ನೀವೊಬ್ಬ ಉದ್ಯೋಗಿಯಾಗಿದ್ದರೆ ನಿಮ್ಮ ಉದ್ಯೋಗಿ ಭವಿಷ್ಯ ನಿಧಿಯ ಬ್ಯಾಲೆನ್ಸ್ (EPF Balance) ಪರಿಶೀಲಿಸುವುದು ಅತ್ಯಗತ್ಯವಾಗಿದೆ. ಇದರೊಂದಿಗೆ ಉದ್ಯೋಗಿಗಳ ಭವಿಷ್ಯ ನಿಧಿ (EPF) ಉಳಿತಾಯ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಉದ್ಯೋಗಿ ಮತ್ತು ಉದ್ಯೋಗದಾತರು ನಿವೃತ್ತಿಯ ನಂತರ ಅಥವಾ ಉದ್ಯೋಗಗಳನ್ನು ಬದಲಾಯಿಸಿದ ನಂತರ ಪಡೆಯಬಹುದಾದ ಉಳಿತಾಯಕ್ಕೆ ಸಮಾನ ಮೊತ್ತವನ್ನು ಕೊಡುಗೆ ನೀಡುತ್ತಾರೆ. ನೀವು ಈಗ ನಿಮ್ಮ EPF ಬ್ಯಾಲೆನ್ಸ್ ಅನ್ನು ಮೂರು ವಿಧಾನದಲ್ಲಿ ಅವೆಂದರೆ SMS ಮೂಲಕ ಮಿಸ್ಡ್ ಕಾಲ್ ನೀಡುವ ಮೂಲಕ ಮತ್ತು ಕೊನೆಯದಾಗಿ EPFO ಅಥವಾ Umang ಅಪ್ಲಿಕೇಶನ್ ಪೋರ್ಟಲ್ ಮೂಲಕ ಕೆಲವೇ ನಿಮಿಷಗಳಲ್ಲಿ ಪರಿಶೀಲಿಸಬಹುದು.
Also Read: ಇವೇ ನೋಡಿ ಭಾರತದಲ್ಲಿ ಸುಮಾರು 25,000 ರೂಗಳಿಗೆ ಲಭ್ಯವಿರುವ 50 ಇಂಚಿನ ಲೇಟೆಸ್ಟ್ Smart TV
ಇಪಿಎಫ್ ಬ್ಯಾಲೆನ್ಸ್ (EPF Balance) ಅನ್ನು ತುಂಬ ಸರಳ ಮತ್ತು ಸುಲಭವಾಗಿ ಪ್ರವೇಶಿಸಲು ಉದ್ಯೋಗಿಗಳಿಗೆ ಅವಕಾಶ ನೀಡುವ ಮೂಲಕ ನಿಮ್ಮ ಖಾತೆಯನ್ನು ಕಂಟ್ರೋಲ್ ಮಾಡಬಹುದು. ನಿಮ್ಮ UAN ಸಕ್ರಿಯವಾಗಿರುವಾಗ ಮತ್ತು ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಮತ್ತು PAN ನೊಂದಿಗೆ ಲಿಂಕ್ ಮಾಡಿದ್ದರೆ ಮಾತ್ರ SMS ಕಳುಹಿಸುವ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಬಹುದು. ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಮತ್ತು ಪ್ಯಾನ್‌ನೊಂದಿಗೆ ನಿಮ್ಮ UAN ಅನ್ನು ನೀವು ಲಿಂಕ್ ಮಾಡದಿದ್ದರೆ ಈ SMS ಮೂಲಕ ನಿಮ್ಮ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಸಾಧ್ಯವಿರೋದಿಲ್ಲ. ಆದ್ದರಿಂದ ನಿಮ್ಮ UAN ಖಾತೆಯಲ್ಲಿ ಯಾವುದೇ eKYC ಪೂರ್ಣಗೊಳ್ಳದಿದ್ದರೆ ತಕ್ಷಣ ಅದನ್ನು ಪೂರ್ಣಗೊಳಿಸಿಕೊಳ್ಳಿ.
ಹಂತ 1: ನಿಮ್ಮ PF ಖಾತೆಯಲ್ಲಿ ನೋಂದಾಯಿತವಾಗಿರುವ ಮೊಬೈಲ್ ನಂಬರ್‌ನಿಂದ 9966044425 ನಂಬರ್‌ಗೆ ಮಿಸ್ಡ್ ಕಾಲ್ ಮಾಡಬಹುದು (ಗೂಗಲ್‌ನಲ್ಲಿ ಕೆಲವೆಡೆ 011-22901406 ಸಂಖ್ಯೆ ನೀಡಲಾಗಿದೆ ಆದರೆ ಇದು ಪ್ರಸ್ತುತ ಸೇವೆಯಲ್ಲಿಲ್ಲ).
ಹಂತ 2: ನೀವು ಮಿಸ್ಡ್ ಕಾಲ್ ಮಾಡಿದ ನಂತರ ನಿಮ್ಮ PF ವಿವರಗಳೊಂದಿಗೆ ನಿಮಗೆ SMS ಸ್ವೀಕರಿಸುತ್ತೀರಿ ಅದರಲ್ಲಿ ನಿಮ್ಮ ಖಾತೆಯ ಬ್ಯಾಲೆನ್ಸ್ ಮತ್ತು PF ಖಾತೆಯ ಮಾಹಿತಿ ಲಭ್ಯವಿರುತ್ತದೆ.
ಇದರ ಕ್ರಮವಾಗಿ ನೀವು SMS ಮೂಲಕ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಬಯಸಿದರೆ ಕೇವಲ ಒಂದೇ ಒಂದು ಮೆಸೇಜ್ ಸೆಂಡ್ ಮಾಡಬೇಕಿದೆ. ಅದ್ದಕ್ಕಾಗಿ ನೀವು ನಿಮ್ಮ PF ಖಾತೆಯಲ್ಲಿ ನೋಂದಾಯಿತವಾಗಿರುವ ಮೊಬೈಲ್ ನಂಬರ್‌ನಿಂದ 7738299899 ನಂಬರ್‌ಗೆ ಮೆಸೇಜ್ ಕಳುಹಿಸಬೇಕಾಗುತ್ತದೆ. ಇದನ್ನು ನೀವು EPFOHO UAN ENG ಎಂದು ಬರೆದು ಮೆಸೇಜ್ ಕಳುಹಿಸಬೇಕಾಗುತ್ತದೆ.
ನೀವು ಮಿಸ್ಡ್ ಕಾಲ್ ಮೂಲಕ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಚೆಕ್ ಅನ್ನು ಪರಿಶೀಲಿಸುವ ಮೊದಲು ಈ ಕೆಳಗಿನ ಅವಶ್ಯಕತೆಗಳನ್ನು ಪೂರೈಸಲಾಗಿದೆಯೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. UAN ಅನ್ನು ಸಕ್ರಿಯಗೊಳಿಸುವುದು ಕಡ್ಡಾಯವಾಗಿದೆ. ನಿಮ್ಮ ನೋಂದಾಯಿತ ಸಂಖ್ಯೆಯಿಂದ ಮಿಸ್ಡ್ ಕಾಲ್ ಮಾಡಿದಾಗ ಮಾತ್ರ ಮಿಸ್ಡ್ ಕಾಲ್ ಸೌಲಭ್ಯ ಲಭ್ಯವಿರುವುದರಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಯುಎಎನ್‌ನೊಂದಿಗೆ ನೋಂದಾಯಿಸಿಕೊಳ್ಳಬೇಕು. ಮೊದಲ ಬಾರಿಗೆ ನೀವು UAN ಅನ್ನು ಆಕ್ಟಿವೇಟ್ ಮಾಡಿದಾಗ EPFO ಪೋರ್ಟಲ್‌ನಲ್ಲಿ ನೋಂದಾಯಿಸಿದ 6 ಗಂಟೆಗಳ ನಂತರ ಪಾಸ್‌ಬುಕ್ ಅನ್ನು ವೀಕ್ಷಿಸುವ ಸೌಲಭ್ಯವು ಲಭ್ಯವಿರುತ್ತದೆ ಎನ್ನುವುದನ್ನು ಗಮನದಲ್ಲಿಡಿ.
ನೀವು ಅಪ್ಲಿಕೇಶನ್ ಮೂಲಕ ಈ ಮಾಹಿತಿ ಪಡೆಯಲು ಬಯಸಿದರೆ ಅದಕ್ಕಾಗಿ ನೀವು UMANG ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಇದರಿಂದ ಉದ್ಯೋಗಿಗಳು ತಮ್ಮ ಫೋನ್‌ಗಳಲ್ಲಿ ತಮ್ಮ EPF ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. EPF ಬ್ಯಾಲೆನ್ಸ್‌ಗಳನ್ನು ಪರಿಶೀಲಿಸುವುದರ ಹೊರತಾಗಿ ಕ್ಲೈಮ್‌ಗಳನ್ನು ಫೈಲ್ ಮಾಡಲು ಮತ್ತು ಟ್ರ್ಯಾಕ್ ಮಾಡಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ. ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಸದಸ್ಯರು ತಮ್ಮ UAN-ನೋಂದಾಯಿತ ಸೆಲ್‌ಫೋನ್ ಸಂಖ್ಯೆಯನ್ನು ಬಳಸಿಕೊಂಡು ಒಂದು-ಬಾರಿ ನೋಂದಣಿಯನ್ನು ಪೂರ್ಣಗೊಳಿಸಬೇಕು. ಇದರಲ್ಲಿ ನೀವು ನಿಮ್ಮ UAN ನಂಬರ್ ಮತ್ತು ಪಾಸ್ವರ್ಡ್ ನೀಡಿ ಲಾಗಿನ್ ಮಾಡಬೇಕಾಗುತ್ತದೆ. ಇದರ ನಂತರ ಬ್ಯಾಲೆನ್ಸ್ ಚೆಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು.