ಆಧಾರ್ ಎನ್ನುವುದು UIDAI ಮೂಲಕ ನೀಡುವ 12 ಅಂಕೆಯ ಯೂನಿಕ್ ಐಡೆಂಟಿಫಿಕೇಷನ್ ನಂಬರ್ ಆಗಿದೆ. ಇದು ವಿಶ್ವದ ಅತಿ ದೊಡ್ಡ ಬಯೋಮೆಟ್ರಿಕ್ ಐಡಿ ವ್ಯವಸ್ಥೆಗಳಲ್ಲಿ ಒಂದಾಗಿದೆ. ಏಕೆಂದರೆ ಇದರಲ್ಲಿ ವ್ಯಕ್ತಿಯ ಬಯೋಮೆಟ್ರಿಕ್ ಡೇಟಾವನ್ನು ಮುಖ್ಯವಾಗಿ ಫಿಂಗರ್ಪ್ರಿಂಟ್ ಮತ್ತು ಕಣ್ಣಿನ ಸ್ಕ್ಯಾನ್‌ಗಳಂತಹ ವಿಶೇಷ ಮಾಹಿತಿಗಳನ್ನು ಒಳಗೊಂಡಿರುವ ವಿಶಿಷ್ಟ ಗುರುತಿನ ಕಾರ್ಡ್ ಆಗಿದೆ. ಇದರಲ್ಲಿ ನಿಮ್ಮ ಯಾವುದೇ ಮಾಹಿತಿಯನ್ನು ಸರಿಯಾದ ದಾಖಲೆಗಳನ್ನು ನೀಡುವ ಮೂಲಕ ಬದಲಾಯಿಸಬಹುದು. ಆದರೆ ನಿಮ್ಮ ಫೋಟೋ ಅಥವಾ ಭಾವಚಿತ್ರವನ್ನು ಬದಲಾಯಿಸಬೇಕಿದ್ದರೆ ಒಮ್ಮೆ ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬೇಕಾಗುತ್ತದೆ. ಏಕೆಂದರೆ ಇದಕ್ಕಾಗಿ ಯಾವುದೇ ದಾಖಲೆಗಳ ಅಗತ್ಯವಿರುವುದಿಲ್ಲ.
ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ಜನ್ಮ ದಿನಾಂಕ ಮತ್ತು ವಿಳಾಸದಂತಹ ಮಾಹಿತಿಯನ್ನು ಸಹ ಒಳಗೊಂಡಿರುತ್ತದೆ. ಈ ಆಧಾರ್ ಕಾರ್ಡ್ ಅನ್ನು ನೀವು ಬಹು ಕಾರ್ಯಗಳಿಗೆ ನಿಮ್ಮ ಗುರುತು ಮತ್ತು ವಿಳಾಸದ ಪುರಾವೆಯಾಗಿ ಸಹ ಬಳಸಬಹುದು. ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವಾಗ ಹೆಚ್ಚರದಿರಬೇಕು ಏಕೆಂದರೆ ಇದು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲ್ಪಟ್ಟಿರುತ್ತದೆ. ಇದರೊಂದಿಗೆ ಬಯೋಮೆಟ್ರಿಕ್‌ಗಳನ್ನು ಅಂದ್ರೆ ಫಿಂಗರ್ಪ್ರಿಂಟ್ ಮತ್ತು ಕಣ್ಣಿನ ಸ್ಕ್ಯಾನ್‌ಗಗಳನ್ನು ಸಹ ಅಪ್ಡೇಟ್ ಮಾಡಬಹುದು.
➥ಮೊದಲಿಗೆ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಲು ನೀವು ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು.
➥ಇದರ ನಂತರ https://appointments.uidai.gov.in/bookappointment.aspx ಭೇಟಿ ನೀಡಿ ನಿಮ್ಮ ಹತ್ತಿರದ ಆಧಾರ್ ದಾಖಲಾತಿ ಕೇಂದ್ರವನ್ನು ಜಿಲ್ಲೆಯೊಂದಿಗೆ ಆನ್‌ಲೈನ್‌ನಲ್ಲಿ ಆಯ್ಕೆ ಮಾಡಿಕೊಳ್ಳಿ.
➥ನಂತರ ಸಂಬಂಧಿತ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅದನ್ನು ಆಧಾರ್ ನೋಂದಣಿ ಕೇಂದ್ರದಲ್ಲಿ ಸಲ್ಲಿಸಿ
➥ಕೇಂದ್ರದಲ್ಲಿರುವ ನಿರ್ವಾಹಕರು ನಿಮ್ಮ ಕೋರಿಕೆಯಂತೆ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುತ್ತಾರೆ
➥ನೀವು ಫೋಟೋವನ್ನು ನೋಂದಣಿ ಕೇಂದ್ರದಲ್ಲೆ ಆಪರೇಟರ್ ನೈಜ ಸಮಯದಲ್ಲಿ ಸೆರೆಹಿಡಿಯುತ್ತಾರೆ.
➥ಇದರ ನಂತರ ಅಪ್‌ಡೇಟ್ ವಿನಂತಿ ಸಂಖ್ಯೆ (URN) ಒಳಗೊಂಡಿರುವ ಸ್ವೀಕೃತಿ ಸ್ಲಿಪ್ ಅನ್ನು ಉಲ್ಲೇಖಕ್ಕಾಗಿ ರಚಿಸಲಾಗುತ್ತದೆ. ಇದನ್ನು ನೀವು ನೋಂದಣಿ ಕೇಂದ್ರದ ಆಪರೇಟರ್‌ನಿಂದ ಮರೆಯದೆ ಪಡೆದುಕೊಳ್ಳಿ.
➥ಇದರ ನವೀಕರಣದ 72 ಘಂಟೆಗಳ ನಂತರ ನೀವು UIDAI ಅಧಿಕೃತ ವೆಬ್‌ಸೈಟ್ನಿಂದ ಆಧಾರ್ ಕಾರ್ಡ್‌ನ ಡಿಜಿಟಲ್ ನಕಲನ್ನು (ಇ-ಆಧಾರ್) ಡೌನ್‌ಲೋಡ್ ಮಾಡಬಹುದು. ಅಥವಾ ಅದೇ ನೋಂದಣಿ ಕೇಂದ್ರದ ಆಪರೇಟರ್‌ನಿಂದ ಪಡೆಯಬಹುದು.