Google ಕಾರ್ಡ್ ಅಥವಾ ವರ್ಚುವಲ್ ವಿಸಿಟಿಂಗ್ ಕಾರ್ಡ್ ಅನ್ನು ಹೇಗೆ ರಚಿಸುವುದು?

Updated on 13-Aug-2020
HIGHLIGHTS

ಕಳೆದ ಮಂಗಳವಾರ Google ಕಾರ್ಡ್ ಅಥವಾ ವರ್ಚುವಲ್ ವಿಸಿಟಿಂಗ್ ಕಾರ್ಡ್ ಅನ್ನು ಘೋಷಿಸಿತು.

ಈ (Google People Cards) ಗೂಗಲ್ ಕಾರ್ಡ್ ಅಥವಾ ವರ್ಚುವಲ್ ವಿಸಿಟಿಂಗ್ ಕಾರ್ಡ್ ತಂದಿದ್ದು ಇದು ಬಳಕೆದಾರರಿಗೆ ಆನ್‌ಲೈನ್ ಸ್ಟೇಟಸ್ ಮತ್ತು ತಮ್ಮನ್ನು ಮತ್ತು ಇತರರನ್ನು ಕಂಡುಹಿಡಿಯಲು ಅನುವು ಮಾಡಿಕೊಡುತ್ತದೆ.

ಕಳೆದ ಮಂಗಳವಾರ Google ಕಾರ್ಡ್ ಅಥವಾ ವರ್ಚುವಲ್ ವಿಸಿಟಿಂಗ್ ಕಾರ್ಡ್ ಅನ್ನು ಘೋಷಿಸಿತು. ಇದು ಬಳಕೆದಾರರಿಗೆ ಆನ್‌ಲೈನ್ ಉಪಸ್ಥಿತಿಯನ್ನು ನಿರ್ಮಿಸಲು ಮತ್ತು ಹುಡುಕಾಟದಲ್ಲಿ ತಮ್ಮನ್ನು ಮತ್ತು ಇತರರನ್ನು ಕಂಡುಹಿಡಿಯಲು ಅನುವು ಮಾಡಿಕೊಡುತ್ತದೆ. ಗೂಗಲ್‌ನ ಪ್ರಕಾರ ಬಳಕೆದಾರರು ಹುಡುಕಾಟದಲ್ಲಿ ವರ್ಚುವಲ್ ವಿಸಿಟಿಂಗ್ ಕಾರ್ಡ್ ರಚಿಸಲು ಸರಳ ಹಂತಗಳನ್ನು ನೀಡಿದೆ. ಪೀಪಲ್ ಕಾರ್ಡ್ಸ್ ಫೀಚರ್ ವ್ಯಕ್ತಿಗಳು, ಪ್ರಭಾವಿಗಳು, ಉದ್ಯಮಿಗಳು, ನಿರೀಕ್ಷಿತ ಉದ್ಯೋಗಿಗಳು, ಸ್ವಯಂ ಉದ್ಯೋಗಿಗಳನ್ನು ಸ್ವತಂತ್ರವಾಗಿ ಹುಡುಕಲು ಬಯಸುವವರು ಮತ್ತು ಹುಡುಕಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

https://twitter.com/GoogleIndia/status/1293054078423937024?ref_src=twsrc%5Etfw

Google ಕಾರ್ಡ್ ಅಥವಾ ವರ್ಚುವಲ್ ವಿಸಿಟಿಂಗ್ ಕಾರ್ಡ್ ಹೇಗೆ ರಚಿಸುವುದು?

ಹಂತ 1: ಪೀಪಲ್ ಕಾರ್ಡ್ ರಚಿಸಲು ಬಳಕೆದಾರರು ಮೊದಲು ತಮ್ಮ ಫೋನ್ಗಳಲ್ಲಿ Google ಖಾತೆಗೆ ಸೈನ್ ಇನ್ ಮಾಡಬೇಕಾಗುತ್ತದೆ. ಗೂಗಲ್ ಹುಡುಕಾಟದಲ್ಲಿ ಅವರ ಹೆಸರನ್ನು ಹುಡುಕಬೇಕು

ಹಂತ 2: ಪುಟದಲ್ಲಿ ಗೋಚರಿಸುವ "Add me to Search" ಆಯ್ಕೆಯನ್ನು ಟ್ಯಾಪ್ ಮಾಡಿ

ಹಂತ 3: ನಿಮ್ಮ Google ಖಾತೆಯಿಂದ ನಿಮ್ಮ ಚಿತ್ರವನ್ನು ಅಪ್‌ಲೋಡ್ ಮಾಡಿ ಸಾಮಾಜಿಕ ಪ್ರೊಫೈಲ್‌ಗಳು ಅಥವಾ ವೆಬ್‌ಸೈಟ್‌ಗಳಿಗೆ ವಿವರಣೆ ಮತ್ತು ಲಿಂಕ್‌ಗಳನ್ನು ಸೇರಿಸಿ. 

ಹಂತ 4: ನಿಮ್ಮ ವರ್ಚುವಲ್ ವಿಸಿಟಿಂಗ್ ಕಾರ್ಡ್‌ನಲ್ಲಿ ನಿಮ್ಮ ಫೋನ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ನೀವು ಬಯಸಿದರೆ ಸಹ ಸೇರಿಸಿಕೊಳ್ಳಬಹುದು

ಹಂತ 5: "Save" ಆಯ್ಕೆಯನ್ನು ಟ್ಯಾಪ್ ಮಾಡಿ ಅಷ್ಟೇ. 

ಹೀಗೆ ನಿಮ್ಮ ಪ್ರತಿ ಹೊಸ ಕಾರ್ಡ್‌ಗಾಗಿ ಬಳಕೆದಾರರು ಅನನ್ಯ ಮೊಬೈಲ್ ಸಂಖ್ಯೆಯೊಂದಿಗೆ ಖಾತೆಯನ್ನು ದೃಢೀಕರಿಸಬೇಕು ಎಂದು ಗೂಗಲ್ ಹೇಳಿದೆ. ಅವನು / ಅವಳು ಕಾರ್ಡ್‌ನಲ್ಲಿ ಸೇರಿಸಬೇಕಾದ ಮಾಹಿತಿಯ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ ಮತ್ತು ಯಾವುದೇ ಸಮಯದಲ್ಲಿ ಅನುಭವವನ್ನು ಡಿಲೀಟ್ ಸಹ ಮಾಡಬವುದು. ಅದು ಅವರ ವಿವರಗಳನ್ನು ಹುಡುಕಾಟದಲ್ಲಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :