ನೀವೊಬ್ಬ ಭಾರತೀಯರಾಗಿದ್ದರೆ ಆಧಾರ್ ಕಾರ್ಡ್ (Aadhaar Card) ಬಗ್ಗೆ ನಿಮಗೆ ತಿಳಿದಿರಲೇಬೇಕು. ಏಕೆಂದರೆ ಆಧಾರ್ ಕಾರ್ಡ್ ಭಾರತೀಯರ ಗುರುತಿನ ಅತಿ ಮುಖ್ಯ ದಾಖಲೆಯಾಗಿದೆ. ಏಕೆಂದರೆ ಇದರ ಮೂಲಕ ನಿಮ್ಮ ಮತ್ತು ನಿಮ್ಮ ವಿಳಾಸವನ್ನು ಪರಿಗಣಿಸಲಾಗುತ್ತದೆ. ಅಲ್ಲದೆ ನಿಮ್ಮ ಫೋನ್ ಸಂಖ್ಯೆಯನ್ನು ಲಿಂಕ್ ಮಾಡುವುದರಿಂದ ಹಿಡಿದು ನಿಮ್ಮ ಪ್ರಮುಖ ಬಯೋಮೆಟ್ರಿಕ್ ಮಾಹಿತಿಯನ್ನು ವಿವರಗಳನ್ನು ಅಪ್ಡೇಟ್ ಮಾಡಲು ಒಂದಲ್ಲ ಒಂದು ರೀತಿಗೆ ಅದರಲ್ಲೂ ನಿಮ್ಮ ವಿಳಾಸ, ಮೊಬೈಲ್ ನಂಬರ್ ಅಥವಾ ಬಯೋಮೆಟ್ರಿಕ್ ಡೀಟೇಲ್ಸ್ ಅಪ್ಡೇಟ್ ಮಾಡಲು ಆಧಾರ್ ಸೇವಾ ಕೇಂದ್ರಕ್ಕೆ (Aadhar Seva Kendra) ಭೇಟಿ ನೀಡಬೇಕಾಗಬಹುದು.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈ ಸೇವೆಯನ್ನು ಜನಸಾಮಾನ್ಯರ ಕೈಗೆ ನೀಡಿದ್ದು ನಿಮ್ಮ ಹತ್ತಿರದ ಆಧಾರ್ ಕೇಂದ್ರವನ್ನು (Aadhar Seva Kendra) ಹುಡುಕಲು ನೀವು ಪ್ರಯತ್ನಿಸುತ್ತಿದ್ದರೆ ನಿಮಗೆ ಮತ್ತಷ್ಟು ಸುಲಭಗೊಳಿಸಲು ತ್ವರಿತ ಮಾರ್ಗದರ್ಶಿಯನ್ನು ನೀಡಿದ್ದೇವೆ. ಆದರೆ ಸಾಮಾನ್ಯವಾಗಿ ಆಧಾರ್ ಕೇಂದ್ರ ಎಂದ ಕೂಡಲೇ ಎಲ್ಲಿದೆ ಅಂಥ ಬೇರೆಯವರಿಗೆ ಕೇಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ನಿಮಗೊತ್ತಾ ನಿಮ್ಮ ಫೋನ್‌ನಲ್ಲೆ ಮನೆಯಲ್ಲಿ ಕುಳಿತು ನಿಮ್ಮ ಹತ್ತಿರ ಆಧಾರ್ ಸೆಂಟರ್ (Aadhar Seva Kendra) ಹುಡುಕಬಹುದು ಹೇಗೆ ಎಂಬುದರ ಕುರಿತು ಹಂತ ಹಂತದ ಮಾರ್ಗದರ್ಶಿ ಮುಂದೆ ನೀಡಿದ್ದೇವೆ.
ಹಂತ 1: ಮೊದಲಿಗೆ ನೀವು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ವೆಬ್‌ಸೈಟ್ ಭೇಟಿ ನೀಡಿ ಅಥವಾ ನೇರವಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು https://appointments.uidai.gov.in/easearch.aspx
ಹಂತ 2: ಇದರ ನಂತರ ನೀವು ಅಧಿಕೃತ ಆಧಾರ್ ನೋಂದಣಿ ಮತ್ತು ಅಪ್ಡೇಟ್ ಕೇಂದ್ರದ ಪುಟಕ್ಕೆ ಹೋಗುತ್ತೀರಾ. ಈಗ ಇಲ್ಲಿ ನಿಮ್ಮ ಹತ್ತಿರ ಆಧಾರ್ ಸೆಂಟರ್ (Aadhar Seva Kendra) ಹುಡುಕಲು 3 ವಿಧಾನಗಳ ಮಾರ್ಗಗಳಿವೆ. ಮೊದಲನೇಯದು ನಿಮ್ಮ ರಾಜ್ಯದ ಮೇರೆಗೆ ಮತ್ತೊಂದು ನಿಮ್ಮ ಏರಿಯಾದ ಪಿನ್ ಕೋಡ್ ಕೊನೆಯದು ಸರ್ಚ್ ಬಾಕ್ಸ್‌ನ ಮೂಲಕ ಇದರಲ್ಲಿ ನೇರವಾಗಿ ನಿಮ್ಮ ನಗರ, ಜಿಲ್ಲೆ ಇತ್ಯಾದಿಗಳಲ್ಲಿ ಟೈಪ್ ಮಾಡಿ ಮುಂದೆ ಸಾಗಬೇಕಾಗುತ್ತದೆ.
ಹಂತ 3: ನಾನು ಇಲ್ಲಿ ನಿಮಗೆ ತಿಳಿಸಲು ಪಿನ್ ಕೋಡ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಇಲ್ಲಿ ನಿಮ್ಮ ಏರಿಯಾದ ಪಿನ್ ಕೋಡ್ ಅನ್ನು ಸರಿಯಾಗಿ ನೀಡಿ ಕೆಳಗೆ ಕ್ಯಾಪ್ಚ ಕೋಡ್ ಅನ್ನು ಸರಿಯಾಗಿ ಟೈಪ್ ಮಾಡಬೇಕಾಗುತ್ತದೆ. ಇದರ ನಂತರ Locate a Centre ಮೇಲೆ ಕ್ಲಿಕ್ ಮಾಡಿ.
ಹಂತ 4: ಇದರ ನಂತರ ನಿಮಗೆ ಹೊಸ ವೆಬ್‌ಪುಟವು ತೆರೆದುಕೊಳ್ಳುತ್ತದೆ ಈಗ ಹೊಸ ವೆಬ್‌ಪುಟದಲ್ಲಿ ನಿಮಗೆ ನಿಮ್ಮ ಹತ್ತಿರ ಆಧಾರ್ ಸೆಂಟರ್ (Aadhar Seva Kendra) ಪಟ್ಟಿಯನ್ನು ಹೊಂದಿರುತ್ತದೆ. ಈಗ ಇದರಲ್ಲಿ ಸುಮಾರು ಆಧಾರ್ ಸೆಂಟರ್ ವಿಳಾಸ ಮತ್ತು ಅದರ ಕೊನೆಯ ಅಪ್ಡೇಟ್ ಅಂದ್ರೆ ಕೊನೆಯ ಕಾರ್ಯನಿರ್ವಾತ ದಿನ ಲಾಸ್ಟ ಅಪ್ಡೇಟ್ ಅನ್ನು ಸಹ ನೀವು ನೋಡಬಹುದು. ಇದರಲ್ಲಿ ಯಾವುದು ನಿಮಗೆ ಹತ್ತಿರವೋ ಅಲ್ಲಿಗೆ ನಿಮ್ಮ ದಾಖಲೆಗಳೊಂದಿಗೆ ಭೇಟಿ ನೀಡಬಹುದು.