ನಿಮ್ಮ ಪ್ಯಾನ್ ಕಾರ್ಡ್ ನಲ್ಲಿ ನಿಮ್ಮ ಮಾಹಿತಿ ತಪ್ಪಿದ್ದರೆ ಅದನ್ನು ಸುಲಭವಾಗಿ ಹೇಗೆ ಸರಿಪಡಿಸಬವುದೆನ್ನುವುದನ್ನು ತಿಳಿಯಿರಿ.

Updated on 25-Jul-2018
HIGHLIGHTS

ಪ್ಯಾನ್ ಕಾರ್ಡ್ ನಲ್ಲಿ ಯಾವುದೇ ಮಾಹಿತಿ ಸರಿಪಡಿಸಲು ಈ ಮಾಹಿತಿಯನ್ನು ಹಂತ ಹಂತವಾಗಿ ಗಮನವಿಟ್ಟು ತಿಳಿದುಕೊಳ್ಳಿ.

ಈ ಪ್ರಕ್ರಿಯೆಯು ನಿಮ್ಮ ಪಾನ್ ಕಾರ್ಡಿನ ಮರುಮುದ್ರಣಕ್ಕಾಗಿ ಅರ್ಜಿ ಸಲ್ಲಿಸಲು ಅಥವಾ ತಪ್ಪಾದ ಹೆಸರು, ಫೋಟೋ, ಹುಟ್ಟಿದ ದಿನಾಂಕ, ಫೋನ್ ನಂಬರ್, ಇಮೇಲ್ ಐಡಿ ಮುಂತಾದ ಯಾವುದೇ ದೋಷಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ನಲ್ಲಿ ನಿಮ್ಮ ಮಾಹಿತಿ ತಪ್ಪಿದ್ದರೆ ಅದನ್ನು ಸುಲಭವಾಗಿ ಹೇಗೆ ಸರಿಪಡಿಸಬವುದೆಕ್ಕೆ ಪ್ಯಾನ್ ಕಾರ್ಡಿನ ಪರಿಷ್ಕರಣೆಗಾಗಿ ಬೇಕಾದ ದಾಖಲೆಗಳ ಪಟ್ಟಿ ಹೊಸ ಪಾನ್ ಕಾರ್ಡಿಗೆ ಅರ್ಜಿ ಸಲ್ಲಿಸುವಂತೆಯೇ ಆಗಿದೆ. ಗುರುತಿನ ಐಡಿ  ಪುರಾವೆ, ವಿಳಾಸ ಐಡಿ ಮತ್ತು ಹುಟ್ಟಿದ ದಿನಾಂಕಕ್ಕಾಗಿ ನೀವು ದಾಖಲೆಗಳನ್ನು ಹೊಂದಿರಬೇಕು. ಈ ಕೆಳಗಿನ ಕ್ರಮಗಳಲ್ಲಿ ಯಾವುದೇ ಮಾಹಿತಿ ಸರಿಪಡಿಸಲು ಈ ಮಾಹಿತಿಯನ್ನು ಹಂತ ಹಂತವಾಗಿ ಗಮನವಿಟ್ಟು ತಿಳಿದುಕೊಳ್ಳಿರಿ.

1. ಮೊದಲಿಗೆ NSDL ಅಥವಾ UTITSL ವೆಬ್ಸೈಟ್ಗೆ ಹೋಗಿ ಅಪ್ಲಿಕೇಶನ್ ಅಡಿಯಲ್ಲಿ ಡ್ರಾಪ್-ಡೌನ್ ಮೆನು ಕ್ಲಿಕ್ ಮಾಡಿ. 

2. ಇಲ್ಲಿ ಅಸ್ತಿತ್ವದಲ್ಲಿರುವ ಪ್ಯಾನ್ ಡೇಟಾ / ಪ್ಯಾನ್ ಕಾರ್ಡ್ನ ಮರುಮುದ್ರಣದಲ್ಲಿ ಬದಲಾವಣೆಗಳು ಅಥವಾ ಕರೆಕ್ಷನನ್ನು ಆಯ್ಕೆ ಮಾಡಿ. 

3. ಈಗ ಇಲ್ಲಿ ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಕ್ಯಾಪ್ಚಾ ಕೋಡನ್ನು ಸಹ ನಮೂದಿಸಿ ನಂತರ Submit ಮೇಲೆ ಕ್ಲಿಕ್ ಮಾಡಿ.

4. ಕೆಂಪು ನಕ್ಷತ್ರ ಚಿಹ್ನೆ ಗುರುತಿಸಲಾದ ಜಾಗದಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ತಪ್ಪದೆ ನಮೂದಿಸಿ ಮತ್ತು ಮುಂದೆ ಕ್ಲಿಕ್ ಮಾಡಿ.

5. ಇದರ ಎಲ್ಲಾ ಮಾಹಿತಿ ನಿಮ್ಮ ಆಧಾರ್ ಕಾರ್ಡ್ನಲ್ಲಿರುವ ಹಾಗೆ ನಿಖರವಾಗಿ ಉಲ್ಲೇಖಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿರಿ.

6. ಈಗ ನೀವು ನಿಮ್ಮ ಅಪ್ಲಿಕೇಶನ್ನೊಂದಿಗೆ ಸಲ್ಲಿಸಲು ಬಯಸುವ ಡಾಕ್ಯುಮೆಂಟ್ಗಳನ್ನು ಆಯ್ಕೆ ಮಾಡಿರಿ

7. ಈಗ ನೀವು ಪಾನ್ ಕಾರ್ಡಿನ ಶುಲ್ಕ ಪರಿಷ್ಕರಣೆ ಅಥವಾ ಪ್ಯಾನ್ ಕಾರ್ಡ್ ವೆಚ್ಚವನ್ನು 120 ಪಾವತಿಸಿರಿ.

8. ಟ್ರಾನ್ಸಾಕ್ಷನ್ ಯಶಸ್ವಿಯಾದರೆ ಬ್ಯಾಂಕ್ ರೆಫ್ರೆನ್ಸ್ ಸಂಖ್ಯೆ ಅಥವಾ ಟ್ರಾನ್ಸಾಕ್ಷನ್ ರೆಫ್ರೆನ್ಸ್ ಸಂಖ್ಯೆಯನ್ನು ಪಡೆಯುವಿರಿ. 

9. ನೀವು ಬಾಕ್ಸ್ ಅನ್ನು ಗುರುತಿಸಲು ದೃಢೀಕರಿಸಬೇಕಾಗುತ್ತದೆ ಮತ್ತು ನಂತರ ಪ್ರಮಾಣೀಕರಿಸಲು ಕ್ಲಿಕ್ ಮಾಡಿ.

10. ಈಗ ಇಲ್ಲಿ ಯಾವುದೇ ಮಾಹಿತಿ ತಪ್ಪಿದ್ದರೆ ಅದನ್ನು ಸುಲಭವಾಗಿ ಸರಿಪಡಿಸಬವುದು ನಂತರ Continue ಮೇಲೆ ಕ್ಲಿಕ್ ಮಾಡಿ.

11. ನಂತರ ಈಗ OTP ಅನ್ನು ಜನರೇಟ್ ಮಾಡಲು ಆಯ್ಕೆಯನ್ನು ನೀಡುತ್ತದೆ ಅದನ್ನು ಕ್ಲಿಕ್ ಮಾಡಿರಿ. 

12. ಕೊನೆಯಾದಾಗಿ ನೀವು ಸಲ್ಲಿಸಿದಂತೆ (ಸರಿಪಡಿಸಿದ) ನಿಮ್ಮ ಅರ್ಜಿಯನ್ನು ನೀವು ನೋಡುವ ಪುಟಕ್ಕೆ ಮರಳುವಿರಿ.   

13. ಇದನ್ನು PDF ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ನಿಮಗೆ ಇಮೇಲ್ ಮೂಲಕವು ಇದರ ಮಾಹಿತಿ ಬರುತ್ತದೆ.

ಪ್ಯಾನ್ ಕಾರ್ಡ್ ಆನ್ಲೈನ್ ಅನ್ನು ನವೀಕರಿಸಲು ಅಥವಾ ಮರುಮುದ್ರಣ ಮಾಡಲು ಇದು ಸಂಪೂರ್ಣ ಪ್ರಕ್ರಿಯೆಯಾಗಿದೆ. ನಿಮ್ಮ ಅರ್ಜಿಯನ್ನು ಪ್ರಕ್ರಿಯೆಗೊಳಿಸಿದ ನಂತರ ನಿಮ್ಮ ಪಾನ್ ಕಾರ್ಡ್ ಅನ್ನು ಮುದ್ರಿಸಲಾಗುವುದು ಮತ್ತು ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

 

 

 

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :