ಆಧಾರ್ ಕಾರ್ಡ್‌ನ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಅತ್ಯಂತ ಸುಲಭವಾದ ಮಾರ್ಗವಿದೆ. ಆಧಾರ್ ಕಾರ್ಡ್‌ನ ಮಹತ್ವ ಎಲ್ಲರಿಗೂ ತಿಳಿದಿದೆ. ಇದರಲ್ಲಿ ನಮ್ಮ ಹೆಸರಿನ ಜೊತೆಗೆ ಬಯೋಮೆಟ್ರಿಕ್ ಡೇಟಾ, ಮೊಬೈಲ್ ಸಂಖ್ಯೆ, ಫೋಟೋ ಇತ್ಯಾದಿ ಇರುತ್ತವೆ. ಇಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಬಯಸಿದರೆ ಆ ವಿಧಾನ ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ. ಆದರೆ ಈ ಕೆಲಸವನ್ನು ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು.
ನಾವು ಅನೇಕ ಬಾರಿ ಹಲವಾರು ಕಾರಣದಿಂದಾಗಿ ನಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಾಗುತ್ತದೆ. ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ನಾವು ಆಧಾರ್ ಕಾರ್ಡ್‌ನಲ್ಲಿ ನಮ್ಮ ಮೊಬೈಲ್ ಸಂಖ್ಯೆಯನ್ನ ಬದಲಾಯಿಸಲು ಮೊದಲು UIDAI ಡೇಟಾಬೇಸ್‌ನಲ್ಲಿ ಅಪ್ಡೇಟ್ ಮಾಡಬೇಕು. ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಹೇಗೆ ಲಿಂಕ್ ಮಾಡುವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ:
ಹಂತ 1: ಮೊದಲು ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ.
ಹಂತ 2: ನಂತರ ಆಧಾರ್ ಅಪ್ಡೇಟ್/ತಿದ್ದುಪಡಿ ಫಾರ್ಮ್ ಅನ್ನು ಭರ್ತಿ ಮಾಡಿ.
ಹಂತ 3: ಅದರ ನಂತರ ಫಾರ್ಮ್ ಅನ್ನು ಆಧಾರ್ ಕಾರ್ಯನಿರ್ವಾಹಕರಿಗೆ ಸಲ್ಲಿಸಿ.
ಹಂತ 4: ಈ ಸೇವೆಗೆ ನೀವು 50 ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಹಂತ 5: ಅಪ್ಡೇಟ್ ರಿಕ್ವೆಸ್ಟ್ ನಂಬರ್ (URN) ಒಳಗೊಂಡಿರುವ ರಶೀದಿಯನ್ನು ನಿಮಗೆ ನೀಡಲಾಗುತ್ತದೆ. ನಿಮ್ಮ ಅಪ್ಡೇಟ್ ವಿನಂತಿಯ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಲು ನೀವು URN ಅನ್ನು ಬಳಸಬಹುದು.
ಹಂತ 6: ಇದರ ನಂತರ 30 ದಿನಗಳಲ್ಲಿ ನಿಮ್ಮ ಹೊಸ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಡೇಟಾಬೇಸ್ ಅನ್ನು ಅಪ್ಡೇಟ್ ಮಾಡಲಾಗುತ್ತದೆ.
ನಿಮ್ಮ ಆಧಾರ್ ಕಾರ್ಡ್‌ಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸೇರಿಸದಿದ್ದರೆ ಮತ್ತು ಬೇರೆಯವರ ಹೆಸರನ್ನು ಲಿಂಕ್ ಮಾಡಿದ್ದರೆ ಈಗ ಅದನ್ನು ನೀವು ಸುಲಭವಾಗಿ ಸರಿ ಪಡಿಸಿಕೊಳ್ಳಬಹುದು. ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಅನ್ನು ಹೇಗೆ ಲಿಂಕ್ ಮಾಡುವುದು ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ:
ಹಂತ 1: ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ.
ಹಂತ 2: ನಂತರ ಆಧಾರ್ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ.
ಹಂತ 3: ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಫಾರ್ಮ್‌ನಲ್ಲಿ ನಮೂದಿಸಿ.
ಹಂತ 4: ಆಧಾರ್ ಕಾರ್ಯನಿರ್ವಾಹಕರಿಗೆ ಫಾರ್ಮ್ ಅನ್ನು ಸಲ್ಲಿಸಿ.
ಹಂತ 5: ನಂತರ ನಿಮ್ಮ ಬಯೋಮೆಟ್ರಿಕ್ಸ್ ಅನ್ನು ನಮೂದಿಸಿ ಮತ್ತು ಪರಿಶೀಲನೆ ಮಾಡಿ. ಇದಕ್ಕೆ ಯಾವುದೇ ದಾಖಲೆಗಳ ಅಗತ್ಯವಿಲ್ಲ.
ಹಂತ 6: ಈ ಸೇವೆಗೆ ನೀವು 50 ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ.