Aadhaar Update: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೊಸ ಸೇವೆಯನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ಇಮೇಲ್ ಐಡಿ ಅಥವಾ ಫೋನ್ ನಂಬರ್ ಆಧಾರ್‌ಗೆ ಲಿಂಕ್ ಆಗಿದೆ ಎನ್ನುವುದನ್ನು ಪರಿಶೀಲಿಸಲು ಸಹಾಯ ಮಾಡಿಕೊಡುತ್ತದೆ. ಇದಕ್ಕಾಗಿ ಹೆಚ್ಚು ಸಮಯ ಬೇಕಾಗಿಲ್ಲ ಮತ್ತು ಇದನ್ನು ಸ್ಮಾರ್ಟ್‌ಫೋನ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಅನೇಕ ಬಾರಿ ಆಧಾರ್‌ಗೆ ಯಾವ ಮೊಬೈಲ್ ನಂಬರ್ ಕೊಟ್ಟಿದ್ದಾರೆ ಎನ್ನುವುದರ ಬಗ್ಗೆ ಜನರಿಗೆ ತಿಳಿದಿರುವುದಿಲ್ಲ ಎಂದು UIDAI ಕಂಡುಹಿಡಿದಿದೆ.
ಅಷ್ಟೇಯಲ್ಲದೆ PIB ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ ಆಧಾರ್ ಸಂಬಂಧಿತ ಸೇವೆಗಳನ್ನು ಬಳಸುವಾಗ ತಮ್ಮ ಒನ್ ಟೈಮ್ ಪಾಸ್‌ವರ್ಡ್ (OTP) ಯಾವ ನಂಬರ್‌ಗೆ ಬರುತ್ತದೆ ಎನ್ನುವುದು ನಾಗರಿಕರಿಗೆ ಕೆಲವೊಂದು ಬಾರಿ ತಿಳಿದಿರುವುದಿಲ್ಲ. ಆದರೆ ಈಗ OTP ಯಾವ ನಂಬರ್‌ಗೆ ಬಂದಿದೆ ಎಂದು ನಿರ್ಧರಿಸುವುದು ತುಂಬಾ ಸುಲಭವಾಗಿದೆ ಎಂದು ಹೇಳಲಾಗಿದೆ.
1. ಮೊದಲು mAadhaar ಅಪ್ಲಿಕೇಶನ್ ಅಥವಾ UIDAI ನ ಅಧಿಕೃತ ವೆಬ್‌ಸೈಟ್ myaadhaar.uidai.gov.in ಗೆ ಭೇಟಿ ನೀಡಿ
2. ಇಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿದ ನಂತರ ನೀವು Send OTP ಕ್ಲಿಕ್ ಮಾಡಬೇಕು.
3. ಇದರ ನಂತರ ತಮ್ಮ ಇಮೇಲ್ ಐಡಿ ಅಥವಾ ಫೋನ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬ ದೃಢೀಕರಣವನ್ನು ಪಡೆಯುತ್ತಾರೆ.
4. ಯಾವುದೇ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದರೆ ಅದರ ಮಾಹಿತಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.
5. ಬಳಕೆದಾರರು ತಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಲು ಬಯಸಿದಲ್ಲಿ ಆ ಆಯ್ಕೆಯನ್ನು ಹೊಂದಿರುತ್ತಾರೆ. ಈ ಪರಿಶೀಲನೆಯ ಸಮಯದಲ್ಲಿ ಆಧಾರ್‌ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯ ಕೊನೆಯ 3 ಸಂಖ್ಯೆಗಳನ್ನು ತೋರಿಸಲಾಗುತ್ತದೆ.
ನೀವು ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಪರಿಶೀಲನೆಯು ಈಗ ಹೊಸ ಆಯ್ಕೆಯಾಗಿದೆ. mAadhaar ಅಪ್ಲಿಕೇಶನ್ ಮತ್ತು UIDAI ನ ಅಧಿಕೃತ ವೆಬ್‌ಸೈಟ್ ಮೂಲಕ ನಾಗರಿಕರು ಇದರಿಂದ ಪ್ರಯೋಜನವನ್ನ ಪಡೆಯಬಹುದಾಗಿದೆ. ನೀವು ಅದನ್ನು ಮರೆತುಹೋದ ಸಂದರ್ಭದಲ್ಲಿ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗುವ ಮೂಲಕ ನಿವಾಸಿಗಳು ತಮ್ಮ ಹೊಸ ಇಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಅನ್ನು ತಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಿಸಬಹುದು.