ಆಧಾರ್ ಕಾರ್ಡ್ ಕಳೆದು ಹೋಗಿದೆಯೇ? ಚಿಂತಿಸಬೇಡಿ ಆನ್‌ಲೈನ್‌ನಲ್ಲಿ ಈ ರೀತಿ ಡಿಜಿಟಲ್ ನಕಲನ್ನು ಪಡೆಯಿರಿ

ಆಧಾರ್ ಕಾರ್ಡ್ ಕಳೆದು ಹೋಗಿದೆಯೇ? ಚಿಂತಿಸಬೇಡಿ ಆನ್‌ಲೈನ್‌ನಲ್ಲಿ ಈ ರೀತಿ ಡಿಜಿಟಲ್ ನಕಲನ್ನು ಪಡೆಯಿರಿ
HIGHLIGHTS

ನಿಮ್ಮ ಆಧಾರ್ ಕಾರ್ಡ್ (Aadhar card) ತಿಳಿದು ಅಥವಾ ತಿಳಿಯದೆ ಕಳೆದು ಹೋಗಿದೆಯೇ? ಚಿಂತಿಸಬೇಡಿ

ನಿಮ್ಮ ಆಧಾರ್ ಸಂಖ್ಯೆ ಇದ್ದರೆ ನೀವು ಇ-ಆಧಾರ್ ಕಾರ್ಡ್‌ನ ಡಿಜಿಟಲ್ ನಕಲನ್ನು ಅಂದರೆ ಆಧಾರ್ ಅನ್ನು ಮನೆಯಿಂದಲೆ ಪಡೆಯಬವುದು.

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್‌ನ ಅಗತ್ಯವನ್ನು ಪ್ರತಿಯೊಂದು ಪ್ರಮುಖ ಕೆಲಸಗಳಲ್ಲಿಯೂ ಬಳಸಲಾಗುತ್ತದೆ.

ನಿಮ್ಮ ಆಧಾರ್ ಕಾರ್ಡ್ (Aadhar card) ತಿಳಿದು ಅಥವಾ ತಿಳಿಯದೆ ಕಳೆದು ಹೋಗಿದೆಯೇ? ಚಿಂತಿಸಬೇಡಿ ಆನ್‌ಲೈನ್‌ನಲ್ಲಿ ಈ ರೀತಿ ಡಿಜಿಟಲ್ ನಕಲನ್ನು ಪಡೆಯಬವುದು. ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್‌ನ ಅಗತ್ಯವನ್ನು ಪ್ರತಿಯೊಂದು ಪ್ರಮುಖ ಕೆಲಸಗಳಲ್ಲಿಯೂ ಬಳಸಲಾಗುತ್ತದೆ. ಅದು ಖಾಸಗಿ ಉದ್ಯೋಗವಾಗಲಿ ಸರ್ಕಾರಿ ಉದ್ಯೋಗವಾಗಲಿ ಆಧಾರ್ ಒಂದು ಪ್ರಮುಖ ದಾಖಲೆಯಾಗಿ ಮಾರ್ಪಟ್ಟಿದೆ. ಹೆಚ್ಚಿನ ಸರ್ಕಾರಿ ಸಂಸ್ಥೆಗಳಲ್ಲಿ ಆಧಾರ್ ಕಾರ್ಡ್ ಸಹ ಕಡ್ಡಾಯಗೊಳಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಧಾರ್ ಕಾರ್ಡ್ ಕಳೆದುಕೊಂಡರೆ ನೀವು ಅಸಮಾಧಾನಗೊಳ್ಳುತ್ತೀರಿ. ಆದರೆ ಡಿಜಿಟಲ್ ಯುಗದಲ್ಲಿ ನಿಮ್ಮ ಆಧಾರ್ ಕಾರ್ಡ್ ಕಳೆದುಕೊಂಡರೆ ನೀವು ಚಿಂತಿಸಬೇಕಾಗಿಲ್ಲ. ನಿಮ್ಮ ಆಧಾರ್ ಸಂಖ್ಯೆ ಇದ್ದರೆ ನೀವು ಇ-ಆಧಾರ್ ಕಾರ್ಡ್‌ನ ಡಿಜಿಟಲ್ ನಕಲನ್ನು ಅಂದರೆ ಆಧಾರ್ ಅನ್ನು ಮನೆಯಿಂದಲೆ ಪಡೆಯಬವುದು. ಹಾಗಾದ್ರೆ ಆಧಾರ್‌ನ ಡಿಜಿಟಲ್ ನಕಲನ್ನು ಹೇಗೆ ಹೊರತೆಗೆಯಬವುದೆಂದು ನೋಡೋಣ.

AAdhar

>ಆಧಾರ್ ಕಾರ್ಡ್‌ನ ದೊಡ್ಡ ವೈಶಿಷ್ಟ್ಯವೆಂದರೆ ಅದಕ್ಕೆ ಸಂಬಂಧಿಸಿದ ಹೆಚ್ಚಿನ ಬದಲಾವಣೆಗಳು ಅಥವಾ ನವೀಕರಣಗಳನ್ನು ಯುಐಡಿಎಐ ವೆಬ್‌ಸೈಟ್‌ನಿಂದ ಪಡೆಯಬಹುದು. ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಡಿಜಿಟಲ್ ಮುದ್ರಣವನ್ನು ಸಹ ತೆಗೆದುಕೊಳ್ಳಬಹುದು. ಅಲ್ಲದೆ ಇದಕ್ಕಾಗಿ ನಿಮಗೆ ಯಾವುದೇ ರೀತಿಯ ಪಾವತಿ ಅಗತ್ಯವಿಲ್ಲ. ನಿಮಗೆ ಬೇಕಾಗಿರುವುದು ನಿಮ್ಮ ಆಧಾರ್‌ನಲ್ಲಿ ನೀಡಲಾಗಿರುವ 12 ಅಂಕಿಯ ಆಧಾರ್ ಸಂಖ್ಯೆ ಮಾತ್ರ.

>ಆಧಾರ್ ಕಾರ್ಡ್‌ನ ಡಿಜಿಟಲ್ ನಕಲನ್ನು ಪಡೆಯಲು ಯುಐಡಿಎಐ (UIDAI) ವೆಬ್‌ಸೈಟ್‌ಗೆ ಹೋಗಿ ಮತ್ತು ನಿಮ್ಮ ಆಧಾರ್ ಸಂಖ್ಯೆಯನ್ನು ಮೇಲ್ಭಾಗದಲ್ಲಿ ನೀಡಿರುವ ಆಯ್ಕೆಯಲ್ಲಿ ಇರಿಸಿ. ಇದಲ್ಲದೆ ಇಲ್ಲಿ ನೀವು ಆಧಾರ್ ಕಾರ್ಡ್‌ನಲ್ಲಿ ಬರೆಯಲಾಗಿರುವ ನಿಮ್ಮ ಪೂರ್ಣ ಹೆಸರನ್ನು ಸಹ ನಮೂದಿಸಬೇಕು.

>ನಂತರ ಇಮೇಲ್ ಐಡಿ ಅಥವಾ ಫೋನ್ ಸಂಖ್ಯೆಯನ್ನು ಟೈಪ್ ಮಾಡಿ. ಇಲ್ಲಿ ನೀಡಿರುವ ಎಲ್ಲಾ ವಿವರಗಳು ಆಧಾರ್ ಕಾರ್ಡ್‌ನಲ್ಲಿ ನೀಡಿರುವ ವಿವರಗಳಂತೆಯೇ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಅದು ವಿಭಿನ್ನವಾಗಿದ್ದರೆ ಆಧಾರ್ ತೆರೆಯುವುದಿಲ್ಲ.

>ವಿವರಗಳನ್ನು ಭರ್ತಿ ಮಾಡಿದ ನಂತರ ಚಿತ್ರದಲ್ಲಿ ನೀಡಲಾದ ಅಕ್ಷರಗಳನ್ನು ಟೈಪ್ ಮಾಡಿ ನಂತರ ಒಟಿಪಿಗಾಗಿ ಕ್ಲಿಕ್ ಮಾಡಿ. ಈ ಒಟಿಪಿಯನ್ನು ನೀವು ಆಧಾರ್ ಕಾರ್ಡ್‌ನಲ್ಲಿ ಬರೆದ ಸಂಖ್ಯೆಗೆ ಕಳುಹಿಸಲಾಗುತ್ತದೆ. ಪರಿಶೀಲನೆ ಒಟಿಪಿ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಧಾರ್ ಸಂಖ್ಯೆಯನ್ನು ಎಸ್‌ಎಂಎಸ್ ಅಥವಾ ಇಮೇಲ್ ಮೂಲಕ ಪಡೆಯುತ್ತೀರಿ.

>ಆಧಾರ್ ಸಂಖ್ಯೆ ಯುಐಡಿ ಸಂಖ್ಯೆ ಪಡೆದ ನಂತರ ಯುಐಡಿಎಐ ವೆಬ್‌ಸೈಟ್‌ನಲ್ಲಿ ಇ-ಆಧಾರ್ ಪುಟಕ್ಕೆ ಹೋಗಿ. ಎಲ್ಲಿ ಕೆಲವು ವಿವರಗಳನ್ನು ಕೇಳಲಾಗುತ್ತದೆ. ಅವುಗಳನ್ನು ಭರ್ತಿ ಮಾಡಿದ ನಂತರ OTP ಮೇಲೆ ಕ್ಲಿಕ್ ಮಾಡಿ. ಒಟಿಪಿ ಸ್ವೀಕರಿಸಿದ ನಂತರ ಅದನ್ನು ಟೈಪ್ ಮಾಡಿ. ಮತ್ತು ಅಲ್ಲಿ ನೀಡಲಾದ ವ್ಯಾಲಿಡೇಟ್ & ಡೌನ್‌ಲೋಡ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಆಧಾರ್ ಕಾರ್ಡ್ ಪಿಡಿಎಫ್ (PDF) ಫೈಲ್ ಡೌನ್‌ಲೋಡ್ ಆಗುತ್ತದೆ ಮತ್ತು ನೀವು ಅದರಿಂದ ಪ್ರಿಂಟ್ ತೆಗೆದುಕೊಳ್ಳಬಹುದು. ಈ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು ಲೈಕ್ ಮಾಡಿ ತಿಳಿದವರೊಂದಿಗೆ ಶೇರ್ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo