ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಕೂಡ ಗಣನೀಯವಾಗಿ ಹೆಚ್ಚುತ್ತಿರುವುದನ್ನು ನ್ಯೂಸ್ ಮತ್ತು ಪೇಪರ್‌ನಲ್ಲಿ ಕಂಡು ಕೇಳುತ್ತಿರಬಹುದು. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಿತ್ತಿರುವ ಹಿನ್ನಲೆಯಲ್ಲಿ ನಿಮ್ಮ Smartphone ಕ್ಯಾಮೆರಾ ಒಂದು ವೇಳೆ Hack ಆದರೆ ಯಾವ ಲಕ್ಷಣಗಳನ್ನು ಕಾಣಿಸುತ್ತವೆ ಎಂಬುದನ್ನು ತಿಳಿಯಿರಿ. ಈ ಸೈಬರ್ ಅಪರಾಧಿಗಳು ಹೊಸ ರೀತಿಯಲ್ಲಿ ಜನರನ್ನು ವಂಚಿಸುತ್ತಾರೆ ಮತ್ತು ಜನರ ಮೊಬೈಲ್‌ಗಳನ್ನು ಹ್ಯಾಕ್ (Hack) ಮಾಡುತ್ತಾರೆ. ಹ್ಯಾಕರ್‌ಗಳು ನಿಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾವನ್ನು ಹ್ಯಾಕ್ (Hack) ಮಾಡಬಹುದು. ನಿಮ್ಮ ಮೇಲೆ ಕಣ್ಣಿಡುತ್ತಾರೆಂದು ನಿಮಗೆ ತಿಳಿದಿದೆಯೇ ಅನೇಕ ಬಾರಿ ಹ್ಯಾಕರ್‌ಗಳು ಸ್ಮಾರ್ಟ್‌ಫೋನ್ ಹ್ಯಾಕ್ ಮಾಡಿ ಕ್ಯಾಮೆರಾದ ಮೂಲಕ ಸದಾ ನಿಮ್ಮನ್ನು ಹಿಂಬಾಲಿಸುತ್ತಿರುತ್ತಾರೆ.
Also Read: OPPO F27 5G ಮುಂದಿನ ವಾರ ಬಿಡುಗಡೆಯಾಗಲು ಸಜ್ಜಾಗಿದೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
ಇದರ ನಂತರ ಅವರು ನಿಮ್ಮ ಸ್ಮಾರ್ಟ್‌ಫೋನ್‌ನ ಕ್ಯಾಮೆರಾದ ಮೂಲಕ ನಿಮ್ಮ ವೈಯಕ್ತಿಕ ಜೀವನವನ್ನು ಸಹ ಇಣುಕಬಹುದು. ನಿಮ್ಮ ಕ್ಯಾಮರಾವನ್ನು ಹ್ಯಾಕ್ ಮಾಡಲಾಗಿದೆ ಅಥವಾ ನಿಮ್ಮ ಕ್ಯಾಮರಾ ಮೂಲಕ ಯಾರಾದರೂ ನಿಮ್ಮ ಮೇಲೆ ಬೇಹುಗಾರಿಕೆ (Hack) ನಡೆಸುತ್ತಿದ್ದಾರೆ ಎಂದು ನೀವು ಭಾವಿಸಿದರೆ ನಿಮ್ಮ ಕ್ಯಾಮರಾವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯುವ ಕೆಲವು ತಂತ್ರಗಳನ್ನು ನಾವು ನಿಮಗೆ ಹೇಳಲಿದ್ದೇವೆ.
ಐಫೋನ್ ಮತ್ತು ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಇಂತಹ ಹಲವು ವೈಶಿಷ್ಟ್ಯಗಳನ್ನು ನೀಡಲಾಗಿದೆ. ಈ ವೈಶಿಷ್ಟ್ಯಗಳ ಸಹಾಯದಿಂದ ನಿಮ್ಮ ಫೋನ್‌ನ ಕ್ಯಾಮೆರಾ ಅಥವಾ ಮೈಕ್ ಅನ್ನು ಬಳಸಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಐಫೋನ್ ಅಥವಾ ಆಂಡ್ರಾಯ್ಡ್ ಫೋನ್‌ನಲ್ಲಿ ಕ್ಯಾಮೆರಾ ಮೂಲಕ ಬೇಹುಗಾರಿಕೆಯನ್ನು (Hack) ನೀವು ಹೇಗೆ ಪತ್ತೆ ಮಾಡಬಹುದು .
ನೀವು ಆಂಡ್ರಾಯ್ಡ್ 12 ಅಥವಾ ಅದಕ್ಕಿಂತ ಹೆಚ್ಚಿನ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತಿದ್ದರೆ ನಿಮ್ಮ ಫೋನ್‌ನ ಮೈಕ್ರೋಫೋನ್ ಅಥವಾ ಕ್ಯಾಮೆರಾವನ್ನು ಬೇರೆಯವರು ಪ್ರವೇಶಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು. ಆಂಡ್ರಾಯ್ಡ್ 12 ನಲ್ಲಿ ಯಾವುದೇ ಅಪ್ಲಿಕೇಶನ್‌ನಿಂದ ಮೈಕ್ರೊಫೋನ್ ಅಥವಾ ಕ್ಯಾಮೆರಾವನ್ನು ಬಳಸಿದಾಗ ಫೋನ್‌ನ ಮೇಲಿನ ಬಲ ಮೂಲೆಯಲ್ಲಿ ಹಸಿರು ಚುಕ್ಕೆ ಆನ್ ಆಗುವ ಸೂಚಕವನ್ನು ಗೂಗಲ್ ಸೇರಿಸಿದೆ. ಇದರಿಂದ ನಿಮ್ಮ ಫೋನ್ ಯಾವಾಗ ಬಳಸಲ್ಪಡುತ್ತದೆ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು.
ನೀವು ಐಫೋನ್ ಅನ್ನು ಬಳಸುತ್ತಿದ್ದರೆ ಮತ್ತು ನಿಮ್ಮ ಕ್ಯಾಮರಾ ಅಥವಾ ಮೈಕ್ರೊಫೋನ್ ಅನ್ನು ನಿಮ್ಮ ಮೇಲೆ ಕಣ್ಣಿಡಲು ಬಳಸಲಾಗುತ್ತಿದೆಯೇ ಎಂದು ತಿಳಿಯಲು ಬಯಸಿದರೆ ಇದಕ್ಕಾಗಿ ನೀವು ನಿಮ್ಮ ಫೋನ್‌ನ ಮೇಲಿನ ಬಲ ಮೂಲೆಯಲ್ಲಿ ಉರಿಯುತ್ತಿರುವ ಆರೆಂಜ್ ಮತ್ತು ಹಸಿರು ಚುಕ್ಕೆಗಳ ದೀಪಗಳ ಮೇಲೆ ಕಣ್ಣಿಡಬೇಕು. ಯಾವುದೇ ಅಪ್ಲಿಕೇಶನ್ ನಿಮ್ಮ ಮೈಕ್ರೊಫೋನ್ ಅನ್ನು ಬಳಸಿದಾಗ ಆರೆಂಜ್ ಚುಕ್ಕೆ ಆನ್ ಆಗುತ್ತದೆ. ಆದರೆ ಯಾವುದೇ ಅಪ್ಲಿಕೇಶನ್ ಕ್ಯಾಮೆರಾವನ್ನು ಬಳಸಿದರೆ ಅದೇ ಸ್ಥಳದಲ್ಲಿ ಹಸಿರು ಚುಕ್ಕೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಅಂತಹ ಯಾವುದೇ ಅಪ್ಲಿಕೇಶನ್ ಅನ್ನು ಬಳಸದಿದ್ದರೆ ಮತ್ತು ಇನ್ನೂ ಯಾವುದೇ ಹಸಿರು ಅಥವಾ ಆರೆಂಜ್ ಚುಕ್ಕೆ ಬಂದರೆ ನೀವು ಹ್ಯಾಕಿಂಗ್‌ಗೆ ಬಲಿಯಾಗಿದ್ದೀರಿ ಎಂದು ಅರ್ಥಮಾಡಿಕೊಳ್ಳಿ ಮತ್ತು ನೀವು ತಕ್ಷಣ ಅದರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.