ಪಿಎಫ್ ಅಂದ್ರೆ ಪ್ರಾವಿಡೆಂಟ್ ಫಂಡ್ ಫಲಾನುಭವಿಯ ಖಾಸಗಿ ಸೀಮಿತ ಕಂಪೆನಿ ಮತ್ತು ಬಹು ರಾಷ್ಟ್ರೀಯ ಕಂಪೆನಿಯ ಜನರಿಗೆ ಲಭ್ಯವಿರುತ್ತದೆ. ಸ್ನೇಹಿತರೇ ಯಾವುದೇ ಒಂದು ಕಂಪನಿಯಲ್ಲಿ ನಿಮ್ಮ ಮಾಸಿಕ ಸಂಬಳದಲ್ಲಿ PF ಸೇರಿಸಿದ್ದೇವೆ ಎಂದು ಖಚಿತವಾದ ಕೂಡಲೇ ನಿಮ್ಮ ಅಕೌಂಟ್ ನೋಡುವವರನ್ನು ಸಂಪರ್ಕಿಸಿ ನಿಮ್ಮ PF ಮಾಹಿತಿಯನ್ನು ಅವರಿಂದ ಪಡೆಯುಕೊಳ್ಳಿ. ಅಂದ್ರೆ ನಿಮ್ಮ UAN, PF ಅಕೌಂಟ್ ನಂಬರ್ ಮತ್ತು ಅದರ ಪಾಸ್ವರ್ಡ್ ಪಡೆಯಲು ಮರೆಯದಿರಿ. ಏಕೆಂದರೆ ಇಂದಿಗೂ ಸಹ ಬಹು ಮುಗ್ದ ಜನರಿಗೆ ಇದರ ಬಗ್ಗೆ ಅರಿವೇ ಇಲ್ಲ.
ಇದರ ನಂತರ EPFO ಅಂದ್ರೆ (Employees' Provident Fund Organisation) ನಲ್ಲಿ ಪಿಎಫ್ನ ಫಲಾನುಭವಿಗಳಿಗೆ ಅರ್ಜಿಯನ್ನು ಬಿಡುಗಡೆ ಮಾಡುತ್ತದೆ. ಉದ್ಯೋಗಿಯು ತನ್ನ ಬ್ಯಾಲೆನ್ಸ್ ಅನ್ನು PF ಅಪ್ಲಿಕೇಶನ್, EPFO ವೆಬ್ ಪೋರ್ಟಲ್ ಅಥವಾ SMS ಬಳಸುವ ಮೂಲಕ ಹಲವಾರು ಸಮಸ್ಯೆಗಳನ್ನೂ ಎದುರಿಸುತ್ತ ತಮ್ಮ ತಮ್ಮ ಬ್ಯಾಲೆನ್ಸ್ ಅನ್ನು ಕಂಡುಹಿಡಿದುಕೊಳ್ಳುತ್ತಾರೆ. ಇಂದು ಈ ಮೂರು ಮಾಧ್ಯಮಗಳ ಮೂಲಕ ಹೇಗೆ ನಿಮ್ಮ ಬ್ಯಾಲೆನ್ಸ್ ಮಾಹಿತಿಯನ್ನು ಪಡೆಯಬವುದೆಂಬುದನ್ನು ತಿಳಿಸುತ್ತೇವೆ.
ನೀವು ಇಂಟರ್ನೆಟ್ ತಿಳುವಳಿಕೆ ಅಥವಾ ಬಳಕೆದಾರರಾಗಿದ್ದಾರೆ ನಿಮ್ಮ ಸ್ಮಾರ್ಟ್ಫೋನಲ್ಲಿ SMS ಮೂಲಕ ನಿಮ್ಮ PF ಖಾತೆಯಿಂದ ಮಾಹಿತಿಯನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ನೀವು SMS ಅನ್ನು ಕಳುಹಿಸಬೇಕಾಗುತ್ತದೆ. ಅದಕ್ಕೂ ಮೊದಲು ನಿಮ್ಮ PF ಅಕೌಂಟ್ ನಲ್ಲಿರುವ ಮೊಬೈಲ್ ಸಂಖ್ಯೆಯ ಮೂಲಕ ಮಾತ್ರ ಈ SMS ಕಳುಯಿಸಬೇಕಾಗುತ್ತದೆ.
ಈಗ ನಿಮ್ಮ ಫೋನ್ನ ಮೆಸೇಜ್ ವಿಭಾಗಕ್ಕೆ ಹೋಗಿ ಹೊಸ SMS ಕಳುಹಿಸಲು ಟ್ಯಾಬ್ ತೆರೆಯಿರಿ. ಅಲ್ಲಿ EPFOHO UAN ENG ಎಂದು ಟೈಪ್ ಮಾಡಿ 77382-99899 ನಂಬರ್ಗೆ SMS ಕಳುಹಿಸಿ. ನಿಮ್ಮ ಮೊಬೈಲ್ ನಂಬರ್ ನಿಮ್ಮ EPF ಅಕೌಂಟಲ್ಲಿ ನೋಂದಾಯಿಸಿದ್ದರೆ ನಿಮ್ಮ ಖಾತೆಯ ಮಾಹಿತಿಯನ್ನು SMS ಮೂಲಕ ಪಡೆಯುತ್ತೀರಿ. ಈ ಸೇವೆ ಒಟ್ಟಾರೆಯಾಗಿ 10 ಭಾಷೆಗಳಲ್ಲಿ ಪಡೆಯುವ ಅವಕಾಶ ನೀಡುತ್ತದೆ.
ಅದರಲ್ಲಿ ನಮ್ಮ ಕನ್ನಡವೂ ಸಹ ಒಂದಾಗಿದೆ. ಅವೆಂದರೆ ಇಂಗ್ಲೀಷ್, ಹಿಂದಿ, ಪಂಜಾಬಿ, ಗುಜರಾತಿ, ಮರಾಠಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ಈ ಮಾಹಿತಿ ಪಡೆಯಬವುದು ರಾಷ್ಟ್ರದ ಲಭ್ಯವಿದೆ. ಈ ಮಾಹಿತಿಯನ್ನು ಬೆಲೆ ಭಾಷೆಯಲ್ಲಿ ಪಡೆಯಲು (EPFOHO UAN) ENG ಈ ರೀತಿಯ ಮೆಸೇಜ್ ಕೊನೆಯಲ್ಲಿ ನಿಮ್ಮ ಭಾಷೆಯ ಮೂರು ಅಕ್ಷರಗಳನ್ನು ಸೇರಿಸಬೇಕಾಗುತ್ತದೆ.
ಈ ರೀತಿ ಮಾಹಿತಿ ಪಡೆಯಲಾಗಲಿಲ್ಲವಾದರೆ ಕೇವಲ ಒಂದು ಮಿಸ್ ಕಾಲ್ ಮೂಲಕ ಸಹ ನಿಮ್ಮ PF ಖಾತೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ನಿಮ್ಮ PF ಅಕೌಂಟ್ ನಲ್ಲಿರುವ ಮೊಬೈಲ್ ಸಂಖ್ಯೆಯ ಮೂಲಕ ಮಾತ್ರ ಈ ಕರೆ ಮಾಡಬೇಕಾಗುತ್ತದೆ. ನೀವು 011-22901406 ನಂಬರ್ಗೆ ಮಿಸ್ ಕಾಲ್ ಮಾಡಬೇಕಾಗುತ್ತದೆ. ಕರೆ ಮುಗಿದ ತಕ್ಷಣ ಖಾತೆಯ ಬ್ಯಾಲೆನ್ಸ್ ಮಾಹಿತಿಯನ್ನು ಪಡೆಯುವಿರಿ.