PF Balance: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭಾರತದ ಸಂಘಟಿತ ವಲಯದಲ್ಲಿ ಉದ್ಯೋಗದಲ್ಲಿರುವ ಉದ್ಯೋಗಿಗಳಿಗೆ ಕಡ್ಡಾಯ ಉದ್ಯೋಗಿ ಭವಿಷ್ಯ ನಿಧಿ ಯೋಜನೆಗಳನ್ನು ನಿರ್ವಹಿಸುವ ಪ್ರತಿಷ್ಠಿತ ಸಂಸ್ಥೆಯಾಗಿದೆ. EPF ಖಾತೆಗೆ ಕೊಡುಗೆ ನೀಡುವ ಉದ್ಯೋಗಿಯು ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ವಿವಿಧ ಆನ್‌ಲೈನ್ ವಿಧಾನಗಳನ್ನು ಅಂದ್ರೆ ಉಮಂಗ್, ಎಸ್ಎಂಎಸ್ ಮತ್ತು ಮಿಸ್ಡ್ ಕಾಲ್ ನೀಡುವ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಅಲ್ಲದೆ ಕೊನೆಯದಾಗಿ ಬೇಕಿದ್ದರೆ ನೀವು EPFO ಇ-ಸೇವಾ ಪೋರ್ಟಲ್ ಭೇಟಿ ನೀಡುವ ಮೂಲಕವೂ ಪರಿಶಿಸಬಹುದು ಆದರೆ ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಈ ಉಮಂಗ್ ಅಪ್ಲಿಕೇಶನ್ ಬಳಸಿ ಉದ್ಯೋಗಿಗಳು ತಮ್ಮ ಮೊಬೈಲ್ ನಲ್ಲೆ PF ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದು. ಒಂದೇ ವೇದಿಕೆಯಲ್ಲಿ ಅನೇಕ ಸರ್ಕಾರಿ ಸೇವೆಗಳಿಗೆ ಪ್ರವೇಶವನ್ನು ಒದಗಿಸಲು ಉಮಂಗ್ ಅಪ್ಲಿಕೇಶನ್ ಅನ್ನು ಭಾರತ ಸರ್ಕಾರ ರಚಿಸಿದೆ. ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನೀವು ನಿಮ್ಮ EPF ಪಾಸ್‌ಬುಕ್ ಅನ್ನು ಪರಿಶೀಲಿಸಬಹುದು, ಕ್ಲೈಮ್ ಮಾಡಬಹುದು ಮತ್ತು ಕ್ಲೈಮ್ ಅನ್ನು ಟ್ರ್ಯಾಕ್ ಸಹ ಮಾಡಬಹುದು. ಇದನ್ನು ನೀವು ಪ್ರಾರಂಭಿಸುವ ಮೊದಲು ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಒಂದು ಬಾರಿ ನೋಂದಣಿಯನ್ನು ಪೂರ್ಣಗೊಳಿಸಬೇಕು. Umang ಅಪ್ಲಿಕೇಶನ್‌ನ "View Passbook" ಟ್ಯಾಬ್ ಅಡಿಯಲ್ಲಿ ನಿಮ್ಮ PF ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.
ಇದರ ನಂತರ ಉದ್ಯೋಗಿಯ UAN ಅನ್ನು EPFO ನಲ್ಲಿ ನೋಂದಾಯಿಸಿದ್ದರೆ ಅವರು ತಮ್ಮ PF ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು ಮತ್ತು 7738299899 ಸಂಖ್ಯೆಗೆ SMS ಕಳುಹಿಸುವ ಮೂಲಕ ಅವರ ಇತ್ತೀಚಿನ PF ಬ್ಯಾಲೆನ್ಸ್ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಉದ್ಯೋಗಿಗಳು ಮೊದಲು ಮಾಡಬೇಕಿರುವುದು EPFOHO UAN ENG ಗೆ ಮೆಸೇಜ್ ಕಳುಹಿಸುವುದು. 'ENG' ಎಂದರೆ ನಿಮ್ಮ ಆದ್ಯತೆಯ ಮೊದಲ ಭಾಷೆಯ ಮೂರು ಅಕ್ಷರಗಳು. ಹಿಂದಿಯಲ್ಲಿ ಮೆಸೇಜ್ ಪಡೆಯಲು ನೀವು EPFOHO UAN Hin ಎಂದು ಟೈಪ್ ಮಾಡಬೇಕಾಗುತ್ತದೆ.
ನೀವು UAN ಪೋರ್ಟಲ್‌ನಲ್ಲಿ ನೋಂದಾಯಿಸಿದ್ದರೆ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಿಂದ 9966044425 ಗೆ ಮಿಸ್ಡ್ ಕಾಲ್ ಮಾಡುವ ಮೂಲಕ ನೀವು ಮಾಹಿತಿಯನ್ನು ಪಡೆಯಬಹುದು. ನಿಮ್ಮ ಸಂಬಂಧಿತ ಬ್ಯಾಂಕ್ ಖಾತೆ ಸಂಖ್ಯೆ, ಪ್ಯಾನ್ ಮತ್ತು ಆಧಾರ್ ಅನ್ನು UAN ಗೆ ಲಿಂಕ್ ಆಗಿದ್ಯಾ ಎಂದು ನೀವು ಪರಿಶೀಲಿಸಬೇಕು. ಈ ಸೇವೆಯು ಉಚಿತವಾಗಿದ್ದು ಏಕೀಕೃತ ಪೋರ್ಟಲ್‌ಗೆ ನಿಮ್ಮ ಮೊಬೈಲ್ ನಂಬರ್ ಅನ್ನು UAN ನೊಂದಿಗೆ ಸಕ್ರಿಯಗೊಳಿಸುವುದು ಅಗತ್ಯವಾಗಿದೆ.