SIM Card: ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ರಿಜಿಸ್ಟರ್ ಆಗಿವೆ ಈ ರೀತಿ ತಿಳಿಯಿರಿ!

SIM Card: ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ರಿಜಿಸ್ಟರ್ ಆಗಿವೆ ಈ ರೀತಿ ತಿಳಿಯಿರಿ!
HIGHLIGHTS

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು (SIM Card) ನೋಂದಾಯಿಸಲಾಗಿದೆ ಎನ್ನುವುದನ್ನು ತಿಳಿಯುವುದು ಹೇಗೆ?

SIM Card ಆಧಾರದ ಮೇರೆಗೆ ನಡೆಯುವ ಭಾರಿ ನಷ್ಟಗಳಿಗೆ ಸಾಮಾನ್ಯ ಅಮಾಯಕರು ಸಿಲುಕಿಕೊಳ್ಳುತ್ತಾರೆ.

ನಂಬರ್ ಚೆನ್ನಾಗಿಲ್ಲ, ನೆಟ್ವರ್ಕ್ ಸರಿಯಿಲ್ಲ ಅಥವಾ ಬೆಲೆ ಜಾಸ್ತಿ ಅಂಥ ಸಿಮ್ ಕಾರ್ಡ್ಗಳನ್ನು ನೀವು ಬದಲಾಯಿಸುತ್ತಿದ್ದರೆ ಈ ಅಭ್ಯಾಸವನ್ನು ಈಗಲೇ ನಿಲ್ಲಿಸಿಬಿಡಿ. ಯಾಕೆಂದರೆ ಸಿಮ್‌ ಕಾರ್ಡ್ (SIM Card) ಆಧಾರದ ಮೇರೆಗೆ ನಡೆಯುವ ಭಾರಿ ನಷ್ಟಗಳಿಗೆ ಸಾಮಾನ್ಯ ಅಮಾಯಕರು ಸಿಲುಕಿಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ಈ ಯುಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. ಸೈಬರ್ ಅಪರಾಧಿಗಳು ಜನರನ್ನು ಹಲವು ರೀತಿಯಲ್ಲಿ ವಂಚಿಸುತ್ತಾರೆ. ಇವುಗಳಲ್ಲಿ ಸಿಮ್ ಕಾರ್ಡ್ (SIM Card) ಮತ್ತು ಆಧಾರ್ ಕಾರ್ಡ್‌ಗೆ (Aadhaar) ಸಂಬಂಧಿಸಿದ ವಂಚನೆಗಳೂ ಸೇರಿವೆ.

ನಿಮ್ಮ ಆಧಾರ್ ಕಾರ್ಡ್ ತಪ್ಪಾದ ಕೈಗಳಿಗೆ ನಿಮ್ಮ ಫೋನ್ ಅಥವಾ ದಾಖಲೆಗಳು ಸಿಕ್ಕರೆ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ನೀವು ಸುದ್ದಿಗಳನ್ನು ಕೇಳುತ್ತಿರಬಹುದು. ಅನೇಕ ಬಾರಿ ವಂಚನೆ ಮಾಡುವ ಜನರು ನಿಮ್ಮ ದಾಖಲೆಗಳನ್ನು ಬಳಸಿಕೊಂಡು ಸಿಮ್ ಕಾರ್ಡ್‌ಗಳನ್ನು (SIM Card) ಪಡೆಯುತ್ತಾರೆ. ನಂತರ ಅವರು ಮಾಡುವ ಪ್ರತಿಯೊಂದು ಘಟನೆಗಳಲ್ಲಿ ಬಳಸುವ ಸಿಮ್‌ ಕಾರ್ಡ್ (SIM Card) ಆಧಾರದ ಮೇರೆಗೆ ಭಾರಿ ನಷ್ಟಕ್ಕೆ ಸಾಮಾನ್ಯ ಅಮಾಯಕರು ಸಿಲುಕಿಕೊಳ್ಳುತ್ತಾರೆ.

Also Read: JioBharat V3 and V4: ಕಡಿಮೆ ಬೆಲೆಗೆ ಎರಡು 4G ಫೀಚರ್ ಫೋನ್ಗಳನ್ನು ಬಿಡುಗಡೆಗೊಳಿಸಿದ ಜಿಯೋ

ನಿಮ್ಮ ಪ್ರತಿ ದಾಖಲೆಗಳ ಬಗ್ಗೆ ಎಚ್ಚರವಿರಲಿ!

ನಿಮ್ಮ ಹೆಸರಿನಲ್ಲಿ ಅಥವಾ ನಿಮ್ಮ ಕುಟುಂಭದ ಸದಸ್ಯರ ಹೆಸರಿನಲ್ಲಿ ಎಷ್ಟು ಮೊಬೈಲ್ ಸಿಮ್ ಕಾರ್ಡ್ (SIM Card) ನೋಂದಾಯಿಸಲಾಗಿದೆ ಎನ್ನುವುದನ್ನು ತಿಳಿಯುವುದು ಬಹು ಮುಖ್ಯವಾಗಿದೆ. ಏಕೆಂದರೆ ಆದ್ದರಿಂದ ನೀವು ಎಲ್ಲೇ ನಿಮ್ಮ ದಾಖಲೆಗಳಾದ ಆಧಾರ್, ಪಾನ್ ಅಥವಾ ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸನ್ಸ್ ಬಳಸುತ್ತಿರೋ ಅಲ್ಲಿ ಎಚ್ಚರಿಕೆಯಿಂದ 3 ಬಾರಿ ಯೋಚಿಸಿ ನೀಡಬೇಕಾಗುತ್ತದೆ. ಅದರಲ್ಲೂ ನೀವು ಎಲ್ಲೆಲ್ಲಿ ಜೆರಾಕ್ಸ್ ಅಥವಾ ಫೋಟೋ ಕಾಪಿ ಮಾಡಿಸುವಿರೋ ಅಲ್ಲಿ ಹೆಚ್ಚು ಜಾಗರೂಕರಾಗಿರಿ. ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಿಮ್ ಕಾರ್ಡ್ (SIM Card) ನೋಂದಾಯಿಸಲಾಗಿದೆ ಎಂಬುದನ್ನು ನೀವು ಹೇಗೆ ಕಂಡುಹಿಡಿಯಲು ಈ ಕೆಳಗೆ ತಿಳಿಯಿರಿ.

How many SIM Cards registered in your name

ನಿಮ್ಮ ಹೆಸರಿನಲ್ಲಿ ಎಷ್ಟು SIM Card ರಿಜಿಸ್ಟರ್ ಆಗಿವೆ?

ಮೊದಲನೆಯದಾಗಿ TAFCOP ನ ಅಧಿಕೃತ ವೆಬ್‌ಸೈಟ್ https://tafcop.dgtelecom.gov.in/ ಗೆ ಹೋಗಿ ಮತ್ತು ಅದನ್ನು ತೆರೆಯಿರಿ.

ಇದರ ನಂತರ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಇಲ್ಲಿ ನಮೂದಿಸಬೇಕಾಗುತ್ತದೆ.

ಇದರ ನಂತರ ನೀವು OTP ಅನ್ನು ಸ್ವೀಕರಿಸುತ್ತೀರಿ. ಪೋರ್ಟಲ್‌ಗೆ ಸೈನ್ ಇನ್ ಮಾಡಲು ಈ OTP ಅನ್ನು ನಮೂದಿಸಿ ಮತ್ತು ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಇದರ ನಂತರ ನೀವು ಸೈನ್-ಇನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ಇದರ ನಂತರ ನಿಮ್ಮನ್ನು ಮತ್ತೊಂದು ಪುಟಕ್ಕೆ ಕಳುಹಿಸುತ್ತದೆ ಇಲ್ಲಿ ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ನೀವು ನೋಡಬಹುದು.

ಒಂದು ವೇಳೆ ನಿಮಗೆ ತಿಳಿಯದ ಮೊಬೈಲ್ ಸಂಖ್ಯೆಗಳು ಈ ಪಟ್ಟಿಯಲ್ಲಿದ್ದರೆ ಅವನ್ನು ಮಾರ್ಕ್ ಮಾಡಿ ತೆಗೆದಾಕಿ ರಿಪೋರ್ಟ್ ಮಾಡಬಹುದು.

ಭಾರತದಲ್ಲಿ ಒಬ್ಬರ ಹೆಸರಲ್ಲಿ 9 ಸಿಮ್ ಕಾರ್ಡ್‌ಗಳನ್ನು ಮಾತ್ರ ಪಡೆಯಬಹುದು!

ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಿಮ್ ಕಾರ್ಡ್ (SIM Card) ನೋಂದಾಯಿಸಲಾಗಿದೆ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ ನೀವು ದೂರಸಂಪರ್ಕ ಇಲಾಖೆಯ (DoT) ಪೋರ್ಟಲ್‌ಗೆ ಹೋಗಬೇಕಾಗುತ್ತದೆ. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ಇಲ್ಲಿಂದ ನೀವು ಸುಲಭವಾಗಿ ಕಂಡುಹಿಡಿಯಬಹುದು.

ದೂರಸಂಪರ್ಕ ಇಲಾಖೆ ಹೊರಡಿಸಿರುವ ನಿಯಮಗಳ ಪ್ರಕಾರ ಒಬ್ಬ ಭಾರತೀಯ ನಾಗರಿಕ ತನ್ನ ಆಧಾರ್ ಕಾರ್ಡ್‌ನೊಂದಿಗೆ ಒಟ್ಟಾರೆಯಾಗಿ ಕೇವಲ 9 ಮೊಬೈಲ್ ಸಂಖ್ಯೆಗಳನ್ನು ನೀಡಬಹುದು. ನಿಮ್ಮ ಆಧಾರ್ ಕಾರ್ಡ್‌ಗೆ ಎಷ್ಟು ಸಂಖ್ಯೆಗಳನ್ನು ಲಿಂಕ್ ಮಾಡಲಾಗಿದೆ ಎಂಬುದನ್ನು ಸಹ ನೀವು ತಿಳಿಯಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo