ನಿಮ್ಮ Aadhaar Card ಬೇರೆಯವರ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಆಗಿದ್ಯಾ? ಈ ರೀತಿ ನಿಮಿಷಗಳಲ್ಲಿ ಪರಿಶೀಲಿಸಿ!

Updated on 06-Mar-2024
HIGHLIGHTS

ಭಾರತದಲ್ಲಿ ಸರ್ಕಾರದ ಯೋಜನೆಗಳ ಪ್ರಯೋಜನಗಳು ಆಧಾರ್ ಕಾರ್ಡ್ (Aadhaar Card) ಇಲ್ಲದೆ ಲಭ್ಯವಿರುವುದಿಲ್ಲ.

ನಿಮಗೊಂದು ಹೊಸ ಮೊಬೈಲ್ ಸಿಮ್ ಕಾರ್ಡ್ (SIM Card) ಪಡೆಯಲು ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯವಾದ ದಾಖಲೆ

ನಿಮ್ಮ ಆಧಾರ್ ಕಾರ್ಡ್‌ಗೆ ಎಷ್ಟು ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಲಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು.

ನೀವೊಬ್ಬ ಭಾರತಿಯಾರಾಗಿದ್ದರೆ ಆಧಾರ್ ಕಾರ್ಡ್ ನಮ್ಮ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರದ ಯೋಜನೆಗಳ ಪ್ರಯೋಜನಗಳು ಆಧಾರ್ ಕಾರ್ಡ್ (Aadhaar Card) ಇಲ್ಲದೆ ಲಭ್ಯವಿರುವುದಿಲ್ಲ. ಭಾರತದಲ್ಲಿ ನಿಮಗೆ ಯಾವುದೇ ಬ್ಯಾಂಕ್ ಮೂಲಕ ಹೊಸ ಖಾತೆ ತೆರೆಯಲು ಅಥವಾ ಬ್ಯಾಂಕ್ ಸಾಲ ಪಡೆಯಲು ಮತ್ತು ನಿಮಗೊಂದು ಹೊಸ ಮೊಬೈಲ್ ಸಿಮ್ ಕಾರ್ಡ್ (SIM Card) ಪಡೆಯಲು ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಅದೇ ಸಮಯದಲ್ಲಿ PF ಅಥವಾ ಇತರ ವಿಷಯಗಳಿಂದ ಹಣವನ್ನು ಹಿಂಪಡೆಯುವಂತಹ ಅನೇಕ ವಿಷಯಗಳಲ್ಲಿ ಆಧಾರ್ ಕಾರ್ಡ್‌ಗೆ (Aadhaar Card) ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಸ್ವೀಕರಿಸಿದ OTP ಅಗತ್ಯವಿರುತ್ತದೆ.

Also Read: 6000mAh ಬ್ಯಾಟರಿಯ Samsung Galaxy F15 5G ಖರೀದಿಗೂ ಮುಂಚೆ ಟಾಪ್ 5 ಫೀಚರ್‌ಗಳನೊಮ್ಮೆ ಪರಿಶೀಲಿಸಿ!

ನಿಮ್ಮ ಆಧಾರ್ ಕಾರ್ಡ್ (Aadhaar Card) ಬೇರೆ ಸಂಖ್ಯೆಯೊಂದಿಗೆ ಲಿಂಕ್ ಆಗಿದ್ಯಾ?

ಅನೇಕ ಬಾರಿ ಮೊಬೈಲ್ ಸಂಖ್ಯೆಗೆ ಯಾವುದೇ OTP ಬರುವುದಿಲ್ಲ. ಹಾಗಿದ್ದಲ್ಲಿ ನಿಮ್ಮ ಆಧಾರ್ ಕಾರ್ಡ್‌ಗೆ ಎಷ್ಟು ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಲಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ನಿಮ್ಮ ಆಧಾರ್ ಕಾರ್ಡ್ (Aadhaar Card) ಬೇರೆ ಯಾವುದಾದರೂ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿದೆಯೇ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕು. ನಿಮ್ಮ ಆಧಾರ್ ಕಾರ್ಡ್‌ಗೆ ಎಷ್ಟು ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಲಾಗಿದೆ ಎಂಬುದನ್ನು ಸಹ ನೀವು ತಿಳಿದುಕೊಳ್ಳಲು ಬಯಸಿದರೆ ಇದಕ್ಕಾಗಿ ನೀವು ಮುಂದೆ ಸಾಗಬಹುದು.

ಆಧಾರ್ ಕಾರ್ಡ್ ಎಷ್ಟು ನಂಬರ್‌ಗಳೊಂದಿಗೆ ಲಿಂಕ್ ಆಗಿದೆ ತಿಳಿಯೋದು ಹೇಗೆ?

-ಮೊದಲು ಅಧಿಕೃತ ಟೆಲಿಕಾಂ ಪೋರ್ಟಲ್ https://tafcop.sancharsaathi.gov.in/telecomUser/ ಲಿಂಕ್ ಒಳಗೆ ಹೋಗಬೇಕಾಗುತ್ತದೆ.

-ಇದರ ನಂತರ ನೀವು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸಬೇಕು.

-ನಂತರ ಕೆಳಗೆ ನೀಡಿರುವ ಕ್ಯಾಪ್ಚಾ (Captcha) ಕೋಡ್ ನೀಡಿದ ವ್ಯಾಲಿಡಿಟ್ ಮಾಡಬೇಕು.

-ನಿಮ್ಮ ಆಧಾರ್ ಕಾರ್ಡ್‌ಗೆ (Aadhaar Card) ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಇದನ್ನು ಇಲ್ಲಿ ಭಾರ್ತಿ ಲಾಗಿನ್ ಮಾಡಬೇಕಾಗುತ್ತದೆ.

-ಈಗ ಇಲ್ಲಿ ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಕಾಣಬಹುದು.

-ಪ್ರತಿ ಸಿಮ್ ಕಾರ್ಡ್ ಕನೆಕ್ಷನ್ ಪಡೆಯುವಾಗ ಆಧಾರ್ ಕಡ್ಡಾಯವಾಗಿರುವ ಕಾರಣ ನಿಮ್ಮ Aadhaar ಬೇರೆಯವರ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಆಗಿದ್ಯಾ ಇಲ್ವಾ ಎನ್ನುವುದನ್ನು ಇಲ್ಲಿ ಕಾಣಬಹುದು.

-ಈ ಮೊಬೈಲ್ ಸಂಖ್ಯೆಗಳಲ್ಲಿ ಯಾವುದಾದರೂ ನಿಮ್ಮದಲ್ಲದಿದ್ದರೆ ಅವುಗಳನ್ನು ತೆಗೆದುಹಾಕಲು ನೀವು ಮೊಬೈಲ್ ಸಂಖ್ಯೆಗಳನ್ನು ವರದಿ ಮಾಡಬಹುದು. ವರದಿ ಮಾಡಿದ ಸ್ವಲ್ಪ ಸಮಯದ ನಂತರ ಈ ಸಂಖ್ಯೆಗಳನ್ನು ಡಿಲೀಟ್ ಮಾಡಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :