Internet Speed: ಭಾರತದ ಜನಪ್ರಿಯ ಟೆಲಿಕಾಂ ಕಂಪನಿಗಳಾಗಿರುವ ಜಿಯೋ ಮತ್ತು ಏರ್ಟೆಲ್ ದೇಶದ ಹೆಚ್ಚಿನ ಭಾಗಗಳಲ್ಲಿ 5G ಸೇವೆಗಳನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಆದರೆ ಇದನ್ನು ಬಳಕೆದಾರರೂ ಬಳಸಲು ತಮ್ಮ ಬಳಿ 5G ನೆಟ್ವರ್ಕ್ ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್ ಹೊಂದುವುದು ಕಡ್ಡಾಯವಾಗಿದೆ. ಆಗ ಮಾತ್ರ ನೀವು ಈ 5G ಸೇವೆಯನ್ನು ಆನಂದಿಸಬಹುದು. ಆದರೆ ವರದಿಗಳ ಪ್ರಕಾರ ಇಂದಿಗೂ ಸಹ ಹೆಚ್ಚಿನವರು 4G ಫೋನ್ಗಳನ್ನು ಬಳಸುತ್ತಿದ್ದಾರೆ.
ಇದಕ್ಕೆ ಮುಖ್ಯ ಕಾರಣವೆಂದು ನೋಡುವುದಾದರೆ ಇಂದಿನ ಬೆಲೆ ಏರಿಕೆಯಾಗಿದೆ. ಪ್ರಸ್ತುತ 5G ಸ್ಮಾರ್ಟ್ಫೋನ್ ಅನ್ನು ಸುಮಾರು 10,000 ರೂಗಳೊಳಗೆ ಪಡೆಯೋದು ದೊಡ್ಡ ವಿಷಯವಲ್ಲ ಅದನ್ನು ಖರೀದಿಸಿದ ನಂತರ ಪ್ರತಿ ತಿಂಗಳು ಅದಕ್ಕೆ 5G ಪ್ಲಾನ್ ರಿಚಾರ್ಜ್ ಮಾಡೋದೆ ಈ ಭಾರಿ ಬದಲಾವಗೆ ಕಾರಣವೆಂದರೆ ತಪ್ಪಿಲ್ಲ. ಫೋನ್‌ನಲ್ಲಿ ಹಲವು ಕಾರಣಗಳಿಂದಾಗಿ ಇಂಟರ್ನೆಟ್ ಸ್ಪೀಡ್ (Internet Speed) ಇಲ್ಲದೆ ಕೋಪಗೊಳ್ಳುವವರು ಈ ಸಿಂಪಲ್ ಟ್ರಿಕ್ ಅನುಸರಿಸಿ ಉತ್ತಮವಾದ ಇಂಟರ್ನೆಟ್ ಸ್ಪೀಡ್ ಪಡೆಯಲು ಒಂದಿಷ್ಟು ಸಲಹೆಗಳು ಈ ಕೆಳಗೆ ಪಟ್ಟಿ ಮಾಡಲಾಗಿದೆ.
Also Read: 6000mAh ಬ್ಯಾಟರಿಯ ಸ್ಯಾಮ್‌ಸಂಗ್ 5G ಸ್ಮಾರ್ಟ್ಫೋನ್ ಕೇವಲ ₹13,499 ರೂಗಳಿಗೆ ಮಾರಾಟವಾಗುತ್ತಿದೆ!
ಈ ಸಮಸ್ಯೆಗೆ ಮೂಲ ಕಾರಣವನ್ನು ಹುಡುಕಿ ನೋಡುವುದಾದರೆ ಅದು ನಿಮ್ಮ ಫೋನ್ ಒಳಗೆ ಅಡಿಗಿರುತ್ತದೆ. ಆದ್ದರಿಂದ ಈ ಸರಳ ಟ್ರಿಕ್ ಒಮ್ಮೆ ಫಾಲೋ ಮಾಡಿ ನೋಡಿ ನಿಮ್ಮ ಫೋನ್ ಕೂಡ ಸೂಪರ್‌ಫಾಸ್ಟ್ ಸ್ಪೀಡ್ನಲ್ಲಿ ಇಂಟರ್ನೆಟ್ ಬಳಸಲು ಸಾಧ್ಯವಾಗುತ್ತದೆ. ಡೇಟಾ ತೊಂದರೆ ಆದರೆ ಮೊದಲು ನೆಟ್ವರ್ಕ್ ಪರಿಶೀಲಿಸುವುದು ಬಹಳ ಮುಖ್ಯವಾಗಿರುತ್ತದೆ.
ಅದರಲ್ಲೂ ನೀವು ವಾಸಿಸುತ್ತಿರುವ ಸುತ್ತಮುತ್ತ ನೀವು ಬಳಸುವ ಟೆಲಿಕಾಂ ಆಪರೇಟರ್ ನೆಟ್ವರ್ಕ್ ಯಾವ ಎಷ್ಟರ ಮಟ್ಟಕ್ಕೆ ನೆಟ್ವರ್ಕ್ ಕವರೇಜ್ (Network Coverage) ನೀಡುತ್ತಿದೆ ಎಂದು ತಿಳಿಯುವುದು ಮೊದಲ ಅಂಶವಾಗಿರಬೇಕು. ಯಾಕೆಂದರೆ ನಿಮ್ಮ ಪ್ರದೇಶದಲ್ಲಿ ನೆಟ್ವರ್ಕ್ ಕವರೇಜ್ ಇಲ್ಲದಿದ್ದರೆ ಅಲ್ಲಿ ಐಫೋನ್ ಬಳಸಿದರೂ ಯಾವುದೇ ಪ್ರಯೋಜನವಿರೋಲ್ಲ.
ಎರಡನೇಯದಾಗಿ ಇಂತಹ ಪ್ರದೇಶಗಳಲ್ಲಿ ನೀವು ಹಠವಿಡಿದು ನೆಟ್ವರ್ಕ್ ಕವರೇಜ್ ಬೇಕೇ ಬೇಕು ಎನ್ನುವುದಾದರೆ ನೀವು ನೆಟ್‌ವರ್ಕ್ ಬೂಸ್ಟರ್ (Network Booster) ಅನ್ನು ಬಳಸುವುದು ಉತ್ತಮ ಆಯ್ಕೆಯಾಗಲಿದೆ. ಇದು ನಿಮ್ಮ ಟೆಲಿಕಾಂ ಕಂಪನಿ ನೀಡುತ್ತದೆ ಆದರೆ ಇದಕ್ಕಾಗಿ ನಿಮಗೆ ಹೆಚ್ಚುವರಿ ಹಣವನ್ನು ನೀಡಬೇಕಾಗುತ್ತದೆ. ಅಲ್ಲದೆ ಇದನ್ನು ಒಬ್ಬ ಅಥವಾ ಒಂದು ಫ್ಯಾಮಿಲಿಗಾಗಿ ಪಡೆಯೋದಕ್ಕಿಂತ ನಿಮ್ಮ ಏರಿಯಾದ ಪ್ರದೇಶಕ್ಕಾಗಿ ನೆಟ್ವರ್ಕ್ ಕವರೇಜ್ ಬೂಸ್ಟರ್ ಬೇಕೊಂದು ಅರ್ಜಿ ಸಲ್ಲಿಸುವುದು ಮತ್ತೊಂದು ಉತ್ತಮ ಸಲಹೆಯಾಗಿದೆ.
ಹಲವಾರು ಅನಗತ್ಯ ಅಪ್ಲಿಕೇಶನ್‌ಗಳು ನಿಮ್ಮ ಫೋನ್ ಮತ್ತು ಇಂಟರ್ನೆಟ್ ಎರಡರ ವೇಗವನ್ನೂ ನಿಧಾನಗೊಳಿಸುತ್ತದೆ ಎನ್ನುವುದು ನೆನೆಪಿರಲಿ.
ನಿಮ್ಮ ಫೋನ್‌ನಲ್ಲಿ ನೀವು ದೀರ್ಘಕಾಲ ಬಳಸದ ಕೆಲವು ಅಪ್ಲಿಕೇಶನ್‌ಗಳಿದ್ದರೆ ಅದನ್ನು ಅನ್‌ಇನ್‌ಸ್ಟಾಲ್ ಮಾಡಿ ಸ್ಟೋರೇಜ್ ಮೆಮೊರಿಯನ್ನು ಉಳಿಸಿಕೊಳ್ಳಿ.
ಸ್ಮಾರ್ಟ್ಫೋನ್ ಅನ್ನು ಸಮಯಕ್ಕೆ ಸರಿಯಾಗಿ ಅಪ್ಡೇಟ್ ಮಾಡುವುದರಿಂದ ಫೋನ್ ನೆಟ್ವರ್ಕ್, Wi-Fi ಡ್ರೈವರ್ ರಿಫ್ರೆಶ್ ಆಗುತ್ತವೆ.
ಸಾಧ್ಯವಾದರೆ ಕೇವಲ ಗಾಳಿಯಾಡುವ ಕಡೆಗೆ ಫೋನ್ ಬಳಸುವುದು ಸರಳ ಮತ್ತು ಬುದ್ದಿವಂತಿಕೆಯ ಕಾರ್ಯವಾಗಿದ್ದು ಕೈಯಲ್ಲಿ ಎತ್ತಿ ಹಿಡಿಯುವ ಅಗತ್ಯವಿಲ್ಲ.
ಕೊನೆಯದಾಗಿ ಒಮ್ಮೆ ಸ್ಮಾರ್ಟ್ಫೋನ್ Data ಆನ್ ಮಾಡಿಟ್ಟು ಫ್ಲಯಿಟ್ ಮೋಡ್ ಆನ್ ಮಾಡಿ ಆಫ್ ಮಾಡಿ ನೋಡಬಹುದು. ಇದರ ನಂತರ ನೆರೆವಾಗಿ ಫೋನ್ ಅನ್ನು ಒಮ್ಮೆ ರೀಸ್ಟಾರ್ಟ್ (Restart) ಮಾಡಿ ಅಷ್ಟೇ.