ನಿಮ್ಮ Facebook ಅಲ್ಲಿನ ಫೋಟೋ ಮತ್ತು ವೀಡಿಯೊಗಳನ್ನು Google ಫೋಟೋಗಳಿಗೆ ರಫ್ತು ಮಾಡುವುದು ಹೇಗೆ?

Updated on 07-Jun-2020
HIGHLIGHTS

Facebook ಪ್ರತಿ ಫೋಟೋ ಮತ್ತು ವೀಡಿಯೊವನ್ನು Google ಫೋಟೋಗಳಿಗೆ ವರ್ಗಾಯಿಸಲು ಬಯಸುವವರಿಗೆ ಈ ವೈಶಿಷ್ಟ್ಯ ವಿಶೇಷ

ಇದರ ಅನಂತರ ಸ್ಕ್ರೀನ್ ಮೇಲೆ ಬರುವ ಮೆಸೇಜ್ ಅಲ್ಲಿ ಅನುಮತಿಸು ಬಟನ್ ಕ್ಲಿಕ್ ಮಾಡಿ.

ಫೇಸ್ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಬಯಸುವ ಬಯಸುವವರಿಗೂ ಈ ಫೀಚರ್ ವಿಶೇಷವಾಗಿರಬವುದು

ಫೇಸ್‌ಬುಕ್ ಅಂತಿಮವಾಗಿ ತನ್ನ ಡೇಟಾ ವರ್ಗಾವಣೆ ಸಾಧನವನ್ನು ಜಾಗತಿಕವಾಗಿ ತೆಗೆದುಕೊಳ್ಳುತ್ತಿದೆ. ಕಳೆದ ವರ್ಷ ಯುರೋಪಿನಲ್ಲಿ ಪ್ರಾರಂಭವಾದ ಫೇಸ್‌ಬುಕ್ ಇತರ ಪ್ರದೇಶಗಳಲ್ಲೂ ಈ ವೈಶಿಷ್ಟ್ಯವನ್ನು ಹೊರತರುತ್ತಿದೆ. ಫೋಟೋ ವರ್ಗಾವಣೆ ಸಾಧನವು ಈಗ ಜಾಗತಿಕವಾಗಿ ಫೇಸ್‌ಬುಕ್‌ನಲ್ಲಿ ಎಲ್ಲರಿಗೂ ಲಭ್ಯವಿದೆ. ಅದರ ಡೇಟಾ ವರ್ಗಾವಣೆ ಯೋಜನೆಯ ಭಾಗವಾಗಿರುವ ಈ ಉಪಕರಣ ಬಳಕೆದಾರರು ತಮ್ಮ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಫೇಸ್‌ಬುಕ್‌ನಿಂದ ಗೂಗಲ್ ಫೋಟೋಗಳಿಗೆ ಸ್ಥಳಾಂತರಿಸಲು ಅನುಮತಿಸುತ್ತದೆ. ತಮ್ಮ ಫೇಸ್ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಬಯಸುವ ಜನರಿಗೆ ಅಥವಾ ಪ್ರತಿ ಫೋಟೋ ಮತ್ತು ವೀಡಿಯೊವನ್ನು ಗೂಗಲ್ ಫೋಟೋಗಳಿಗೆ ವರ್ಗಾಯಿಸಲು ಬಯಸುವವರಿಗೆ ಈ ವೈಶಿಷ್ಟ್ಯವನ್ನು ನೀವು ಹೇಗೆ ಬಳಸುವುದೆಂದು ತಿಳಿಯೋಣ.

ಫೇಸ್‌ಬುಕ್​ ಫೋಟೋ & ವೀಡಿಯೊಗಳನ್ನು ವರ್ಗಾಯಿಸುವ ಕ್ರಮ:

1. ನಿಮ್ಮ ಯಾವುದೇ ಬ್ರೌಸರ್‌ನಲ್ಲಿ ಫೇಸ್‌ಬುಕ್ ತೆರೆದು ಲಾಗಿನ್ ಮಾಡಿ. 

2. ಈಗ ಮೇಲಿನ ಬಲ ಮೂಲೆಯಿಂದ ಡೌನ್ ಅಥವಾ ⯆ ಬಾಣದ ಮೇಲೆ ಕ್ಲಿಕ್ ಮಾಡಿ ಮತ್ತು ಸೆಟ್ಟಿಂಗ್‌ಗಳಿಗೆ ಹೋಗಿ

3. ಈಗ ನಿಮ್ಮ ಎಡ ಭಾಗದಲ್ಲಿ Your Facebook Information ಆಯ್ಕೆಯನ್ನು ಕ್ಲಿಕ್ ಮಾಡಿ. 

4. ಇದರ ನಂತರ Transfer a copy of your Photos or Videos ನೋಡಬವುದು ಇದರ ಕೊನೆಯಲ್ಲಿ View ಮೇಲೆ ಕ್ಲಿಕ್ ಮಾಡಿ. 

5. ನಂತರ Choose Destination ಮೇಲೆ ಕ್ಲಿಕ್ ಮಾಡಿ ಡ್ರಾಪ್-ಡೌನ್ ಮೆನು ಕ್ಲಿಕ್ ಮಾಡಿ ಮತ್ತು ಗೂಗಲ್ ಫೋಟೋಗಳನ್ನು ಆಯ್ಕೆ ಮಾಡಿ. 

6. ಈಗ ಫೋಟೋ ಅಥವಾ ವಿಡಿಯೋಗಳನ್ನು ಆಯ್ಕೆ ಮಾಡಿ Next ಮೇಲೆ ಕ್ಲಿಕ್ ಮಾಡಿ. 

7. ಇದರ ನಂತರ ಪಾಸ್ವರ್ಡ್ ಅನ್ನು ನಮೂದಿಸುವ ಮೂಲಕ ನಿಮ್ಮ ಗೂಗಲ್ ಖಾತೆಯನ್ನು ಕಂಫಾರ್ಮ್ ಮಾಡಿ. ಇದರ ಅನಂತರ ಸ್ಕ್ರೀನ್ ಮೇಲೆ ಬರುವ ಮೆಸೇಜ್ ಅಲ್ಲಿ ಅನುಮತಿಸು ಬಟನ್ ಕ್ಲಿಕ್ ಮಾಡಿ. 

ಈ ಮೂಲಕ ಫೇಸ್ಬುಕ್ನಿಂದ ಗೂಗಲ್ ಫೋಟೋಗಳಿಗೆ ಫೋಟೋಗಳನ್ನು ವರ್ಗಾಯಿಸಲು ಅನುಮತಿಯನ್ನು ನೀಡಿ ಅಷ್ಟೇ. ವೀಡಿಯೊಗಳನ್ನು ವರ್ಗಾಯಿಸಲು ನೀವು ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು ಹಂತ 6 ರಲ್ಲಿ ವೀಡಿಯೊವನ್ನು ಆಯ್ಕೆ ಮಾಡಿ. ಇದರ ನಂತರ ನೀವು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಗೂಗಲ್ ಫೋಟೋಗಳಿಗೆ ವರ್ಗಾಯಿಸಲಾಗುತ್ತದೆ. ಮತ್ತು ನೀವು ಈಗ ನಿಮ್ಮ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಬಹುದು ಅಥವಾ ನಿಮಗೆ ಬೇಕಾದರೆ ಸಂಪೂರ್ಣ ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :