ಈಗ ಆಧಾರ್ ಕಾರ್ಡ್ ಪ್ರತಿಯೊಬ್ಬರ ಗುರುತಾಗಿದೆ. ಆದ್ದರಿಂದ ಪ್ರತಿ ಕಡೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಮಾಹಿತಿ ಹೆಚ್ಚಾಗಿ ಬಳಸುತ್ತಿದ್ದಿವೆ. ಆದ್ದರಿಂದ ಕೇವರು ನಿಮ್ಮ ಈ ಮಾಹಿತಿಯನ್ನು ದುರ್ಬಳಕೆ ಮಾಡುವ ಅವಕಾಶವು ಹೆಚ್ಚಾಗುತ್ತದೆ. ಇದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಎಲ್ಲೇಲ್ಲಿ ಯಾವ ಯಾವ ಕಾರಣಕ್ಕಾಗಿ ಬಳಸಿದ್ದೀರಾ ಅನ್ನುವುದನ್ನು ಕುಂತಲ್ಲೇ ಅದರ ಸಂಪೂರ್ಣವಾದ ಹಿಸ್ಟರಿಯನ್ನು ಪಡೆಯಬವುದು. ಒಂದು ವೇಳೆ ನಿಮಗೆ ತಿಳಿಯದ ಕಡೆ ನಿಮ್ಮ ಆಧಾರ್ ಕಾರ್ಡ್ ಮಾಹಿತಿ ಇದ್ದರೆ ಅದರ ಮೇಲೆ ನೀವು ಬೇಕಾದರೆ ಪೊಲೀಸರಿಗೆ ದೂರು ನೀಡಬವುದು. ಈ ಮಾಹಿತಿಯನ್ನು ಪಡೆಯುವುದೆಗೆಂದು ಇಲ್ಲಿ ತಿಳಿಯೋಣ.
1. ಮೊದಲಿಗೆ ನೀವು https://resident.uidai.gov.in/notification-aadhaar ಲಿಕ್ ಮೇಲೆ ಕ್ಲಿಕ್ ಮಾಡಿ.
2. ಈಗ ಇಲ್ಲಿ ನಿಮ್ಮ 12 ಅಂಕೆಯ ಆಧಾರ್ ನಂಬರನ್ನು ಚೌಕದೊಳಗೆ ನಮೂದಿಸಿರಿ.
3.ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯ ನಂತರ ಸೆಕ್ಯೂರಿಟಿ ಕೋಡನ್ನು ಸಹ ನಮೂದಿಸಿ.
4. ಇವೇರಡು ಸರಿಯಾಗಿ ನಮೂದಿಸಿದ ನಂತರ ಈಗ ಜೆನರೇಟ್ OTP ಮೇಲೆ ಕ್ಲಿಕ್ ಮಾಡಿರಿ.
5. ಇಲ್ಲಿ ಮೊದಲಿಗೆ ALL ಆಯ್ಕೆ ಮಾಡಿ, ನಂತರ ಯಾವಾಗಿಂದ ನೀವು ಚೆಕ್ ಮಾಡಬೇಕೋ ಆ ದಿನಾಂಕ ಆಯ್ಕೆ ಮಾಡಿ.
6. ಇಲ್ಲಿ ನೀವು ಗರಿಷ್ಠ ಕಳೆದ 6 ತಿಂಗಳಲ್ಲಿ ಬಳಸಿದ ಮಾಹಿತಿ ಮಾತ್ರ ಪಡೆಬವುದು ಆದ್ದರಿಂದ ದಿನಾಂಕ 6 ತಿಂಗಳೊಳಗೆ ಆಯ್ಕೆ ಮಾಡಿ.
7. ಅದೇ ರೀತಿಯಲ್ಲಿ ಇಲ್ಲಿ ಗರಿಷ್ಠ 50 ಮಾಹಿತಿಯನ್ನು ಮಾತ್ರ ಪಡೆಬವುದು ಆದ್ದರಿಂದ 1 ರಿಂದ 50 ಅಂಕೆಗಳೊಳಗೆ ಆಯ್ಕೆ ಮಾಡಿ.
8. ಈಗ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರಿಗೆ ಬಂದಿರುವ OTP ಯನ್ನು ಇಲ್ಲಿ ನಮೂದಿಸಿರಿ.
9. ನಂತರ ಕೆಳಗೆ ನೀಡಿರುವ Submit ಮೇಲೆ ಕ್ಲಿಕ್ ಮಾಡಿರಿ ಕೆಲವೇ ಕ್ಷಣಗಳಲ್ಲಿ ನಿಮ್ಮೇಲ್ಲ ಮಾಹಿತಿ ಬರುತ್ತದೆ.
10. ಈಗ ಈ ಮಾಹಿತಿಯಲ್ಲಿ ನಿಮಗೆ ತಿಳಿಯದ ಕಡೆ ನಿಮ್ಮ ಆಧಾರ್ ಮಾಹಿತಿ ಇದ್ದರೆ ನೀವು ಪೊಲೀಸರಿಗೆ ದೂರು ನೀಡಬವುದು.
ಈಗ ನೀವು ಬೇಕಾದರೆ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಲಾಗಿರುವ ಆಧಾರ್ ಮಾಹಿತಿಯನ್ನು ಅಳಿಸಿ ಹಾಕಲು ಕೈ ಬರಹದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇನ್ನು ಟೆಲಿಕಾಂ ಸಂಸ್ಥೆಗಳಿಗೂ ಇದೇ ರೀತಿ ಲಿಖಿತ ರೂಪದಲ್ಲಿ ಮನವಿ ಮಾಡಿಕೊಳ್ಳಬೇಕಾಗುತ್ತದೆ. ನೀವು ಅರ್ಜಿ ಸಲ್ಲಿಸಿದ ನಂತರವಷ್ಟೇ ನಿಮ್ಮ ಆಧಾರ್ ಮಾಹಿತಿ ಬ್ಯಾಂಕಿನಿಂದ ಅಳಿಸಲಾಗುತ್ತದೆ.