ಇಂಡಿಯನ್ ಟೆಲಿಕಮ್ಯುನಿಕೇಷನ್ ರೆಗ್ಯುಲೇಟರಿ ಅಥಾರಿಟಿ (ಟ್ರಾಯ್) ಬದಲಿಸಿದ DTH ಮತ್ತು ಕೇಬಲ್ ಟಿವಿ ನಿಯಮಗಳನ್ನು ಇಂದು ಜಾರಿಗೊಳಿಸಲಾಗಿದೆ. ಈ ಬದಲಾವಣೆಗಳ ಅಡಿಯಲ್ಲಿ ಬಳಕೆದಾರರು ಚಾನಲ್ಗಳನ್ನು ವೀಕ್ಷಿಸುವ ಚಾನಲ್ಗಳಿಗೆ ಮಾತ್ರ ಪಾವತಿಸಬೇಕಾಗುತ್ತದೆ. ಅಂದ್ರೆ ಈಗ ಬಳಕೆದಾರರು ತಮ್ಮ ನೆಚ್ಚಿನ ಚಾನೆಲ್ಗಳನ್ನು ಮಾತ್ರ ಆಯ್ಕೆ ಮಾಡಿ ಬಳಸಬವುದು. ಈ ನಿಯಮ ಪ್ರತಿ ಸಣ್ಣ ಪುಟ್ಟ ಉಚಿತ, ಶುಲ್ಕಸಹಿತ ಚಾನಲ್ಗೆಗಳ ಮೇಲೆ ಜಾರಿಗೊಳಿಸಲಾಗಿದೆ.
ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹೊಸ ವೆಬ್ ಅಪ್ಲಿಕೇಶನ್ ಚಾನೆಲ್ ಆಯ್ಕೆಗಾಗಿ TRAI ಚಾನೆಲ್ ಸೆಲೆಕ್ಟರ್ ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿದೆ. ಇಲ್ಲಿ ಬಳಕೆದಾರರು ಚಾನೆಲ್ಗಳ ಮಾಹಿತಿಯನ್ನು ಮತ್ತು ಅವರ MRP ಬೆಲೆಯನ್ನು ಪಡೆಯಬವುದು. TRAI ಯ ಈ ಹೊಸ ಅಪ್ಲಿಕೇಶನ್ನೊಂದಿಗೆ ಮಾಸಿಕ ಬಾಡಿಗೆಗಳನ್ನು ಬಳಕೆದಾರರು ಸಹ ತಿಳಿಯಬವುದು. ಈ ಅಪ್ಲಿಕೇಶನ್ನಿಂದ ಯಾವ ರೀತಿ ಚಾನಲ್ಗಳನ್ನು ಆಯ್ಕೆ ಮಾಡಬವುದೆಂಬ ಪ್ರಕ್ರಿಯೆಯನ್ನು ಇಲ್ಲಿ ನೀವು ತಿಳಿಯಬವುದು.
1. ಮೊದಲಿಗೆ ನೀವು ಈ ಅಪ್ಲಿಕೇಶನ್ ಅನ್ನು ಬಳಸುವ ಮೂಲಕ ಪಡೆಯಬವುದು. ಅದಕ್ಕಾಗಿ ನೀವು https://channel.trai.gov.in/ ಗೆ ಹೋಗಬೇಕಾಗುತ್ತದೆ.
2. ಕ್ಲಿಕ್ ಮಾಡಿದ ನಂತರ ಈ ಪೇಜಿನ ಕೆಳಭಾಗದಲ್ಲಿ ನಿಮಗೆ Get Started ಕಾಣಿಸುತ್ತದೆ. ಈಗ ಇದರ ಮೇಲೆ ನೀವು ಚಿಕ್ ಮಾಡಿರಿ.
3. ನಂತರ ಬಳಕೆದಾರರು ಹೆಸರು, ರಾಜ್ಯ ಮತ್ತು ನಂತರ ನಿಮ್ಮ ಶೈಲಿಯ ಆದ್ಯತೆಗಳಂತಹ ಮಾಹಿತಿಯನ್ನು ಒದಗಿಸಿ.
4. ಬಳಕೆದಾರನು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ನಿಮ್ಮ ಆಸಕ್ತಿ ಮತ್ತು ರುಚಿಗೆ ತಕ್ಕ ಚಾನಲ್ಗಳ ಪಟ್ಟಿ ಮುಂದೆ ಬರುತ್ತದೆ.
5. ಈಗ ಇದರಲ್ಲಿ ತಮ್ಮ ಆಯ್ಕೆಯ ಚಾನಲ್ಗಳನ್ನು ಆಯ್ಕೆ ಮಾಡುವ ಮೂಲಕ ಬಳಕೆದಾರರು ತಮ್ಮ ಮಾಸಿಕ ಬಾಡಿಗೆಯೊಂದಿಗೆ ಪ್ಲಾನ್ ಅಥವಾ ಪ್ಯಾಕ್ಗಳ ಕುರಿತು ಮಾಹಿತಿಯನ್ನು ಪಡೆಯಬಹುದು. ನಿಮ್ಮ ಆಯ್ಕೆಮಾಡಿದ ಚಾನಲ್ಗಳು ಮತ್ತು ಮಾಸಿಕ ಬಾಡಿಗೆಗಳೊಂದಿಗೆ View ಆಯ್ಕೆ ಬಟನ್ನ ಬಲಗಡೆಯ ಬಳಿ ನೀಡಿದ್ದು ಒಟ್ಟು ಮೊತ್ತವನ್ನು ನೋಡಬವುದು.
6. ಇಲ್ಲಿ ನಿಮಗೆ ಉಚಿತ ಚಾನಲ್, ಶುಲ್ಕದ ಚಾನಲ್, ಒಟ್ಟು ಮೊತ್ತದ ಪಾವತಿ, GST ತೆರಿಗೆ ಮತ್ತು ನೆಟ್ವರ್ಕ್ ಸಾಮರ್ಥ್ಯದ ಶುಲ್ಕ (NFC) ಮುಂತಾದವುಗಳನ್ನು ಇಲ್ಲಿ ವಿಸ್ತಾರವಾಗಿ ನೀಡಲಾಗುತ್ತದೆ.
7. ಈ ಮೊತ್ತವನ್ನು ಬಳಕೆದಾರರು ಹೆಚ್ಚಿದೆ ಅಂದುಕೊಂಡರೆ ಈ ಪಟ್ಟಿಯ ಬಲಭಾಗದಲ್ಲಿ 'Optimize' ಟ್ಯಾಬ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನೀವು ಆಯ್ಕೆ ಮಾಡಿದ ಅದೇ ಬೆಲೆಗಿಂತ ಕಡಿಮೆ ಪ್ಲಾನ್ ಅಥವಾ ಪ್ಯಾಕ್ಗಳ ಫೈನಲ್ ಮಾಹಿತಿಯನ್ನು ಪಡೆಯಬಹುದು.
8. ಇದಲ್ಲದೆ ನಿಮಗೆ ಈ ಪ್ಯಾನಲಲ್ಲಿ ಉಚಿತ ಚಾನಲ್ಗಳ ಪಟ್ಟಿಯನ್ನು ಸಹ ಮಾಸಿಕ ಬಾಡಿಗೆಗಳೊಂದಿಗೆ ತೋರಿಸಲಾಗಿದೆ. ಬೇಕಾದ್ರೆ ಅದನ್ನು ನೀವು ಸೇರಿಸಿಕೊಳ್ಳಬವುದು.
9. ಚಾನಲ್ ಸೆಲೆಕ್ಟರ್ ಅಪ್ಲಿಕೇಶನ್ ಎಡಭಾಗದಲ್ಲಿ ಫೈನಲ್ ಆಗಿ ಬೆಲೆ, HD / SD, ಶೈಲಿ, ಬ್ರಾಡ್ಕಾಸ್ಟರ್ ಮತ್ತು ಭಾಷೆಯಂತಹ ಅನೇಕ ಆಯ್ಕೆಗಳಿವೆ. ಬಳಕೆದಾರರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಈ ಫಿಲ್ಟರ್ಗಳನ್ನು ಹೊಂದಿಸಿ ನೋಡಬವುದು. ಇಷ್ಟವಾದ್ರೆ ಕಸ್ಟಮರ್ ಕೇರ್ಗೆ ಕರೆ ಮಾಡಿ ಈ ಪಟ್ಟಿಯನ್ನು ನೀಡಿ ಆಕ್ಟಿವೇಟ್ ಮಾಡಬವುದು. ಒಂದು ವೇಳೆ ನೀವು ಈ ಎಲ್ಲ ಆಯ್ಕೆಗಳನ್ನು ಪುನಃ ತಯಾರಿಸಲು ಯೋಚಿಸಿದರೆ ಪೇಜಿನ ಬಲಭಾಗದ ಮೂಲೆಯಲ್ಲಿ ನಿಮಗೆ Reset All Channels ಆಯ್ಕೆ ಮೇಲೆ ಕ್ಲಿಕ್ ಮಾಡಿ ನೋಡಿ.