ಭಾರತದಲ್ಲಿ ಒಂದು ಹೊಸ LPG (Liquid Petroleum Gas) ಕನೆಕ್ಷನನ್ನು ಪಡೆಯುವುದೇಗೆ ಇದರ ಬಗ್ಗೆ ನಿಮಗೇಷ್ಟು ಗೋತ್ತು..ಇದರ ಸಂಪೂರ್ಣವಾದ ಮಾಹಿತಿ ಇಲ್ಲಿ ಪಡೆಯಬವುದು. ಇದಕ್ಕಾಗಿ ನೀವು ಮೊದಲಿಗೆ ಒಂದು ಬಾಡಿಗೆ ಅಥವಾ ಸ್ವಂತ ಮನೆಯನ್ನು ಹೊಂದಿರಬೇಕಾಗುತ್ತದೆ. ಜೋತೆಗೆ ತಮ್ಮದೇಯಾದ ಗುರಿತಿನ ಪತ್ರಗಳನ್ನು ಹೊಂದಿರಬೇಕಾಗುತ್ತದೆ. LPG ಕನೆಕ್ಷನನ್ನು ಪಡೆಯಲು ಭಾರತದ ಅನೇಕ ಜನರಿಗೆ ಮುಖ್ಯವಾದ ಕಳವಳವಾಗಿದೆ. ಹಾಗದರೆ ಹೊಸ ಗ್ಯಾಸ್ ಸಂಪರ್ಕವನ್ನು ಪಡೆಯಲು ಗಮನದಲ್ಲಿಡಬೇಕಾದ ಸಂಪೂರ್ಣ ಮಾರ್ಗದರ್ಶಿಯ ಮಾಹಿತಿ ಇಲ್ಲಿದೆ.
ನೀವು ಮಾಡಬೇಕಾಗಿರುವುದು:
1. ಮೊದಲಿಗೆ ನಿಮ್ಮ ಪ್ರದೇಶದಲ್ಲಿನ ಸಮೀಪವಿರುವ ಹತ್ತಿರದ ಗ್ಯಾಸ್ ಏಜೆನ್ಸಿ ಆಫೀಸನ್ನು ಪತ್ತೆ ಮಾಡಿ.
2. ಪ್ರತಿಯೊಂದು ಪ್ರದೇಶವು ಈ ಏಜೆನ್ಸಿ ಆಫೀಸನ್ನು ಹೊಂದಿದ್ದು ಅದು ನಿರ್ದಿಷ್ಟ ಪ್ರದೇಶದ ಕಂಪನಿ ವತಿಯಿಂದ ಸಿಲಿಂಡರ್ಗಳನ್ನು ಪೂರೈಸುತ್ತದೆ.
3. ಗ್ಯಾಸ್ ಏಜೆನ್ಸಿ ಆಫೀಸಿಂದ ಹೊಸ ಗ್ಯಾಸ್ ಸಂಪರ್ಕಕ್ಕಾಗಿರುವ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿರಿ.
4. ಈ ಅರ್ಜಿಯೊಂದಿಗೆ ನಿಮ್ಮ ಗುರುತಿನ ಮತ್ತು ವಿಳಾಸದ ಡೊಕ್ಯೂಮೆಂಟ್ಗಳನ್ನು (Xerox ಮಾತ್ರ) ನೀಡುವ ದಾಖಲೆಗಳನ್ನು ಸಲ್ಲಿಸಿರಿ.
5. ನೋಂದಣಿಯ ನಂತರ ನೋಂದಣಿ ಮತ್ತು ನೋಂದಣಿ ಸಂಖ್ಯೆಯ ದಿನಾಂಕದೊಂದಿಗೆ ಸಂಸ್ಥೆ ನಿಮ್ಮ ಹೆಸರನ್ನು ನೀವು ರಶೀದಿಯನ್ನು ಬಿಡುಗಡೆ ಮಾಡುತ್ತದೆ.
6. ನಿಮ್ಮ ಬುಕಿಂಗ್ ಸಂಖ್ಯೆ ಬಂದಾಗ ಸಂಸ್ಥೆಯು ಅದರ ಬಗ್ಗೆ ಗ್ರಾಹಕರಿಗೆ ತಿಳಿಸುತ್ತದೆ. ಆದರೆ ಕೆಲವು ಏಜೆನ್ಸಿಗಳು ಇದನ್ನು ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
7. ಕೆಲವೊಂದು ಕ್ರಮಗಳನ್ನು ಪೂರ್ಣಗೊಳಿಸುವ ಅವಧಿಯನ್ನು ವಿಸ್ತರಿಸುತ್ತದೆ. ಆ ಸಮಯದಲ್ಲಿ ಗ್ರಾಹಕರು LPG ನೋಂದಣಿ ಸ್ವೀಕರಿಸಲು ಮತ್ತು ರೆಗ್ಯುಲೇಟರ್ / ಸಿಲಿಂಡರ್ / ಡೆಪೋಸಿಟ್ ಪಾವತಿಗಳನ್ನು ಮಾಡಬೇಕಾಗುತ್ತದೆ.
ಈ LPG ನೋಂದಯಿಸಲು ನೀವು ನೀಡಬೇಕಾಗಿರುವ ಡಕ್ಯೂಮೆಂಟ್ಗಳು.
POI : ವೋಟರ್ ಐಡಿ, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಸರ್ಕಾರಿ ಮಾನ್ಯತೆಯ ಯಾವುದೇ ಫೋಟೋ ಐಡಿ ನೀಡಬವುದು.
POA: ವೋಟರ್ ಐಡಿ, ಪಾಸ್ಪೋರ್ಟ್, ರೇಷನ್ ಕಾರ್ಡ್, ವಿದ್ಯುತ್ ಬಿಲ್ (3 ತಿಂಗಳಿಗಿಂತ ಹಳೆಯದಾಗಿರಬಾರದು), ಟೆಲಿಫೋನ್ ಬಿಲ್ (3 ತಿಂಗಳಿಗಿಂತ ಹಳೆಯದಾಗಿರಬಾರದು), ಬಾಡಿಗೆ ರಶೀದಿಗಳು, ಮನೆಯ ರಿಜಿಸ್ಟ್ರೇಷನ್ ಲೆಟರ್, ಆಧಾರ್ ಲೆಟರ್ ಮತ್ತು ಸರ್ಕಾರಿ ಮಾನ್ಯತೆಯ ಯಾವುದೇ ಡೊಕ್ಯೂಮೆಂಟ್ ಮನೆಯ ವಿಳಾಸವನ್ನು ಹೊಂದಿರುವುದನ್ನು ನೀಡಬವುದು.
ಈ ಹೊಸ LPG ಪಡೆಯಲು ಆಗುವ ವೆಚ್ಚಗಳೆಷ್ಟು ಗೋತ್ತಾ!
– ಒಂದು ಖಾಲಿ ಸಿಲಿಂಡರ್ನ ಬೆಲೆ: 1450/- ರೂಗಳು (ರಿಫಾಂಡೆಬಲ್/ ಹಿಂಪಡಿಯಬವುದು).
– ಒಂದು ತುಂಬಿದ ಸಿಲಿಂಡರ್ನ ಬೆಲೆ (14.2kg): ಸ್ಥಳಗಳ ಮೇಲೆ ನಿರ್ಧಾರವಾಗಿರುತ್ತದೆ.
– ಒಂದು ರೆಗ್ಯುಲೇಟರ್ ವೆಚ್ಚ: 150 ರೂಗಳು (ರಿಫಾಂಡೆಬಲ್/ ಹಿಂಪಡಿಯಬವುದು).
– ಗ್ಯಾಸ್ ಪಾಸ್ಬುಕ್ನ ವೆಚ್ಚ: 25 ರೂಗಳು.
– ದಾಖಲೆ ಶುಲ್ಕಗಳು: ಕಂಪನಿಗಳ ಮೇಲೆ ನಿರ್ಧಾರವಾಗಿರುತ್ತದೆ.
– ಒಂದು ಗ್ಯಾಸ್ ಸ್ಟೋವ್ನ ವೆಚ್ಚ (ಐಚ್ಛಿಕವಾಗಿರುತ್ತದೆ): ಗ್ಯಾಸ್ ಸ್ಟೋವ್ ಮಾದರಿಯ ಆಧಾರದ ಮೇಲೆ ನಿರ್ಧಾರವಾಗಿರುತ್ತದೆ.
ಸಾಮಾನ್ಯ LPG ಕನೆಕ್ಷನ್ ಪಡೆಯುವ ಸಮಯದಲ್ಲಿ ನಿಮಗೇನೇನು ಸಿಗುತ್ತದೆ.
– ಇಲ್ಲ 14.2kg ತುಂಬಿದ LPG ಸಿಲಿಂಡರ್
– ಒಂದು ರೆಗ್ಯುಲೇಟರ್
– ಒಂದು ರಬ್ಬರ್ ಪೈಪ್
– ಒಂದು ಗ್ಯಾಸ್ ಸ್ಟೋವ್ (ಐಚ್ಛಿಕವಾಗಿರುತ್ತದೆ)
– ಗ್ಯಾಸ್ ಕನ್ನೆಕ್ಷಿನ ಒಂದು ಪಾಸ್ಬುಕ್
– ಗ್ಯಾಸ್ ಕನ್ನೆಕ್ಷಿನ ಸರ್ಟಿಫಿಕೇಟ್
ಭಾರತದಲ್ಲಿ ಈ 3 ಜನಪ್ರಿಯ ಗ್ಯಾಸ್ ಸಿಲಿಂಡರ್ ಸಂಸ್ಥೆಗಳಿವೆ.
ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (Bharat Gas).
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (HP Gas).
ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ (Indane).
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.