ಇಂಟರ್ನೆಟ್ ವೇಗವನ್ನು ಪರಿಶೀಲಿಸಲು ಬಳಕೆದಾರರು ಸಾಮಾನ್ಯವಾಗಿ ಡೇಟಾ ಸ್ಪೀಡ್, ಡೇಟಾ ಬೋಸ್ಟರ್ ನಂತಹ ವೇಗವಾದ ಅಪ್ಲಿಕೇಶನ್ಗಳಿಗೆ ಅಥವಾ ವೆಬ್ಸೈಟ್ಗಳನ್ನು ಇಂದಿನ ದಿನಗಳಲ್ಲಿ ಹುಡುಕುತ್ತಿದ್ದರೆ. ಇದಕ್ಕಾಗಿ ನಿಮ್ಮ್ ಫೋನಲ್ಲಿ ಹಲವಾರು ಅಪ್ಲಿಕೇಶನ್ ಸೇವೆಗಳ ಪೈಕಿಯಲ್ಲಿ ಈ ವೇಗವಾದವುಗಳೆಂದರೆ speedtest, Fast.com ಮುಂತಾದವು ತಮ್ಮ ಸಂಪರ್ಕ ವೇಗವನ್ನು ಪರೀಕ್ಷಿಸಲು ಬಳಕೆದಾರರನ್ನು ಸಕ್ರಿಯಗೊಳಿಸುತ್ತಿವೆ.
ಇದೇನೆಲ್ಲಾ ಗಮನದಲ್ಲಿಟ್ಟುಕೊಂಡು ಟೆಲಿಕಾಂ ಅಥಾರಿಟಿ ಆಫ್ ಇಂಡಿಯಾ TRAI ಕೂಡ ಮೈಸ್ಪೀಡ್ ಎಂಬ ಹೆಸರಿನ ಅಪ್ಲಿಕೇಶನ್ ಅನ್ನು ನಿಖರವಾಗಿ ನಿಮ್ಮ ಇಂಟರ್ನೆಟ್ ಸ್ಪೀಡ್ ಚೆಕ್ ಮಾಡಲು ಹೊರ ತಂದಿದೆ. ಹೌದ ಇದು ಸಾಧ್ಯನಾ ಅಂತೀರಾ…ಹೌದು ಇದರ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ. ಹಂತ ಹಂತವಾಗಿ ನಿಮ್ಮ ಇಂಟರ್ನೆಟ್ ಸ್ಪೀಡ್ ಚೆಕ್ ಮಾಡಿಕೊಳ್ಳಿ. ನಂತರ ಈ ಮಾಹಿತಿಯ ಬಗ್ಗೆ ಕಾಮೆಂಟ್ ಮಾಡಿ ತಿಳಿಯದವರೊಂದಿಗೆ ಶೇರ್ ಮಾಡಿಕೊಳ್ಳಿ.
1. ಮೊದಲಿಗೆ MySpeed ಅನ್ನುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ (iOS & Android ಲಭ್ಯ).
2.ಒಮ್ಮೆ ಇದು ಡೌನ್ಲೋಡ್ ಆಗಿ ಇನ್ಸ್ಟಾಲ್ ಎಡಿಎ ಮೇಲೆ ಅದರ ಮೇಲೆ ಕ್ಲಿಕ್ ಮಾಡಿ ತೆರೆಯಿರಿ.
3. ನಂತರ ಲೊಕೇಶನ್, ಮ್ಯಾನೇಜ್ ಫೋನ್ ಕಾಲ್ಸ್ ಮುಂತಾದ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಅನುಮತಿಸಿ.
4. ಈಗ ಇಂಟರ್ನೆಟ್ ಸ್ಪೀಡ್ ಪರೀಕ್ಷಿಸಲು ಕೆಳಗಿನ ಎಡ ಭಾಗದಲ್ಲಿರುವ ಬಟನ್ ಮೇಲೆ ಟ್ಯಾಪ್ ಮಾಡಿರಿ.
5. ನಂತರ ಇಲ್ಲಿ ಸ್ಪೀಡ್ ಟೆಸ್ಟ್ ಪ್ರಕ್ರಿಯೆಯನ್ನು ಪ್ರಾರಂಭಿಸಲು 'Begin Test' ಬಟನ್ ಮೇಲೆ ಕ್ಲಿಕ್ ಮಾಡಿ.
6. ಇದರ ನಂತರ ಈಗ ಪ್ರೋಸೆಸ್ ಪೂರ್ಣಗೊಳ್ಳುವವರೆಗೆ ಕಾಯಿರಿ.
7. ಈಗ ನಿಮ್ಮ ರಿಸಲ್ಟ್ಗಳ ವಿಭಾಗಕ್ಕೆ ಹೋಗಲು ಮೂರು ಬಾರ್ಗಳ ಮೇಲೆ ಟ್ಯಾಪ್ ಮಾಡಿ.
8. ಇಲ್ಲಿ ಬಳಕೆದಾರರು ಎಲ್ಲ ಸ್ಪೀಡ್ ಟೆಸ್ಟ್ಗಳ ರಿಸಲ್ಟ್ ನೋಡಬವುದು.
9. ಇದರ ನಂತರ ಇಲ್ಲಿ ಯಾವುದೇ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅದರ ಪೂರ್ತಿ ಮಾಹಿತಿಯನ್ನು ಪಡೆಯಬವುದು.
ಅಪ್ಲಿಕೇಶನ್ ವೇಗದ ಅನ್ನು TRAI ಮಾತ್ರ ಕಳುಹಿಸುತ್ತದೆ. ಆದರೆ ಇದು ಬಳಕೆದಾರರ ಕವರೇಜ್, ನೆಟ್ವರ್ಕ್ ಮಾಹಿತಿ ಮತ್ತು ಫೋನಿನ ಲೊಕೇಶನನ್ನು ಸಹ ತೋರುತ್ತದೆ. ಅಲ್ಲದೆ ಇದರ ಮೂಲಕ ಬಳಕೆದಾರರ ಯಾವುದೇ ಮಾಹಿತಿಯನ್ನು ಅದು ಶೇರ್ / ಸಂಗ್ರಹಿಸುವುದಿಲ್ಲವೆಂದು ಈ ಅಪ್ಲಿಕೇಶನ್ ಹೇಳುತ್ತದೆ. ಇಂಟರ್ನೆಟ್ ಬಳಕೆಯ ಸ್ಪೀಡ್ ಬಳಕೆದಾರರನ್ನು ಪರೀಕ್ಷಿಸಿದ ನಂತರ ಒಂದು ವೇಳೆ ಇಜಕ್ಕೂ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ತಮ್ಮ ಸೇವಾ ಪೂರೈಕೆದಾರರೊಂದಿಗೆ ಇದರ ಮೇರೆಗೆ ದೂರು ದಾಖಲಿಸಬಹುದು.