ನಿಮ್ಮ ಆಧಾರ್‌ನೊಂದಿಗೆ ಎಷ್ಟು ಮೊಬೈಲ್ ಸಂಖ್ಯೆಗಳನ್ನು ಪಡೆಯಲಾಗಿದೆ ಎಂದು ಪರಿಶೀಲಿಸುವುದು ಹೇಗೆ?

Updated on 10-Jul-2022
HIGHLIGHTS

ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಎಷ್ಟು ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ?

ನಿಮ್ಮ ಆಧಾರ್ ಸಂಖ್ಯೆಯಲ್ಲಿ ಎಷ್ಟು ಸಂಖ್ಯೆಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು.

ಹೊಸ ಮೊಬೈಲ್ ಸಂಖ್ಯೆಯನ್ನು ಪಡೆಯಲು ನಾವು ಆಧಾರ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಬೇಕು ಎಂದು ನಮಗೆಲ್ಲರಿಗೂ ತಿಳಿದಿದೆ. ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಎಷ್ಟು ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ? ಈಗ ದೂರಸಂಪರ್ಕ ಇಲಾಖೆ (DoT) ಹೊಸ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ ಅದರ ಮೂಲಕ ನಿಮ್ಮ ಆಧಾರ್ ಸಂಖ್ಯೆಯಲ್ಲಿ ಎಷ್ಟು ಸಂಖ್ಯೆಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. 

ಇಲಾಖೆಯ ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ & ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP) ಪೋರ್ಟಲ್ ಮೂಲಕ ನೀವು ನಿಮ್ಮ ಎಲ್ಲವನ್ನೂ ಪರಿಶೀಲಿಸಬಹುದು. ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಗಳನ್ನು ನೋಡಬಹುದು. ನಾವು ನಿಮಗೆ ಸುಲಭವಾದ ಮಾರ್ಗವನ್ನು ಹೇಳುತ್ತಿದ್ದೇವೆ ಅದರ ಮೂಲಕ ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ನೀವು ನೋಡಬಹುದು.

ನಿಮ್ಮ ಆಧಾರ್‌ನೊಂದಿಗೆ ಎಷ್ಟು ಮೊಬೈಲ್ ಸಂಖ್ಯೆಗಳನ್ನು ಪಡೆಯಲಾಗಿದೆ?

ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP) ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನೀವು ಪರಿಶೀಲಿಸಬಹುದು. ವೆಬ್‌ಸೈಟ್ ಪ್ರಕಾರ ಪ್ರಸ್ತುತ ಈ ಸೌಲಭ್ಯವು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ವಾಸಿಸುವ ಜನರಿಗೆ ಮಾತ್ರ. ಅಂದರೆ ನೀವು ಈ ಸ್ಥಳಗಳಲ್ಲಿ ವಾಸಿಸುತ್ತಿದ್ದರೆ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನೋಂದಾಯಿಸಲಾದ ಎಲ್ಲಾ ಸಿಮ್ ಕಾರ್ಡ್‌ಗಳನ್ನು ನೀವು ಕಂಡುಹಿಡಿಯಬಹುದು.

ಅಗತ್ಯವಿಲ್ಲದ ಸಂಖ್ಯೆಯನ್ನು ತೆಗೆದುಹಾಕುವುದು ಹೇಗೆ?

ಮೊದಲಿಗೆ tafcop.dgtelecom.gov.in ವೆಬ್‌ಸೈಟ್‌ಗೆ ಹೋಗಿ.

ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ವಿನಂತಿಯನ್ನು ಕ್ಲಿಕ್ ಮಾಡಿ. ಅದರ ನಂತರ OTP ನಮೂದಿಸಿ.

ಲಾಗಿನ್ ಆದ ನಂತರ ನೀವು ಸಂಖ್ಯೆಗಳ ಪಟ್ಟಿಯನ್ನು ನೋಡುತ್ತೀರಿ. ಈ ಪಟ್ಟಿಯಲ್ಲಿ ಕಂಡುಬರುವ ಪ್ರತಿಯೊಂದು ಸಂಖ್ಯೆಯ ಕೆಳಗೆ ನೀವು 

ಮೂರು ಆಯ್ಕೆಗಳನ್ನು ನೋಡುತ್ತೀರಿ. ಇದು ನನ್ನ ಸಂಖ್ಯೆ ಅಲ್ಲ, ಅಗತ್ಯವಿಲ್ಲ ಅಥವಾ ಅಗತ್ಯವಿದೆ ಎಂದು ಗುರುತಿಸಬವುದು.

ಪಟ್ಟಿಯಲ್ಲಿನ ಮೊಬೈಲ್ ಸಂಖ್ಯೆ ನಿಮ್ಮದಲ್ಲದಿದ್ದರೆ ನಿಮ್ಮ ನೊಂದಾಯಿತ ಹೆಸರಿನೊಂದಿಗೆ ಇದು ನನ್ನ ಸಂಖ್ಯೆ ಅಲ್ಲ ಎಂಬ ಆಯ್ಕೆಯನ್ನು ಆರಿಸಬವುದು.

ನೀವು ಸಂಖ್ಯೆಯನ್ನು ಆಫ್ ಮಾಡಿದ್ದರೆ ಇದರಲ್ಲಿ ಬೇಡದ ಸಂಖ್ಯೆಯನ್ನು 'ಅಗತ್ಯವಿಲ್ಲ ಎಂಬ ಆಯ್ಕೆಯನ್ನು ಆರಿಸಿ.

ನಂತರ ಪಟ್ಟಿಯಿಂದ ಸಂಖ್ಯೆಯನ್ನು ತೆಗೆದುಹಾಕಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ ಅಷ್ಟೇ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :