ಭಾರತದಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಅತಿದೊಡ್ಡ ಮತ್ತು ಪ್ರಮುಖ ದಾಖಲೆ ಅಂದ್ರೆ ಅದು ಪಡಿತರ ಚೀಟಿ (Ration Card) ಆಗಿದೆ. ಇದನ್ನು ಭಾರತ ಸರ್ಕಾರ ಮುಖ್ಯವಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತ ಅಥವಾ ಅತಿ ಕಡಿಮೆ ಬೆಲೆಗೆ ದವಸ ಧಾನ್ಯಗಳನ್ನು ನೀಡುವ ಸಲುವಾಗಿ ಇದನ್ನು ಪರಿಚಯಿಸಲಾಗಿದೆ. ಇದರೊಂದಿಗೆ ನಿಮ್ಮ ಸರಿ ಸುಮಾರು ಎಲ್ಲ ಕೆಲಸ ಕಾರ್ಯಗಳಿಗೆ ಪ್ರಮುಖ ದಾಖಲೆಯಾಗಿ ಪಡಿತರ ಚೀಟಿ (Ration Card) ಗುರುತಿಸಿಕೊಂಡಿದೆ. ಮೊದಲು ನಿಮಗೊಂದು ಹೊಸ ಪಡಿತರ ಚೀಟಿ ಬೇಕಿದ್ದರೆ ಇದರ ಬಗ್ಗೆ ಹೆಚ್ಚು ಮಾಹಿತಿ ಹೊಂದಿಲ್ಲದವರು ಇಂದಿಗೂ ಗಂಟೆಗಟ್ಟಲೆ ಸಾಲುಗಳಲ್ಲಿ ನಿಲ್ಲುವುದನ್ನು ನೀವು ಕಂಡಿರಬಹುದು ಆದರೆ ಈಗ ಇದೆಲ್ಲ ಉತ್ತಮವಾಗಿ ಬದಲಾಗಿದೆ.
ಈ ಮೇಲೆ ತಿಳಿಸಿರುವಂತೆ ಇದರ ಬಗ್ಗೆ ಹೆಚ್ಚು ಮಾಹಿತಿ ಹೊಂದಿಲ್ಲದವರು ಗಂಟೆಗಟ್ಟಲೆ ಸಾಲುಗಳಲ್ಲಿ ನಿಲ್ಲುವುದನ್ನು ಕೊನೆಗೊಳಿಸಲು ಭಾರತ ಸರ್ಕಾರ ಈ ಈಗಾಗಲೇ ಆನ್ಲೈನ್ ಮೂಲಕ ಲಭ್ಯವಾಗುವಂತೆ ಮಾಡಿದೆ. ಆದರೆ ಹಲವಾರು ಬಾರಿ ನೀವು ಸ್ವತಃ ಅಥವಾ ಏಜೆಂಟ್ಗಳ ಮೂಲಕ ಪಡೆಯುವ ಪಡಿತರ ಚೀಟಿ (Ration Card) ಒಳಗೆ ನಿಮಗೆ ಅರಿವಿಲ್ಲದ ಹಲವಾರು ತಪ್ಪುಗಳು ಪ್ರಿಂಟ್ ಆಗುತ್ತವೆ ಮತ್ತೆ ಕೆಲವೆಡೆ ನಮೂದಿಸಬೇಕಿರುವ ಮಾಹಿತಿಗಳೆ ಇರೋಲ್ಲ.
ಆದ್ದರಿಂದ ಮತ್ತೆ ನೀವು ಇದರ ಕಚೇರಿ ಅಥವಾ ಗಂಟೆಗಟ್ಟಲೆ ಸಾಲುಗಳಲ್ಲಿ ನಿಲ್ಲುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಈ ಕೆಳಗಿನ ಅಂಶಗಳನ್ನು ಅನುಸರಿಸಿ ನಿಮ್ಮ ಪಡಿತರ ಚೀಟಿ (Ration Card) ಮಾಹಿತಿಯನ್ನು ನೀವೇ ಪರಿಶೀಲಿಸಿಕೊಳ್ಳಬಹುದು. ಒಮ್ಮೆ ನೀವು ಪಡೆಯ್ವ ಪಟ್ಟಿಯಲ್ಲಿ ನೀವು ಒಂದೇ ಪಡಿತರ ಚೀಟಿ (Ration Card) ಒಳಗೆ ಎಷ್ಟು ಜನರು ಸೇರಿದ್ದರೆಂದು ಸಹ ನೀವು ಕಾಣಬಹುದು.
Also Read: BSNL Plan 2024: ಅತಿ ಕಡಿಮೆ ಬೆಲೆಗೆ 90 ದಿನಗಳ ವ್ಯಾಲಿಡಿಟಿ ಪ್ಲಾನ್ Unlimited ಬೆನಿಫಿಟ್ ನೀಡುತ್ತಿದೆ
➥ಮೊದಲಿಗೆ ನೀವು ನೇರವಾಗಿ ಈ ಸರ್ಕಾರಿ https://nfsa.gov.in/portal/Ration_Card_State_Portals_AA ಲಿಂಕ್ ಮೇಲೆ ಕ್ಲಿಕ್ ಮಾಡಿ.
➥ನಿಮ್ಮ ಪಡಿತರ ಚೀಟಿ (Ration Card) ಯಾವ ರಾಜ್ಯದಿಂದ ಪಡೆದಿದ್ದಿರೋ ಆ ರಾಜ್ಯವನ್ನು ಅರ್ಯ್ಕೆ ಮಾಡಿಕೊಳ್ಳಿ ಈಗ ನಿಮ್ಮ ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ಕರೆದೊಯುತ್ತದೆ.
➥ಇದರ ನಂತರ ಇಲ್ಲಿ ನಿಮಗೆ ALL, RURAL, URBAN ಮತ್ತು IRA ಆಯ್ಕೆಗಳು ಕಾಣುತ್ತವೆ ಇದರಲ್ಲಿ ALL ಸ್ವತಃ ಆಯ್ಕೆಯಾಗಿರುತ್ತದೆ ಅದನ್ನು ಆಗೆಯೇ ಬಿಡಿ ಏನನ್ನು ಬದಲಾಯಿಸಬೇಡಿ.
➥ಕೆಳಗೆ ನಿಮ್ಮ ಜಿಲ್ಲೆಯನ್ನು ಸರಿಯಾಗಿ ಆಯ್ಕೆ ಮಾಡಿಕೊಂಡು ಮುಂದೆ ಸಾಗಿ ಮುಂದಿನ ಪುಟದಲ್ಲಿ ನಿಮ್ಮ ತಾಲೂಕನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಿ.
➥ಈಗ ನಿಮ್ಮ ಏರಿಯಾದಲ್ಲಿರುವ Food and Public Distribution (FPD) ಪಡಿತರ ಅಂಗಡಿಗಳನ್ನು ಸರ್ಚ್ ಮಾಡಿ ಆಯ್ಕೆ ಮಾಡಿ.
➥ಇದರ್ಥ ಬಾಳಿಕೆ ನಿಮಗೆ 12 ಅಂಕೆಯ ಪಡಿತರ ಚೀಟಿ (Ration Card) ಪಟ್ಟಿ ನಿಮ್ಮ ಮುಂದೆ ಕಾಣಿಸುತ್ತದೆ. ಇಲ್ಲಿ ನೀವು ಪ್ರತಿಯೊಂದನ್ನು ನೋಡುವ ಅಗತ್ಯವಿಲ್ಲ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಬಳಸುತ್ತಿದ್ದಾರೆ ನಿಮ್ಮ ಕೀಬೋರ್ಡ್ ಅಲ್ಲಿ Ctrl ಮತ್ತು F ಒಂದೇ ಸತಿ ಪ್ರೆಸ್ ಮಾಡಿ ಸರ್ಚ್ ಅಲ್ಲಿ ನಿಮ್ಮ 12 ಅಂಕೆಯ ಪಡಿತರ ಚೀಟಿ (Ration Card) ಹಾಕಿ ತಕ್ಷಣ ನಿಮ್ಮ ಮುಂದೆ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ಪಡೆಯಬಹುದು.