ಜಗತ್ತಲ್ಲಿ WhatsApp ಎಂಬುದು ಮೆಸೇಜ್ಗಾಗಿ ಹೆಚ್ಚಿನ ಆದ್ಯತೆಯ ವಿಧಾನಗಳಲ್ಲಿ ಒಂದಾಗಿದೆ. ಮತ್ತು ಇದನ್ನು ವಿಶ್ವಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ. WhatsApp ಮೆಸೇಜಿಂಗ್ ಪ್ರಕ್ರಿಯೆಯನ್ನು ಸರಾಗಗೊಳಿಸಿದ್ದರೂ ಸಹ ಬಳಕೆದಾರನು ಯಾರನ್ನಾದರೂ ಮಾತನಾಡಲು ಆಯ್ಕೆ ಮಾಡಿಕೊಳ್ಳಲು ಮತ್ತು ನಿರ್ಬಂಧಿಸಲು ಸಹ ಅವಕಾಶ ನೀಡುತ್ತದೆ. ಇಲ್ಲಿ ಬ್ಲಾಕ್ ಮತ್ತು ಅನ್ಬ್ಲಾಕ್ ಫೀಚರ್ಗಳನ್ನು ಒದಗಿಸುವ ಮೂಲಕ ಅದು ಮಾಡುತ್ತದೆ.
ನೀವು ಯಾರನ್ನಾದರೂ ನಿರ್ಬಂಧಿಸಿದರೆ ನೀವು ಆ ವ್ಯಕ್ತಿಯಿಂದ ಮೆಸೇಜ್ಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಅನೇಕ ಜನರು WhatsApp ನಲ್ಲಿ ನಿರ್ಬಂಧಿಸಲಾಗಿದೆ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯುವುದು ಹೇಗೆಂದು ತಿಳಿದಿಲ್ಲ. ಇಲ್ಲಿ ನಾವು WhatsApp ಅಲ್ಲಿ ಯಾರದರು ನಿಮ್ಮನ್ನು Block ಮಾಡಿದರೆ ನೀವು ಹೀಗೆ ಪತ್ತೆ ಹಚ್ಚಬವುದೆನ್ನುವುದನ್ನು ತಿಳಿಯಬವುದು. ಮೊದಲಿಗೆ ನಿಮ್ಮನ್ನು ಯಾರಾದರೂ ಬ್ಲೋಕ್ ಮಾಡಿದರೆ ಏನೇನಾಗುತ್ತದೆ ತಿಳಿಯಿರಿ.
*ಅವರ ಲಾಸ್ಟ ಸೀನ್ ಅಥವಾ ವ್ಯಕ್ತಿಯ ಚಾಟ್ ವಿಂಡೋದಲ್ಲಿ ಆನ್ಲೈನ್ನಲ್ಲಿದೆ ಅಥವಾ ಇಲ್ಲ ನೋಡಲು ಅಸಾಧ್ಯ.
*ನೀವು ಈ ಸಂಪರ್ಕದ ಪ್ರೊಫೈಲ್ ಫೋಟೋವನ್ನು ಅಥವಾ ನವೀಕರಣಗಳನ್ನು ಕಾಣಲಾಗುವುದಿಲ್ಲ.
*ನಿಮ್ಮನ್ನು ನಿರ್ಬಂಧಿಸಿದವರಿಗೆ ನೀವು ಕಳುಹಿಸಿದ ಮೆಸೇಜ್ ಕೆಳಗೆ ಒಂದು ಚೆಕ್ ಗುರುತು ಮಾತ್ರ ತೋರುತ್ತದೆ (ಸಾಮಾನ್ಯವಾಗಿ ಇದು ಎರಡು ಟಿಕ್ ಮಾತು ಬ್ಲೂ ಆಗುತ್ತದೆ).
*ನೀವು ಮಾಡಲು ಬಯಸುವ ಪ್ರಯತ್ನಿಸುವ ಯಾವುದೇ ಕರೆಗಳು ಹೋಗುವುದಿಲ್ಲ. ಇದು ನಿಮಗೆ ನಿಜವಾಗಿದ್ದರೆ ನಿಮ್ಮ ನಂಬರ್ ಅನ್ನು ಬ್ಲೋಕ್ ಮಾಡಿದರೆ ಎಂದರ್ಥ.
ಯಾರನ್ನಾದರೂ ನೀವು ಬ್ಲೋಕ್ ಮಾಡುವುದೇಗೆ?
* WhatsApp ನಲ್ಲಿ ಮೇಲೆ ಟ್ಯಾಪ್ ಮಾಡಿ ಮೊದಲು Menu > Settings > Account > Privacy > Blocked contacts.
* ಮೇಲಿನ ಬಲ ಮೂಲೆಯಲ್ಲಿರುವ 'Contact' ಚಿಹ್ನೆಯನ್ನು ಟ್ಯಾಪ್ ಮಾಡಿ
* ಸರ್ಚ್ ನಂತರ ಅಥವಾ ನೀವು ನಿರ್ಬಂಧಿಸಲು ಬಯಸುವ Contact ಅನ್ನು ಆಯ್ಕೆ ಮಾಡಿ.
ಬ್ಲೋಕ್ ಆಗಿರುವವರನ್ನುಅನ್ಬ್ಲೋಕ್ ಮಾಡುವುದೇಗೆ?
*WhatsApp ನಲ್ಲಿ Menu > Settings > Account > Privacy > Blocked contacts ಟ್ಯಾಪ್ ಮಾಡಿ.
* ನೀವು ಅನಿರ್ಬಂಧಿಸಲು ಬಯಸುವ ಸಂಪರ್ಕವನ್ನು ಟ್ಯಾಪ್ ಮಾಡಿ.
* ಅನಿರ್ಬಂಧಿಸು Contact ಮೇಲೆ ಟ್ಯಾಪ್ ಮಾಡಿ ಮೆಸೇಜ್, ಕರೆ ಮತ್ತು ಸ್ಟೇಟಸ್ ನವೀಕರಣಗಳನ್ನು ಕಳುಹಿಸಿ.ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.