
ಆರ್ಟಿಫಿಷಿಯಲ್ ಇಂಟೆಲಿಜನ್ಸ್ (AI) ಅದನ್ನು ಘಿಬ್ಲಿ ಆರ್ಟ್ ಸ್ವರೂಪದಲ್ಲಿ ಬದಲಿಸಿಕೊಡುತ್ತದೆ.
ಘಿಬ್ಲಿ ಅನಿಮೇಷನ್ ಚಿತ್ರಗಳಾಗಿ (Ghibli Style Art) ಪರಿವರ್ತಿಸುವ ಅವಕಾಶಗಳನ್ನು ಮಾಡುತ್ತದೆ.
ಘಿಬ್ಲಿ ಆರ್ಟ್ (Ghibli Style Art) ಸಾಮಾಜಿಕ ಜಾಲತಾಣಗಳಲ್ಲಿ ಹೊಸ ರೀತಿಯ ಫೋಟೋ ಟ್ರೆಂಡ್ ಆಗಿದೆ.
Ghibli Style Art Using Grok with ChatGPT: ಪ್ರಸ್ತುತ ಜಗತ್ತಿನಲ್ಲಿ ಅತ್ಯುತ್ತಮವಾಗಿ ವೈರಲ್ ಆಗುತ್ತಿರುವ ಈ ಘಿಬ್ಲಿ ಆರ್ಟ್ (Ghibli Style Art) ಸಾಮಾಜಿಕ ಜಾಲತಾಣಗಳಲ್ಲಿ ಹೊಸ ರೀತಿಯ ಫೋಟೋ ಟ್ರೆಂಡ್ ಒಂದು ಸಂಚಲನ ಮೂಡಿಸಿದೆ. ಇದರಲ್ಲಿ ನೀವು ನಮ್ಮ ಯಾವುದೇ ಫೋಟೋವನ್ನು ಅಪ್ಲೋಡ್ ಮಾಡಿದರೆ ಆರ್ಟಿಫಿಷಿಯಲ್ ಇಂಟೆಲಿಜನ್ಸ್ ಟೆಕ್ನಾಲಜಿಯೊಂದಿಗೆ ಮೂಲಕ ಘಿಬ್ಲಿ ಅನಿಮೇಷನ್ ಚಿತ್ರಗಳಾಗಿ (Ghibli Style Art) ಪರಿವರ್ತಿಸುವ ಅವಕಾಶಗಳನ್ನು ಮಾಡುತ್ತದೆ. ನೀವು ನಿಮ್ಮ ಫೋಟೋ ಅಪ್ಲೋಡ್ ಮಾಡಿದರೆ ಆರ್ಟಿಫಿಷಿಯಲ್ ಇಂಟೆಲಿಜನ್ಸ್ (AI) ಅದನ್ನು ಘಿಬ್ಲಿ ಆರ್ಟ್ ಸ್ವರೂಪದಲ್ಲಿ ಬದಲಿಸಿಕೊಡುತ್ತದೆ.
Ghibli Style Art Using Grok with ChatGPT
ಪ್ರಸ್ತುತ ಕೆಲವೊಂದು ವೆಬ್‌ಸೈಟ್‌ಗಳು ಅತ್ಯುತ್ತಮವಾಗಿ ಘಿಬ್ಲಿ ಚಿತ್ರಗಳನ್ನು ರಚಿಸಲಾರವು. ಇನ್ನು ಕೆಲವು ನಿಮ್ಮನ್ನು ಲಾಗಿನ್ ಮಾಡಿಸಿಕೊಂಡು ಹಣ ಪಾವತಿಸುವಂತೆ ಕೇಳಬಹುದು. ಚಾಟ್‌ಜಿಪಿಟಿಗೆ ಹೋಗಿ ಫೋಟೋ ಅಪ್ಲೋಡ್ ಮಾಡಿ ಘಿಬ್ಲಿ ಶೈಲಿಯಲ್ಲಿ ಫೋಟೋ ರಚಿಸುವಂತೆ ಪ್ರಾಂಪ್ಟ್ ನೀಡಿದರೆ ಅದು ಕೂಡ ಕ್ಷಣಾರ್ಧದಲ್ಲಿ ನೀವು ಅಪ್ಲೋಡ್ ಮಾಡಿದ ಫೋಟೋದ ಘಿಬ್ಲಿ ರೂಪವನ್ನು ನೀಡುತ್ತದೆ.
ಗ್ರೂಕ್ ಮೂಲಕ ಉಚಿತವಾಗಿ ಘಿಬ್ಲಿ ಫೋಟೋ ರಚನೆ ಹೇಗೆ?
ಗ್ರೂಕ್ ಅಂದ್ರೆ ಏನೆಂದು ನಿಮಗೆ ಗೊತ್ತಿರಬಹುದು. ಹಳೆಯ ಟ್ವಿಟ್ಟರ್ ಎಕ್ಸ್ ಆಗಿದೆ. ಟ್ವಿಟ್ಟರ್ ಮೂಲಕ ಗ್ರೂಕ್ ಎಂಬ ವಿಶೇಷ ಫೀಚರ್ ಇದೆ. ಇದು ಎಐ ಆಧರಿತ ಫೀಚರ್. ಎಲಾನ್ ಮಸ್ಕ್ ಇದನ್ನು ಉಚಿತ (Grok) ಮತ್ತು ಪಾವತಿಯ (ಸೂಪರ್ ಗ್ರೂಕ್) ವರ್ಷನ್‌ಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಗ್ರೂಕ್ ಮೂಲಕ ಘಿಬ್ಲಿ ಶೈಲಿಯ ಚಿತ್ರಗಳನ್ನು ಹೇಗೆ ರಚಿಸಬಹುದು.
Also Read: 5200mAh ಬ್ಯಾಟರಿಯ POCO C71 5G ಕೇವಲ ₹6499 ರೂಗಳಿಗೆ ಬಿಡುಗಡೆ! ಖರೀದಿಸಲು ಮುಗಿಬಿಳುತ್ತಿರುವ ಜನ!
ಮೊದಲಿಗೆ ಗ್ಲೋಕ್ (Grok App) ಅಪ್ಲಿಕೇಷನ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ಗ್ರೂಕ್ ವೆಬ್‌ಸೈಟ್ ಮೂಲಕವೂ ಈ ಕೆಲಸ ಮಾಡಬಹುದು. ನೀವು ಎಕ್ಸ್‌ನಲ್ಲಿ (ಟ್ವಿಟರ್) ಇದ್ದರೆ ಅಲ್ಲಿಯೇ ಗ್ರೂಕ್ ಎಂಬ ವಿಭಾಗ ಕಾಣಿಸುತ್ತದೆ. ಅಲ್ಲಿ ಕ್ಲಿಕ್‌ಮಾಡಿ.
ಗ್ರೂಕ್ ಬಳಸುತ್ತಿದ್ದೀರಿ ಎನ್ನುವುದ ಖಚಿತಪಡಿಸಿ. ಗ್ರೂಕ್ ಇತ್ತೀಚಿನ ಆವೃತ್ತಿಯಲ್ಲಿ ಈ ಘಿಬ್ಲಿ ಚಿತ್ರಗಳನ್ನು ರಚಿಸಬಹುದು. ಅಟ್ಯಾಚ್‌ಮೆಂಟ್ ಐಕಾನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಯಾವುದೇ ಫೋಟೋವನ್ನು ಅಪ್ಲೋಡ್ ಮಾಡಿ.
ಇದರಲ್ಲಿ ನೀವು Convert this into a Studio Ghibli-style illustration ಎಂದು ಪ್ರಾಂಪ್ಟ್ ನೀಡಿ. ಇದರ ಬದಲು ಬೇಕಿದ್ದರೆ Make this photo look like a scene from a Ghibli movie ಎಂದು ಪ್ರಾಂಪ್ಟ್ ನೀಡಬಹುದು.
ಕೊನೆಯಲ್ಲಿ ನಿಮ್ಮ ಗ್ರೂಕ್ ನಿಮ್ಮ ಫೋಟೋವನ್ನು ಘಿಬ್ಲಿ ಶೈಲಿಯ ಫೋಟೋವಾಗಿ ಪರಿವರ್ತಿಸಿ ನೀಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile