇಂಟರ್ನಲ್ ಸ್ಟೋರೇಜ್ ತುಂಬಿದ್ದರೆ ನಿಮ್ಮ ಫೋನ್ ನಿಧಾನವಾಗಲು ಕಾರಣವಾಗಬಾವುದು. 

-ಗಮನದಲ್ಲಿಡಿ ಫೋನಿನ ಇಂಟರ್ನಲ್ ಸ್ಟೋರೇಜಲ್ಲಿ ಯಾವಾಗಲು ಸ್ವಲ್ಪ ಖಾಲಿ ಜಾಗ ಇಡುವುದು ಉತ್ತಮವಾಗಿದೆ. 

ಇದೇಲ್ಲಾದರ ನಂತರ ನಿಮ್ಮ ಫೋನ್ ಸಾಮಾನ್ಯವಾಗಿ ವೇಗವಾಗಬೇಕು. ಅಲ್ಲದೆ ಒಂದೇರಡು ದಿನಗಳಿಗೊಮ್ಮೆ ನಿಮ್ಮ ಫೋನನ್ನು ರಿಸ್ಟಾರ್ಟ್ ಮಾಡಲು ಮರೆಯಬೇಡಿ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo