Zee5 Offer: ನೀವು ಯಾವುದೇ ಹೆಚ್ಚು ಹಣ ನೀಡದೆ OTT ಪ್ರಯೋಜನ ಪಡೆಯುದು ಹೇಗೆ ಗೊತ್ತಾ!

Updated on 05-May-2023
HIGHLIGHTS

ಭಾರತದಲ್ಲಿನ ಅತ್ಯಂತ ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳಲ್ಲಿ Zee5 ಒಂದಾಗಿದೆ

Zee5 ಚಂದಾದಾರಿಕೆ ಅನ್ನು ನೀವು ಮುಖ್ಯವಾಗಿ 3 ರೀತಿಯಲ್ಲಿ ಉಚಿತವಾಗಿ ಪಡೆಯಬಹುದು

ಇವುಗಳನ್ನು ವೀಕ್ಷಿಸಲು ನೀವು ಉತ್ತಮ ಯೋಜನೆಯನ್ನು ಖರೀದಿಸುವ ಮೂಲಕ Zee5 ಚಂದಾದಾರಿಕೆ ಲಭ್ಯ

Zee5 Offer: ಭಾರತದಲ್ಲಿನ ಅತ್ಯಂತ ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳಲ್ಲಿ Zee5 ಒಂದಾಗಿದೆ. ಇದು ಕನ್ನಡ, ಇಂಗ್ಲಿಷ್, ಹಿಂದಿ, ಮಲಯಾಳಂ, ತಮಿಳು, ತೆಲುಗು, ಪಂಜಾಬಿ, ಮರಾಠಿ, ಬೆಂಗಾಲಿ, ಭೋಜ್‌ಪುರಿ, ಒಡಿಯಾ ಮತ್ತು ಗುಜರಾತಿ ಸೇರಿದಂತೆ 12 ಭಾಷೆಗಳಲ್ಲಿ ಮನರಂಜನೆಯನ್ನು ನೀಡುತ್ತಿದೆ. ಅಲ್ಲದೆ Zee5 90 ಕ್ಕೂ ಹೆಚ್ಚು ಲೈವ್ ಸ್ಟೇಷನ್‌ಗಳೊಂದಿಗೆ 4,500 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ನೀಡುತ್ತಿದೆ. ಇವುಗಳನ್ನು ವೀಕ್ಷಿಸಲು ನೀವು ಉತ್ತಮ ಯೋಜನೆಯನ್ನು ಖರೀದಿಸುವ ಮೂಲಕ Zee5 ಚಂದಾದಾರಿಕೆಯನ್ನು ಪಡೆಯಬೇಕಾಗುತ್ತದೆ. 

Zee5 ಪ್ರೀಮಿಯಂ ಚಂದಾದಾರಿಕೆ ಪ್ರಯೋಜನಗಳು:

ನಿಮ್ಮ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್ ಟಿವಿಯಲ್ಲಿ ನಿಮ್ಮ ನೆಚ್ಚಿನ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ನೀವು ವಿವಿಧ ವಿಧಾನಗಳ ಮೂಲಕ Zee5 ಗೆ ಚಂದಾದಾರಿಕೆಯನ್ನು ಪಡೆಯಬಹುದು. Zee5 ಪ್ರೀಮಿಯಂ ಚಂದಾದಾರಿಕೆ ಪಡೆಯಲು ವರ್ಷಕ್ಕೆ 599 ರೂ ಅಥವಾ ಮೂರು ತಿಂಗಳಿಗೆ 399 ರೂ ವೆಚ್ಚವಾಗುತ್ತದೆ. ಈ ಚಂದಾದಾರಿಕೆಯು 2,800+ ಬ್ಲಾಕ್‌ಬಸ್ಟರ್ ಚಲನಚಿತ್ರಗಳು, 150+ ವೆಬ್ ಸರಣಿಗಳು, ಹೊಸ ಟಿವಿ ಶೋಗಳು ಮತ್ತು AltBalaji ವಿಷಯಗಳಿಗೆ ಜಾಹೀರಾತು ಮುಕ್ತದೊಂದೊಗೆ ಪ್ರವೇಶದ ಜೊತೆಗೆ ಮೂರು ಸ್ಕ್ರೀನ್ ಗಳ ಬೆಂಬಲವನ್ನು ನೀಡುತ್ತದೆ. 

ಜಿಯೋ ಫೈಬರ್‌ನಲ್ಲಿ Zee5 ಪ್ರೀಮಿಯಂ ಚಂದಾದಾರಿಕೆ

ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್‌ನೊಂದಿಗೆ Zee5 ಪ್ರೀಮಿಯಂ ಚಂದಾದಾರಿಕೆಯು ಲಭ್ಯವಿದೆ. ಆದ್ದರಿಂದ ನೀವು ಜಿಯೋ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಹೊಂದಿದ್ದರೆ ಉಚಿತ Zee5 ಚಂದಾದಾರಿಕೆಯನ್ನು ಪಡೆಯಲು ಈ ಹಂತಗಳನ್ನು ಅನುಸರಿಸಿ:

  • ಕನಿಷ್ಠ ರೂ 999 ಬೆಲೆಯ ಯೋಜನೆಯೊಂದಿಗೆ ನಿಮ್ಮ ಜಿಯೋ ಫೈಬರ್ ಸಂಪರ್ಕವನ್ನು ರೀಚಾರ್ಜ್ ಮಾಡಿ.
  • ZEE5 ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ZEE5 ಅಪ್ಲಿಕೇಶನ್ ಅನ್ನು Android/iOS ಫೋನ್‌ನಲ್ಲಿ ಡೌನ್‌ಲೋಡ್ ಮಾಡಿ.
  • ನೀವು ನೋಂದಾಯಿಸಿದ Jio ಫೈಬರ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ.
  • ನಂತರ ನೀವು Zee5 ಪ್ರೀಮಿಯಂ ಚಂದಾದಾರಿಕೆಯಲ್ಲಿ ಎಲ್ಲಾ ವಿಷಯಗಳನ್ನು ಪ್ರವೇಶಿಸಬಹುದು.

ಟೈಮ್ಸ್ ಪ್ರೈಮ್ನಲ್ಲಿ Zee5 ಪ್ರೀಮಿಯಂ ಚಂದಾದಾರಿಕೆ

  • ಟೈಮ್ಸ್ ತನ್ನ ಪ್ರೈಮ್ ಚಂದಾದಾರರಿಗೆ Zee5 ಪ್ರವೇಶವನ್ನು ನೀಡುತ್ತಿದೆ.
  • ಟೈಮ್ಸ್ ಪ್ರೈಮ್ ಚಂದಾದಾರಿಕೆಯ ಬೆಲೆ 999 ರೂ ಆಗಿದ್ದು ಇದರಲ್ಲಿ ಟೇಕ್ ಮಿ ಟು ZEE5' ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕು.
  • ನಿಮ್ಮ ನೋಂದಾಯಿತ Times Now ಮೊಬೈಲ್ ಸಂಖ್ಯೆಯೊಂದಿಗೆ ಲಾಗ್ ಇನ್ ಮಾಡುವುದರಿಂದ ZEE5 ನಲ್ಲಿ ಉಚಿತವಾಗಿ ಒಂದು ವರ್ಷದ ಸದಸ್ಯತ್ವವನ್ನು ಪಡೆಯಬಹುದು.
  • ಅನೇಕ ಇತರ ಪ್ರಯೋಜನಗಳ ಜೊತೆಗೆ ಟೈಮ್ಸ್ ಪ್ರೈಮ್ ಮೆಮವೇರ್ಶಿಪ್ SonyLIV ಗೆ 6 ತಿಂಗಳ ಉಚಿತ ಚಂದಾದಾರಿಕೆ ಮತ್ತು Gaana Plus ನ 1 ವರ್ಷದ ಉಚಿತ ಪ್ರ ಚಂದಾದಾರಿಕೆಯನ್ನು ಒಳಗೊಂಡಿದೆ.

ಪೆಟಿಎಂನಲ್ಲಿ Zee5 ಪ್ರೀಮಿಯಂ ಚಂದಾದಾರಿಕೆ

  • ನೀವು  Paytm First  ಬಳಸಿದರೆ Zee5 ಮೆಮವೇರ್ಶಿಪ್ ನಿಮಗೆ ಲಭ್ಯವಿರುತ್ತದೆ.
  • 899 ರೂ ಪಾವತಿಸುವ ಮೂಲಕ Paytm First  ಸದಸ್ಯತ್ವವನ್ನು ಖರೀದಿಸಿ. ಇದರಿಂದ ಸಾಕಷ್ಟು ಪ್ರಯೋಜನಗಳಿವೆ.
  • ನಿಮ್ಮ Paytm First ಸಂಖ್ಯೆಯನ್ನು ಬಳಸಿ Zee5 ಗೆ ಲಾಗ್ ಇನ್ ಮಾಡುವ ಮೂಲಕ 6 ತಿಂಗಳ ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯಬಹುದು.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :