Aadhaar-PAN Link: ಈಗಾಗಲೇ ನಿಮ್ಮ ಪ್ಯಾನ್-ಆಧಾರ್ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯವಾಗಿದೆ. ಪ್ಯಾನ್ ಅನ್ನು ಜೂನ್ 30, 2023 ರೊಳಗೆ ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು. ಪ್ಯಾನ್-ಆಧಾರ್ ಲಿಂಕ್ ಆಗದಿದ್ದರೆ ಸರ್ಕಾರ ದಂಡವನ್ನು ವಿಧಿಸುವುದರ ಜೊತೆಗೆ ನಿಮ್ಮ PAN ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸುತ್ತದೆ. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ಸಮಯವನ್ನು ವಿಸ್ತರಿಸಿರುವುದರಿಂದ ಈಗಾಗಲೇ ನಿಮ್ಮ ಪ್ಯಾನ್-ಆಧಾರ್ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯವಾಗಿದೆ.
1. ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಪುಟದ ಎಡಭಾಗದಲ್ಲಿರುವ "Quick Links" ಅನ್ನು ಕ್ಲಿಕ್ ಮಾಡಿ ಮತ್ತು "ಲಿಂಕ್ ಆಧಾರ್ ಸ್ಟೇಟಸ್" ಅನ್ನು ಆಯ್ಕೆಮಾಡಿ.
3. ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ ಮತ್ತು 10 ಅಂಕಿಯ PAN ಸಂಖ್ಯೆಯನ್ನು ಆಯಾ ಕ್ಷೇತ್ರಗಳಲ್ಲಿ ಟೈಪ್ ಮಾಡಿ.
4. ನಂತರ View Link Aadhaar Status ಗೆ ಹೋಗಿ.
5. ನಿಮ್ಮ ಆಧಾರ್ ಸಂಖ್ಯೆ ಸ್ಕ್ರೀನ್ ಮೇಲೆ ಕಂಡರೆ ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳು ಈಗಾಗಲೇ ಲಿಂಕ್ ಆಗಿವೆ ಎಂದರ್ಥ.
6. ದಂಡ ಅಥವಾ ತೆರಿಗೆ ಸಲ್ಲಿಕೆಯಲ್ಲಿ ಸಮಸ್ಯೆಗಳನ್ನು ತಪ್ಪಿಸಲು ಆಧಾರ್ ಸಂಖ್ಯೆ ಕಾಣಿಸದಿದ್ದರೆ ನೀವು ಸಾಧ್ಯವಾದಷ್ಟು ಬೇಗ ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು.
ಈ ನಿಯಮವನ್ನು ಅನುಸರಿಸದ್ದರೆ ಸರ್ಕಾರ ನಿಮಗೆ ದಂಡವನ್ನು ವಿಧಿಸುವುದರ ಜೊತೆಗೆ ನಿಮ್ಮ PAN ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸುತ್ತದೆ. ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ಟ್ವಿಟರ್‌ನಲ್ಲಿ ಪ್ಯಾನ್-ಆಧಾರ್ ಲಿಂಕ್ ಮಾಡುವ ಸಮಯ ಹತ್ತಿರ ಸಮೀಪಿಸುತ್ತಿದೆ ಎಂದು ಜನರಿಗೆ ನೆನಪಿಸಿದೆ. 1961 ರ ಐಟಿ ಕಾಯಿದೆಯ ಪ್ರಕಾರ ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಎಲ್ಲಾ ಪ್ಯಾನ್ ಕಾರ್ಡ್ ಹೊಂದಿರುವವರು ತಮ್ಮ ಪ್ಯಾನ್ ಅನ್ನು ಜೂನ್ 30, 2023 ರೊಳಗೆ ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು.