ಇಂದಿಗೂ ಸಹ ಹಲವಾರು ಜನರಿಗೆ ATM ನಿಂದ ಹಣ ಪಡೆಯಲು ಬಾರದೇ ಬೇರೆಯವರ ಸಹಾಯ ಪಡೆಯುತ್ತಿದ್ದಾರೆ.
ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಪಡೆಯಲು ಇದು ತುಂಬಾ ಸುಲಭ ಮತ್ತು ಅನುಕೂಲಕರ ಮಾರ್ಗವಾಗಿದೆ. ನೀವು ಹೊಸದಾಗಿ ನಿಮ್ಮ ATM (ಆಟೋಮೇಟೆಡ್ ಟೆಲ್ಲರ್ ಮೇಷನ್) ಕಾರ್ಡ್ ಅನ್ನು ಬ್ಯಾಂಕಿನಿಂದ ಪಡೆಯುತ್ತಿದ್ದರೆ ಮತ್ತು ಅದು ಕಾರ್ಯನಿರ್ವಹಿಸದಿದ್ದರೆ ಚಿಂತಿಸಬೇಡಿ. ಕೆಲವು ಬ್ಯಾಂಕ್ ATM ಕಾರ್ಡ್ಗಳನ್ನು ಸಕ್ರಿಯಗೊಳಿಸಲು ಸಾಮಾನ್ಯವಾಗಿ 24 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ.
ಇದೀಗ ನೀವು ಎಲ್ಲಿಂದಲಾದರೂ ನಿಮ್ಮ ಬ್ಯಾಂಕ್ ಖಾತೆಯಿಂದ ATM ಮೂಲಕ ನಗದನ್ನು ಹಿಂಪಡೆಯಬಹುದು. ನಿಮ್ಮ ATM ಕಾರ್ಡ್ಗಆದಷ್ಟು ನಿಮ್ಮದೇ ಆದ ಒಂದೇ ಬ್ಯಾಂಕಿನಿಂದ ಬಳಸಲು ಪ್ರಯತ್ನಿಸಿರಿ. ಇಲ್ಲದಿದ್ದರೆ ನಿಮ್ಮ ಕಾರ್ಡ್ ಮತ್ತು ATM ಹೊಂದಾಣಿಕೆಯಾಗದಿದ್ದರೆ ಕೆಲವು ಸೇವೆಗಳು ಲಭ್ಯವಿಲ್ಲದಿರಬಹುದು. ಮತ್ತು ಇದು ಕೆಲವೋಮ್ಮೆ ಬೇರೆ ATMಗಳನ್ನು ಬಳಸುವುದರಿಂದ ಟ್ರಾನ್ಸಾಕ್ಷನ್ ಚಾರ್ಜ್ ಆಗುವ ಸಾಧ್ಯತೆಯೂ ಇರುತ್ತದೆ.
ಹಂತ 1: ಮೊದಲು ನಿಮ್ಮ ATM ಅನ್ನು ಬಳಸಲು ನಿಮ್ಮ ಖಾತೆ ಆಕ್ಟಿವ್ ಮತ್ತು ನಿಮ್ಮ ATM ಕಾರ್ಡ್ ವ್ಯಾಲಿಡ್ ಆಗಿರಬೇಕು (ಯಾವುದೇ ಡ್ಯಾಮೇಜ್ ಆಗಿರಬವುದು).
ಹಂತ 2: ಈಗ ATM ಯಂತ್ರದಲ್ಲಿ ನಿಮ್ಮ ATM ಕಾರ್ಡ್ ಅನ್ನು ಹಾಕಿರಿ (ನೀವು ಯಂತ್ರದಲ್ಲಿ ಮಿಟುಕುತ್ತಿರುವ ಹಸಿರು ✷ ಬೆಳಕನ್ನು ನೋಡಿ ಬಳಸಿರಿ) ದಯವಿಟ್ಟು ನಿಮ್ಮ ಕಾರ್ಡ್ ಅನ್ನು ಚಿತ್ರದಲ್ಲಿ ತೋರಿದ ➡️ 》ಕಡೆಯಿಂದ ಸೇರಿಸಬೇಕು ಇಲ್ಲವಾದಲ್ಲಿ ಯಂತ್ರವು ನಿಮ್ಮ ಕಾರ್ಡಿನ ಆದೇಶಗಳನ್ನು ಸ್ವೀಕರಿಸುವುದಿಲ್ಲ.
ಹಂತ 3: ಕಾರ್ಡ್ ಅನ್ನು ಹಾಕಿದ ನಂತರ ಈಗ ಮುಂದುವರೆಯಲು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ (ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಇತರೆ).
ಹಂತ 4: ಭಾಷೆ ಆಯ್ದ ನಂತರ ಈಗ ಪಿನ್ ಹಾಕಬೇಕಿದೆ (ಸ್ನೇಹಿತರೇ ಪಿನ್ ಹಾಕುವ ಮುನ್ನ ಬೇರೆ ಯಾರಾದರೂ ನಿಮ್ಮನ್ನು ಗಮನಿಸುತಿದ್ದಾರೆಯೇ ಅಥವಾ ATM ಒಳಗೆ ಫೋನಿನಲ್ಲಿ ಮಾತನಾಡುತ್ತಿದ್ದಾರೆಯೇ ಎಂಬುದನ್ನು ನೋಡಿ ಅಲ್ಲಿಯ ಸಿಬ್ಬಂದಿಗೆ ತಿಳಿಸಬವುದು ಒಂದು ATM ನಲ್ಲಿ ಒಮ್ಮೆಗೆ ಒಬ್ಬರು ಮಾತ್ರ ಇರಬೇಕು). ಈ ಪಿನನ್ನು ATM ಗೆ ಒರಗಿಕೊಂಡು ಸರಿಯಾದ ಪಿನ್ ಹಾಕಿರಿ.
ಹಂತ 5: ಈಗ ಇಲ್ಲಿ ನೀವು Withdraw Money, Deposit Money, Balance Enquiry, Bill Pay ಮುಂತಾದ ಹಲವು ರೀತಿಯ ಆಯ್ಕೆಗಳನ್ನು ನೀವು ನೋಡಬಹುದು. ನಗದನ್ನು ಪಡೆಯಲು ನೀವು ವಿಥ್ ಡ್ರಾ ಆಯ್ಕೆಯನ್ನು ಪಡೆಯಬೇಕು.
ಹಂತ 6: ಈಗ ನಿಮ್ಮ ಖಾತೆಯ ಪ್ರಕಾರವನ್ನು ಅಂದರೆ (Savings / Current account – 70% ಸಾಮನ್ಯ ಜನರು Savings ಅಕೌಂಟನ್ನು ಪಡೆದಿರುತ್ತಾರೆ) ಆಯ್ಕೆಮಾಡಿರಿ.
ಹಂತ 7: ಖಾತೆಯನ್ನು ಆಯ್ದ ನಂತರ ಈಗ ನೀವು ನಗದು ಪಡೆಯಲು ಬಯಸುವ ಮೊತ್ತವನ್ನು ಟೈಪ್ ಮಾಡಿ. ಸರಿ (Correct) ಎಂಬ ಆಯ್ಕೆಯನ್ನು ಒತ್ತಿರಿ. (ನೀವು ಟೈಪ್ ಮಾಡಿದಷ್ಟು ಹಣ ನಿಮ್ಮ ಖಾತೆಯಲ್ಲಿರಬೇಕು).
ಹಂತ 8: ಈಗ ಕೊನೆಯದಾಗಿ ಅತ್ಯಂತ ಆಸಕ್ತಿದಾಯಕ ಭಾಗವೆಂದರೆ ನಗದು ವಿತರಕ ಯಂತ್ರದಿಂದ ಹಣ 30 ಸೆಕೆಂಡ್ಗಳಲ್ಲಿ ಬರುತ್ತದೆ. ಅಲ್ಲಿಂದ ಮೊದಲು ನಿಮ್ಮ ಹಣವನ್ನು ತೆಗೆದುಕೊಳ್ಳಿ.
ಹಂತ 9: ನಂತರ ಡಿಸ್ಪ್ಲೇ ಮೇಲೆ ನಿಮಗೊಂದು ಪ್ರಶ್ನೆ ಕಾಣಿಸಿಕೊಳ್ಳುತ್ತದೆ. ಅದು ನೀವು ಮಾಡಿದ ವ್ಯವಹಾರದ ರಶೀದಿಯನ್ನು ತೆಗೆದುಕೊಳ್ಳಲು ಬಯಸುತ್ತೀರಿ ಎಂದು ಕೇಳಿಕೊಳ್ಳುತ್ತದೆ. ಬೇಕಿದ್ದರೆ ಎಸ್ ಅಥವಾ ಬೇಡದಿದ್ದರೆ ನೋ ಎಂಬ ಆಯ್ಕೆಯನ್ನು ಬಳಸಬವುದು.
ಈ ಎಲ್ಲ ಹಂತಗಳನ್ನು ಪ್ರತಿ ಸಲ ನೀವು ATM ಬಳಿ ಹೋದಾಗ ಗಮನದಲ್ಲಿಡಿ ಮತ್ತು ಈ ರೀತಿಯಲ್ಲಿ ಹಣ ಪಡೆಯುವುದು ನಿಮ್ಮ ಹಕ್ಕು ಸಹ ಹಾಗಾಗಿ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ಇದನ್ನು ಹಂಚಿಕೊಳ್ಳಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile