Aadhaar Photo Change: ಜನಸಂಖ್ಯಾ ಮಾಹಿತಿ ಒಳಗೊಂಡಿರುತ್ತದೆ. ಹೆಸರು, ವಿಳಾಸ, ಹುಟ್ಟಿದ ದಿನಾಂಕ/ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸದಂತಹ ಜನಸಂಖ್ಯಾ ಮಾಹಿತಿಯನ್ನು ಆನ್‌ಲೈನ್‌ನಲ್ಲೆ ಅಪ್ಡೇಟ್ ಮಾಡಬಹುದು. ಆದರೆ ರೆಟಿನಲ್ ಸ್ಕ್ಯಾನ್, ಫಿಂಗರ್‌ಪ್ರಿಂಟ್ ಮತ್ತು ಫೋಟೋದಂತಹ ಬಯೋಮೆಟ್ರಿಕ್ ಮಾಹಿತಿಗಳನ್ನು ಆಧಾರ್ ನೋಂದಣಿ ಕೇಂದ್ರಗಳಲ್ಲಿ ಮಾತ್ರ ಅಪ್ಡೇಟ್ ಮಾಡಲಾಗುವುದು.
ಜನರು ತಮ್ಮ ಆಧಾರ್ ಕಾರ್ಡ್ ಫೋಟೋ ಬಗ್ಗೆ ಅನೇಕ ಬಾರಿ ತೀವ್ರ ಆಕ್ಷೇಪಣೆಗಳನ್ನು ಹೊಂದಿರುತ್ತಾರೆ. ಬಾಲ್ಯದ ಫೋಟೋ ಆಧಾರವು ಬೆಳೆಯುವವರೆಗೂ ಮುಂದುವರಿಯುತ್ತದೆ. ನಂತರ ನೀವು ಆಧಾರ್ ಕಾರ್ಡ್ ನಲ್ಲಿರೊ ಫೋಟೋ ಬದಲಾಯಿಸಬೇಕಾಗುತ್ತದೆ. ಆಧಾರ್ ಕಾರ್ಡ್ ನ ಪ್ರಾರಂಭದ ಹಂತದಲ್ಲಿ ತೆಗೆದ ಫೋಟೋ ನಿಮಗೆ ಇಷ್ಟವಾಗದಿದ್ದರೆ ಅದನ್ನು ಬದಲಾಯಿಸುವ ವಿಧಾನವಿದೆ. ಅದಕ್ಕೆ ಹಂತ ಹಂತವಾಗಿ ಮಾರ್ಗದರ್ಶಿ ಇಲ್ಲಿದೆ ನೋಡಿ.
1. ಮೊದಲು ಆಧಾರ್ ಅಪ್‌ಡೇಟ್ ಫಾರ್ಮ್ ಅನ್ನು ಭರ್ತಿ ಮಾಡಿ. ಈ ಫಾರ್ಮ್ ಅನ್ನು ಯಾವುದೇ ಆಧಾರ್ ನೋಂದಣಿ ಕೇಂದ್ರದಲ್ಲಿ ಸುಲಭವಾಗಿ ಪಡೆಯಬಹುದು ಅಥವಾ UIDAI ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.
2. ಫಾರ್ಮ್ನೊಂದಿಗೆ ಕೇಂದ್ರಕ್ಕೆ ಭೇಟಿ ನೀಡಿ. ಫಿಂಗರ್‌ಪ್ರಿಂಟ್ ಮತ್ತು ಐರಿಸ್ ಕ್ಯಾಪ್ಚರ್‌ನಂತಹ ಬಯೋಮೆಟ್ರಿಕ್ ಮಾಹಿತಿಯೊಂದಿಗೆ ಫಾರ್ಮ್ ಅನ್ನು ಸಲ್ಲಿಸಿ.
3. ನಿಮ್ಮ ಲೈವ್ ಫೋಟೋವನ್ನು ತೆಗೆದುಕೊಳ್ಳಲಾಗುತ್ತದೆ. ಈ ಅಪ್‌ಡೇಟ್‌ಗೆ 100 ರೂ ಶುಲ್ಕ ಪಾವತಿಸಬೇಕಾಗುತ್ತದೆ. ನಂತರ ಅಪ್ಡೇಟ್ ವಿನಂತಿಯ ರಸೀದಿಯನ್ನು ನೀಡಲಾಗುತ್ತದೆ. ಇದಕ್ಕೆ 90 ದಿನಗಳವರೆಗೆ ಬೇಕಾಗಬಹುದು.
4. ಆಧಾರ್ ಡೇಟಾವನ್ನು ಅಪ್ಡೇಟ್ ಮಾಡಿದ ನಂತರ ನೀವು UIDAI ವೆಬ್‌ಸೈಟ್‌ನಿಂದ ಇ-ಆಧಾರ್ ಅಥವಾ ಆಧಾರ್ ಕಾರ್ಡ್‌ನ ಡಿಜಿಟಲ್ ಕಾಪಿಯನ್ನು ಡೌನ್‌ಲೋಡ್ ಮಾಡಬಹುದು.