Phone Hacking: ನಿಮ್ಮ ಸ್ಮಾರ್ಟ್​ಫೋನ್ ಹೀಗೂ ಹ್ಯಾಕ್ ಆಗುತ್ತೆ ನಿಮಗೊತ್ತಾ! ನಿಮಗೂ ತಿಳಿದಿರಲಿ ಈ ವಿಚಾರ

Updated on 17-Nov-2021
HIGHLIGHTS

ವಿಶ್ವದಾದ್ಯಂತ ಅನೇಕರು ಸ್ಮಾರ್ಟ್​ಫೋನ್​ಗಳನ್ನು ಬಳಸುತ್ತಾರೆ.

ಗೂಗಲ್ ಪ್ಲೇ ಸ್ಟೋರ್​​ನಲ್ಲಿ ದೊರಕದ ಆ್ಯಪ್​​ಗಳನ್ನು ಇತರ ವೆಬ್​ಸೈಟ್ ಮೂಲಕ ಡೌನ್ಲೋಡ್ ಮಾಡಿ ಇನ್​ಸ್ಟಾಲ್​ ಮಾಡಬಹುದಾಗಿದೆ.

ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಹ್ಯಾಕರ್ಸ್​​ ಉಪಟಳವು ಹೆಚ್ಚಾಗಿದೆ.

ವಿಶ್ವದಾದ್ಯಂತ ಅನೇಕರು ಸ್ಮಾರ್ಟ್​ಫೋನ್​ಗಳನ್ನು ಬಳಸುತ್ತಾರೆ. ಎಳೆಯ ಮಕ್ಕಳಿಂದ ಹಿಡಿದು ಬಿಳಿ ಕೂದಲಿನ ಅಜ್ಜ-ಅಜ್ಜಿಯ ಕೈಯಲ್ಲೂ ಸ್ಮಾರ್ಟ್​ಫೋನ್​ ಇದೆ. ಹಲವಾರು ಕಂಪನಿಗಳಿಂದು ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳನ್ನು ಉತ್ಪಾದಿಸುತ್ತಿವೆ. ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್​ಗಳು ದೊರಕುತ್ತಿವೆ. ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ನಲ್ಲಿ  ವಿವಿಧ ಆ್ಯಪ್​ಗಳನ್ನು ಇನ್​​ಸ್ಟಾಲ್​​  ಮಾಡುವಂತೆ ಅಭಿವೃದ್ಧಿ ಪಡಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್​​ನಲ್ಲಿ ದೊರಕದ ಆ್ಯಪ್​​ಗಳನ್ನು ಇತರ ವೆಬ್​ಸೈಟ್ ಮೂಲಕ ಡೌನ್ಲೋಡ್ ಮಾಡಿ ಇನ್​ಸ್ಟಾಲ್​ ಮಾಡಬಹುದಾಗಿದೆ. 

ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಹ್ಯಾಕರ್ಸ್​​ ಉಪಟಳವು ಹೆಚ್ಚಾಗಿದೆ. ಸ್ಮಾರ್ಟ್​ಫೋನ್​​​ಗಳಲ್ಲಿ ಅಳವಡಿಸಿಕೊಂಡಿರುವ ಕೆಲವು ಭದ್ರತೆ ಇಲ್ಲದಿರುವ ಆ್ಯಪ್​​ಗಳ ಮೂಲಕ ಹ್ಯಾಕರ್ಸ್​ಗಳು ಕೈಯಾಡಿಸುತ್ತಾರೆ. ಬಳಕೆದಾರರ ಖಾಸಗಿ ಮಾಹಿತಿ ಎಗರಿಸುತ್ತಾರೆ. ಬಳಕೆದಾರನಿಗೆ ತಿಳಿಯದೆ ಕೈಚಳ ತೋರಿಸುತ್ತಾರೆ. 

​ಫೋನ್​ಗಳಿಗೆ ವೈರಸ್ ಅಥವಾ ಹ್ಯಾಕ್​ ಆದರೆ ಪತ್ತೆ ಹಚ್ಚುವುದು ಹೇಗೆ?

ಸ್ಮಾರ್ಟ್​ಫೋನ್​ಗಳಿಗೆ ಆ್ಯಪ್​  ಇನ್​ಸ್ಟಾಲ್​ ಮಾಡುವ ಮೊದಲು ಅವುಗಳು ಅಧಿಕೃತ ಆ್ಯಪ್​​ಗಳೇ  ಎಂದು ಪರಿಶೀಲಿಸಿ. ಕೆಲವು ಆ್ಯಪ್​​ಗಳು ಮಾಲ್ವೇರ್​ಗಳನ್ನು ಹೊಂದಿರುತ್ತದೆ. ಹಾಗಾಗಿ ಡೌನ್ಲೋಡ್ ಮಾಡುವ ಮುನ್ನ ಎಚ್ಚರದಿಂದಿರಿ. ಇನ್ನು ಕೆಲಮೊಮ್ಮೆ ನಿಮಗೆ ಅರಿವಿಲ್ಲದೆಯೇ ನಿಮ್ಮ ಫೋನಿನೊಳಕ್ಕೆ ಅಪರಿಚಿತ ಆ್ಯಪ್​ಗಳು ಇನ್​ಸ್ಟಾಲ್​ ಆಗಿರಬಹುದು. ಕೆಲವೊಮ್ಮೆ ಸ್ಮಾರ್ಟ್​ಫೋನ್​ನಲ್ಲಿ ಇದ್ದಕ್ಕಿಂದಂತೆಯೇ ಜಾಹೀರಾತು ಕಾಣಿಸಿಕೊಳ್ಳುತ್ತದೆ.

ಯಾವುದೇ ಭಾಷೆಯ, ನಿಮಗೆ ಸಂಬಂಧವಿಲ್ಲದ ಜಾಹೀರಾತುಗಳ ಕಾಣಿಸಿಕೊಳ್ಳುತ್ತದೆ. ಇನ್​ಸ್ಟಾಲ್​ ಮಾಡಿರುವ ಆ್ಯಪ್ ಐಕಾನ್​ಗಳು ಮರೆಯಾಗಬಹುದು. ಅಥವಾ ಡೌನ್ಲೋಡ್​ ಮಾಡಿದ ಆ್ಯಪ್ ಹೋಮ್ ಸ್ಟ್ರೀನ್​ನಲ್ಲಿ ಕಾಣಿಸದೇ ಇರಬಹುದು. ಅಪರಿಚಿತ ಸಂಖ್ಯೆಯಿಂದ ಸಂದೇಶ, ಕರೆ ಬಂದಿರಬಹುದು. ಕೆಲವೊಮ್ಮೆ ಸಂದೇಶದ ಮೇಲೆ ಕ್ಲಿಕ್ ಮಾಡುವ ಮುನ್ನ ಎಚ್ಚರವಹಿಸಿ. ಇನ್ನು ಕೆಲವೊಮ್ಮೆ ಇಂಟರ್ನೆಟ್ ಕರೆ ಸ್ಬೀಕರಿಸುವ ಮುನ್ನ ಕೊಂಚ ಆಲೋಚಿಸಿ. ಸ್ಮಾರ್ಟರ್ಫೋನ್ ಬ್ಯಾಟರಿ ಇದ್ದಕ್ಕಿಂದ್ದಂತೆಯೇ ಖಾಲಿಯಾಗುವಿಕೆ.

ಚಾರ್ಜ್ ಪೂರ್ಣವಾಗಿದ್ದ ಸ್ಮಾರ್ಟ್​ಫೋನ್​ ಬ್ಯಾಟರಿ ಏಕಾ ಏಕಿ ಖಾಲಿಯಾಗಬಹುದು. ಇದು ಸ್ಮಾರ್ಟ್​ಫೋನ್ ​ ಬಳಕೆಯಾಗುತ್ತಿದೆ ಎಂಬ ಸೂಚನೆಯಾಗಿದೆ. ಸ್ಮಾರ್ಟ್​ಫೋನ್​ ಕಾರ್ಯಚರಣೆ ನಿಧಾನಗತಿಯಾಗುವ ಸಾಧ್ಯತೆಯೂ ಹೆಚ್ಚಿದೆ. ಕೆಲವೊಮ್ಮೆ ರ್ಯಾಮ್​ನಿಂದ ಕಾರ್ಯ ನಿಧಾನವಾಗಬಹುದು. ಕೆಲವೊಮ್ಮೆ ಬಳಸುತ್ತಿರುವಾಗಲೇ ಹ್ಯಾಂಗ್ ಆಗುವುದು ಕಂಡುಬಂದರೆ ಸ್ಟೊರೇಜ್, ಮೆಮೊರಿ, ಬ್ಯಾಟರಿ ಪರಿಶೀಲಿಸುವುದು ಒಳಿತು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :