Deactivate TrueCaller: ನಿಮ್ಮ ಸ್ಮಾರ್ಟ್ಫೋನ್‌ ಸಂಖ್ಯೆಯನ್ನು ಟ್ರೂಕಾಲರ್‌ನಿಂದ ಶಾಶ್ವತವಾಗಿ ಡಿಲೀಟ್ ಮಾಡೋದು ಹೇಗೆ?

Updated on 19-Mar-2024
HIGHLIGHTS

ಟ್ರೂಕಾಲರ್ (Truecaller) ಆನ್‌ಲೈನ್‌ ವಂಚನೆಗಳನ್ನು ತಡೆಯಲು ಸಹಕಾರಿಯಾಗಿದ್ದು ಪರಸ್ಪರ ಸಂವಹನವನ್ನು ಸುಲಭವಾಗಿಸಿದೆ.

ನಿಮ್ಮ ಪ್ರೈವಸಿಯನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಖಾತೆಯನ್ನು ಟ್ರೂಕಾಲರ್‌ನಿಂದ ಶಾಶ್ವತವಾಗಿ ಡಿಲೀಟ್ ಮಾಡಬಹುದು.

ಈ ಟ್ರೂಕಾಲರ್ (Truecaller) ಅಪ್ಲಿಕೇಶನ್ ಮೂಲಕ ಅಪರಿಚಿತ ಕರೆ ಅಥವಾ SMS ಮಾಡುವವರು ಯಾರೆಂದು ಪರಿಶೀಲಿಸಬಹುದು.

ಭಾರತದಲ್ಲಿ ಜನಪ್ರಿಯ ಮತ್ತು ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಲು ಸಾಧ್ಯವಾಗುವ ಈ ಟ್ರೂಕಾಲರ್ (Truecaller) ಅಪ್ಲಿಕೇಶನ್ ಅಪರಿಚಿತ ಕರೆ ಅಥವಾ SMS ಮಾಡುವವರು ಯಾರೆಂದು ಪರಿಶೀಲಿಸಲು ಮತ್ತು ಇಂದಿನ ದಿನಗಳಲ್ಲಿ ನಡೆಯುತ್ತಿರುವ ಆನ್‌ಲೈನ್‌ ವಂಚನೆಗಳನ್ನು ತಡೆಯಲು ಸಹಕಾರಿಯಾಗಿದ್ದು ಪರಸ್ಪರ ಸಂವಹನವನ್ನು ಸುಲಭವಾಗಿಸಿದೆ. ಅಲ್ಲದೆ ನಿಮಗೆ ಬರುವ ಅಪರಿಚಿತ ಕರೆ ಅಥವಾ SMS ನಂಬರ್ಗಳನ್ನು ಅಪ್ಲಿಕೇಶನ್ ಮೂಲಕ ಬ್ಲಾಕ್ ಅಥವಾ ರಿಪೋರ್ಟ್ ಮಾಡುವ ಅವಕಾಶ ನೀಡುತ್ತದೆ.

Also Read: ಹೊಸ Smartphone ಖರೀದಿಸುವಾಗ ಈ Tips ಅನುಸರಿಸಿ ವರ್ಷಗಳವರೆಗೆ ಯಾವುದೇ ಸಮಸ್ಯೆ ಬರೋದಿಲ್ಲ!

How to Deactivate Truecaller Account Permanently:

ಟ್ರೂಕಾಲರ್ (Truecaller) ಅಪ್ಲಿಕೇಶನ್ ಕುರಿತು ಕೆಲವು ಪ್ರೈವಸಿ ಆರೋಪಗಳ ಕುರಿತು ಭಾರಿ ಸುದ್ದಿ ಮಾಡಿದ ಈ ಅಪ್ಲಿಕೇಶನ್ ಬಳಕೆದಾರರ ನೈಜ ಲೊಕೇಶನ್ ಜೊತೆಗೆ ಅಗತ್ಯವೇ ಇಲ್ಲದ ಅನುಮತಿಗಳನ್ನು ಕೇಳುವುದಾಗಿ ದೂರಲಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಬಳಕೆದಾರರಿಗೆ ತಮ್ಮ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಅವಕಾಶವನ್ನು ನೀಡುತ್ತಿದೆ. ಆದಾಗ್ಯೂ ನೀವು ನಿಮ್ಮ ಪ್ರೈವಸಿಯನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಖಾತೆಯನ್ನು ಟ್ರೂಕಾಲರ್‌ನಿಂದ ಶಾಶ್ವತವಾಗಿ ಡಿಲೀಟ್ ಮಾಡಲು ಬಯಸಿದರೆ ಅದೇಗೆ ಮಾಡೋದು ಎಂಬುದನ್ನು ತಿಳಿಯಿರಿ.

How to Deactivate Truecaller Account Permanently

ಆಂಡ್ರಾಯ್ಡ್‌ನಲ್ಲಿ Truecaller ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡೋದು ಹೇಗೆ?

ಹಂತ 1: ಮೊದಲಿಗೆ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿರುವ ಟ್ರೂಕಾಲರ್ (Truecaller) ಅಪ್ಲಿಕೇಶನ್ ತೆರೆದು ಎಡಭಾಗದಲ್ಲಿರುವ 3 ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ Settings ವಿಭಾಗಕ್ಕೆ ಆಯ್ಕೆ ಮಾಡಿ. ನಂತರ ಅಲ್ಲಿ ಕಾಣುವ Privacy Center ಓಪನ್ ಮಾಡಿ.

ಹಂತ 2: ಈಗ ಕೆಳಗೆ ಸ್ಕ್ರೋಲ್ ಮಾಡಿ Manage My Data ಭಾಗದಲ್ಲಿ ನಿಮಗೆ ನಾಲ್ಕನೇ ಆಯ್ಕೆ Deactivate My Account ಮೇಲೆ ಕ್ಲಿಕ್ ಮಾಡಿ.

ಹಂತ 3: ಈಗ ಇದರ ಕೆಳಗೆ ನಿಮಗೆ Caller Identification, Spam Protection, Truecaller Account ಎಂಬ 3 ವಿಧಾನಗಳನ್ನು ಕೇಳಲಾಗುತ್ತದೆ.

ಹಂತ 4: ಇದರಲ್ಲಿ ನಿಮಗೆ ಟ್ರೂಕಾಲರ್ (Truecaller) ಅಪ್ಲಿಕೇಶನ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಬೇಕಿದ್ದರೆ ಈ ಮೂರು ಆಯ್ಕೆಗಳನ್ನು ಸೆಲೆಕ್ಟ್ ಮಾಡಿ Yes, Continue ಮೇಲೆ ಕ್ಲಿಕ್ ಮಾಡಿ ಅಷ್ಟೇ ನಿಮ್ಮ ಟ್ರೂಕಾಲರ್ ಖಾತೆ ಶಾಶ್ವತವಾಗಿ ಡಿಆಕ್ಟಿವೇಟ್ ಆಗೋಗುತ್ತೆ.

How to Deactivate Truecaller Account Permanently

ಐಫೋನ್‌ಗಳಲ್ಲಿ ಟ್ರೂಕಾಲರ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡೋದು ಹೇಗೆ?

ಹಂತ 1: ಮೊದಲಿಗೆ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿರುವ ಟ್ರೂಕಾಲರ್ (Truecaller) ಅಪ್ಲಿಕೇಶನ್ ತೆರೆದು ಕೆಳಭಾಗದಲ್ಲಿರುವ More ಮೇಲೆ ಕ್ಲಿಕ್ ಮಾಡಿ.

ಹಂತ 2: ಇದರ ನಂತರ ನಿಮಗೆ Privacy Center ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಹಂತ 3: ಈಗ ಇಲ್ಲಿ ನಿಮಗೆ Deactivate Account ಫೀಚರ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ Yes, Continue ಮೇಲೆ ಕ್ಲಿಕ್ ಮಾಡಿ ಅಷ್ಟೇ ನಿಮ್ಮ ಟ್ರೂಕಾಲರ್ ಖಾತೆ ಶಾಶ್ವತವಾಗಿ ಡಿಆಕ್ಟಿವೇಟ್ ಆಗೋತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :