ನಿಮ್ಮ ಇಮೇಜ್ ಅನ್ನು ಕ್ರಾಪ್ ಮಾಡದೆಯೇ ಫುಲ್ ಸೈಜ್ WhatsApp ಪ್ರೊಫೈಲ್ ಹಾಕುವುದೇಗೆ!

Updated on 16-Apr-2020
HIGHLIGHTS

ನಿಮ್ಮ WhatsApp ಬಳಕೆಯನ್ನು ಮತ್ತಷ್ಟು ಉನ್ನತಗೊಳಿಸಲು ನಿಮಗೆ ಬೇಕಾದ ಉಪಯುಕ್ತ ಸಲಹೆ ಇಲ್ಲಿದೆ

ವಾಟ್ಸಾಪ್ ತನ್ನ ಯಶಸ್ಸನ್ನು ಮುಂದುವರೆಸಿ ಇತ್ತೀಚೆಗೆ ಒಂದು ಮೈಲಿಗಲ್ಲು ತಲುಪಿದೆ. ಇದು ಫೇಸ್‌ಬುಕ್ ಅನ್ನು ಮೀರಿಸುವ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಮುಖ ಸಂದೇಶ ಸೇವೆಯಾಗಿದೆ. ನೀವು ಮನೆಯಿಂದ ದೂರದಲ್ಲಿರುವಾಗ ನಿಮ್ಮ ಕುಟುಂಬ ಮತ್ತು ಸ್ನೇಹಿತರ ನಾಡಿಮಿಡಿತವನ್ನು ತಿಳಿಯಲು ನೀವು ವಾಟ್ಸಾಪ್ ಬಳಸಬಹುದು. ಈ ಮಿಂಚಿನ ವೇಗದ ಸಂದೇಶ ಸೇವೆಯ ಮೂಲಕ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಫಾರ್ಮ್ ಮೆಸೇಜ್ಗಳು, ಫೋಟೋಗಳು ಮತ್ತು ವೀಡಿಯೊಗಳಲ್ಲಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ನಿಮ್ಮ ವಾಟ್ಸಾಪ್ ಬಳಕೆಯನ್ನು ಮತ್ತಷ್ಟು ಮಸಾಲೆಯುಕ್ತಗೊಳಿಸಲು ಉಪಯುಕ್ತ ಸಲಹೆ ಇದೆ. 

ನಿಮ್ಮ ಫೋಟೋವನ್ನು ನಿಮ್ಮ ಪ್ರೊಫೈಲ್ ಚಿತ್ರವಾಗಿ ವಾಟ್ಸಾಪ್‌ಗೆ ಕ್ರಾಪ್ ಮಾಡದೆಯೇ ಅದನ್ನು ಅಪ್‌ಲೋಡ್ ಮಾಡುವುದನ್ನು ತಿಳಿಯಿರಿ. ಕ್ರಾಪ್ ಮಾಡಿದ ಪ್ರೊಫೈಲ್ ಫೋಟೋ ಹೇಗಾದರೂ ಉತ್ತಮವಾಗಿ ಕಾಣುವುದಿಲ್ಲ. ಫುಲ್ ಸೈಜ್ ಗಾತ್ರದ ಫೋಟೋಗಳನ್ನು ಪ್ರೊಫೈಲ್ ಚಿತ್ರವಾಗಿ ಅಪ್‌ಲೋಡ್ ಮಾಡುವ ಮೂಲಕ ನಿಮ್ಮ ಕ್ಲೋಸಪ್ ಫೋಟೋವನ್ನು ನಿಮ್ಮ ಪ್ರೊಫೈಲ್ ಚಿತ್ರವಾಗಿ ವಾಟ್ಸಾಪ್‌ನಲ್ಲಿ ತೋರಿಸುವುದನ್ನು ತಪ್ಪಿಸಬಹುದು. ನಿಮ್ಮ ವಾಟ್ಸಾಪ್ ಪ್ರೊಫೈಲ್ ಚಿತ್ರವಾಗಿ ಪೂರ್ಣ ಗಾತ್ರದ ಫೋಟೋವನ್ನು ಹೊಂದಿಸಲು Square ಎಂಬ ಉಚಿತ ಅಪ್ಲಿಕೇಶನ್ ಅನ್ನು ಪಡೆಯಬೇಕಾಗುತ್ತದೆ.

  

>ಮೊದಲಿಗೆ ನಿಮ್ಮ ಫೋನಿನ ಫೋಟೋ ಆಯ್ಕೆ ಮಾಡಲು ಗ್ಯಾಲರಿಗೆ ಭೇಟಿ ನೀಡಿ ಆಯ್ಕೆ ಮಾಡಿ.  ಇದರ ನಂತರ ಈ ಸ್ಕ್ವೇರ್ ಅಪ್ಲಿಕೇಶನ್ ತೆರೆದು ಅದರಲ್ಲಿ ನೀವು ಬಯಸುವ ಫೋಟೋವನ್ನು ಆಯ್ಕೆ ಮಾಡಿಕೊಳ್ಳಿ.

>ಇದರ ನಂತರ ಟ್ಯಾಪ್ ಮಾಡಿ ನಿಮಗೆ ಬೇಕಾದಲ್ಲಿ ಬಾರ್ಡರ್ ಕಲರ್ ಬದಲಾಯಿಸಲು ಕೆಳಭಾಗದಲ್ಲಿರುವ ಬಣ್ಣ ಡ್ರಾಪರ್ ಐಕಾನ್ ನೋಡಿ. ಇಲ್ಲಿ  ಕಪ್ಪು ಬಣ್ಣ ಯೋಗ್ಯವಾಗಿದೆ.

>ನಂತರ ಮೇಲಿನ ಸೇವ್ / ಫ್ಲಾಪಿ ಡಿಸ್ಕ್ ಐಕಾನ್ ಟ್ಯಾಪ್ ಮಾಡುವ ಮೂಲಕ ಫೋಟೋವನ್ನು ಸೇವ್ ಮಾಡಬವುದು. 

>ಕೊನೆಗೆ ನಿಮ್ಮ ವಾಟ್ಸಾಪ್ ತೆರೆದು ನೀವು ಸೇವ್ ಮಾಡಿದ ಫೋಟೋವನ್ನು ನಿಮ್ಮ ಪ್ರೊಫೈಲ್ ಚಿತ್ರವಾಗಿ ಹೊಂದಿಸಿ. ಈ ಸಲಹೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಶೇರ್, ಲೈಕ್ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :