EPFO: ಮಿಸ್ಡ್‌ ಕಾಲ್‌ ಮಾಡಿ ನಿಮ್ಮ ಪಿಎಫ್‌ ಬ್ಯಾಲೆನ್ಸ್‌ ಪರಿಶೀಲಿಸುವುದು ಹೀಗೆ ತಿಳಿಯಿರಿ!

Updated on 05-Sep-2022
HIGHLIGHTS

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳ ಪಾಲಿಗೆ ಕಷ್ಟಕಾಲದಲ್ಲಿ ಆರ್ಥಿಕ ನೆರವು ನೀಡುವ ನಿಧಿಯಾಗಿದೆ.

EPFO ಖಾತೆಯಲ್ಲಿ 011-22901406 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ತಮ್ಮ ಪಿಎಫ್‌ ಖಾತೆಯ ಬ್ಯಾಲೆನ್ಸ್‌ ಚೆಕ್‌ ಮಾಡಬಹುದು.

ಈ ಸಂದೇಶವನ್ನು ಕಳುಹಿಸುವ ಮೂಲಕ ನಿಮ್ಮ PF ಬ್ಯಾಲೆನ್ಸ್ ಚೆಕ್‌ ಅನ್ನು ಪರಿಶೀಲಿಸಬಹುದಾಗಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳ ಪಾಲಿಗೆ ಕಷ್ಟಕಾಲದಲ್ಲಿ ಆರ್ಥಿಕ ನೆರವು ನೀಡುವ ನಿಧಿಯಾಗಿದೆ. ಇದೇ ಕಾರಣಕ್ಕೆ ಉದ್ಯೋಗಿಗಳು ತಾವು ದುಡಿಯುವ ಹಣದಲ್ಲಿ ಇಂತಿಷ್ಟು ಹಣವನ್ನು ಪಿಎಫ್‌ ರೂಪದಲ್ಲಿ ಜಮೆ ಮಾಡುತ್ತಾರೆ. ಸದ್ಯ ಇದೀಗ EPFO ತನ್ನ ಚಂದಾದಾರರಿಗೆ ಸೋಮವಾರ 21.38 ಕೋಟಿ ಪಿಎಫ್ ಖಾತೆಗಳಿಗೆ ಹಣಕಾಸು ವರ್ಷ 2020-21ರಲ್ಲಿ ಶೇಕಡಾ 8.50 ಬಡ್ಡಿಯೊಂದಿಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. ಈ ಮಾಹಿತಿಯನ್ನು EPFO ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಶೇರ್‌ ಮಾಡಿದೆ.

ಮಿಸ್ಡ್‌ ಕಾಲ್‌  ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದೇಗೆ?

EPFO ಖಾತೆಯಲ್ಲಿ ನೋಂದಾಯಿತ ಬಳಕೆದಾರರು ತಮ್ಮ ಯುಎಎನ್ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ತಮ್ಮ ಪಿಎಫ್‌ ಖಾತೆಯ ಬ್ಯಾಲೆನ್ಸ್‌ ಚೆಕ್‌ ಮಾಡಬಹುದು. ನಿಮ್ಮ ಯುಎಎನ್ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ನಂಬರ್‌ಗೆ ಸಂದೇಶ ಕಳುಹಿಸಿದರೆ ಪಿಎಫ್ ಖಾತೆಯ ಬಾಕಿ ವಿವರಗಳೊಂದಿಗೆ ಎಸ್‌ಎಂಎಸ್ ಸ್ವೀಕರಿಸಲಿದ್ದಾರೆ.

SMS ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದೇಗೆ?

EPFOನಲ್ಲಿ ನಿಮ್ಮ ಪಿಎಫ್ ಬ್ಯಾಲೆನ್ಸ್‌ ಪರಿಶೀಲಿಸಲು UAN ನಲ್ಲಿ ನೋಂದಾಯಿಸಿದ ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ 7738299899 ಸಂಖ್ಯೆಗೆ 'EPFOHO UAN ENG' ಎಂಬ ಸಂದೇಶ ಕಳುಹಿಸಬೇಕಾಗುತ್ತದೆ. ಈ ಸಂದೇಶವನ್ನು ಕಳುಹಿಸುವ ಮೂಲಕ ನಿಮ್ಮ PF ಬ್ಯಾಲೆನ್ಸ್ ಚೆಕ್‌ ಅನ್ನು ಪರಿಶೀಲಿಸಬಹುದಾಗಿದೆ. ಈ ಸಂದೇಶವನ್ನು ಕಳುಹಿಸವಾಗ ಕಾಣುವ ಕೊನೆಯ ಮೂರು ಸಂಖ್ಯೆಗಳು ನೀವು ಬಯಸುವ ಭಾಷೆಯನ್ನು ಪ್ರತಿನಿಧಿಸುತ್ತದೆ ಅನ್ನೊದು ಇಂಟ್ರೆಸ್ಟಿಂಗ್‌ ವಿಚಾರ.

ಹಣಕಾಸು ವರ್ಷ 2014 ರಿಂದ EPFO ​​ಸ್ಥಿರವಾಗಿ 8.50%ಕ್ಕಿಂತ ಕಡಿಮೆಯಿಲ್ಲದ ಆದಾಯವನ್ನು ನಿಡುತ್ತಲೇ ಬಂದಿದೆ. ಹೆಚ್ಚಿನ EPF ಬಡ್ಡಿ ದರವು ಕಾಂಪೌಂಡಿಂಗ್ ಜೊತೆಗೆ ಚಂದಾದಾರರ ಲಾಭಗಳಿಗೆ ಗಮನಾರ್ಹ ವ್ಯತ್ಯಾಸವನ್ನು ಮಾಡುತ್ತದೆ. ಈ ಮೊತ್ತವನ್ನು ಸ್ವೀಕರಿಸಿದ ಜನರು ತಮ್ಮ ಇಪಿಎಫ್ ಖಾತೆಯನ್ನು ಪ್ರವೇಶಿಸುವ ಮೂಲಕ ಅದನ್ನು ಪರಿಶೀಲಿಸಬಹುದಾಗಿದೆ. ಇದಕ್ಕಾಗಿ ನೀವು UMANG ಅಪ್ಲಿಕೇಶನ್, SMS, ಮಿಸ್ಡ್ ಕಾಲ್ ಮತ್ತು EPFO ​​ನ ಅಧಿಕೃತ ವೆಬ್‌ಸೈಟ್‌ ಮೂಲಕ ನಿಮ್ಮ PF ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :