Driving Licence News: ನಿಮ್ಮ ಡ್ರೈವಿಂಗ್ ಲೈಸೆನ್ಸ್ ಫೋಟೋನ ಅಪ್‌ಡೇಟ್ ಮಾಡುವುದು ಹೇಗೆ ಅಂತ ಹುಡುಕುತ್ತಿದ್ದೀರಾ? ಡ್ರೈವಿಂಗ್ ಲೈಸೆನ್ಸ್ ಒಂದು ಮಾನ್ಯವಾದ ಗುರುತಿನ ದಾಖಲೆಯಾಗಿದೆ. ಚಿತ್ರಮಂದಿರಗಳು, ಕ್ಲಬ್‌ಗಳು ಮತ್ತು ವಿಮಾನ ನಿಲ್ದಾಣಗಳಿಗೆ ಪ್ರವೇಶ ಪಡೆಯಲು ನೀವು ಇದನ್ನು ಬಳಸಬಹುದು. ಡ್ರೈವಿಂಗ್ ಲೈಸೆನ್ಸ್ ಸಹಜವಾಗಿ ಇದು ಭಾರತೀಯ ರಸ್ತೆಗಳಲ್ಲಿ ಪ್ರಯಾಣಿಸಲು ನಿಮಗೆ ಅನುಮತಿ ನೀಡುವ ಕಾನೂನು ದಾಖಲೆಯಾಗಿದೆ.
ಇದು 1988ರ ಮೋಟಾರು ವಾಹನಗಳ ಕಾಯ್ದೆ ಪ್ರಕಾರ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಅಪ್ಡೇಟ್ ಮಾಡಿಕೊಳ್ಳುವುದು ಬಹಳ ಮುಖ್ಯ. ನೀವು ಬೇರೆ ರಾಜ್ಯಕ್ಕೆ ಸ್ಥಳಾಂತರಗೊಂಡರೆ ಫೋಟೋ ಬದಲಾವಣೆಯನ್ನು ವಿನಂತಿಸುವ ಮೂಲಕ ಮತ್ತು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಫೋಟೋವನ್ನು ಅಪ್ಡೇಟ್ ಮಾಡುವುದರ ಜೊತೆಗೆ ನಿಮ್ಮ ಹೊಸ ಸ್ಥಳದ ಬದಲಾವಣೆಯಾಗಿದ್ಯಾ ಎಂದು ಖಚಿತಪಡಿಸಿಕೊಳ್ಳಿ.
1. ಆಧಾರ್ ಕಾರ್ಡ್, 2. ಪಾಸ್ಪೋರ್ಟ್ ಸೈಜ್ ಫೋಟೋ, 3. ಡ್ರೈವಿಂಗ್ ಲೈಸೆನ್ಸ್, 4. ಡ್ರೈವಿಂಗ್ ಲೈಸೆನ್ಸ್ ಮಾಹಿತಿ ಸರಿಯಾಗಿ ತುಂಬಿದ ಫಾರ್ಮ್
ಮೊದಲಿಗೆ ನೀವು https://parivahan.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.
ಡ್ರೈವಿಂಗ್ ಲೈಸೆನ್ಸ್‌ಗಳಿಗೆ ಸಂಬಂಧಿತ ಸೇವೆಗಳನ್ನು ಆರಿಸಿಕೊಳ್ಳಿ.
ರಾಜ್ಯವನ್ನು ಆಯ್ಕೆಮಾಡಿ DL ನಲ್ಲಿ ಸೇವೆಗಳನ್ನು ಆಯ್ಕೆಮಾಡಿ.
ನಿಮ್ಮ ಜನ್ಮದಿನಾಂಕ ಮತ್ತು ಲೈಸೆನ್ಸ್ ಸಂಖ್ಯೆಯನ್ನು ಟೈಪ್ ಮಾಡಿ.
ವಿಳಾಸವನ್ನು ಅಪ್ಡೇಟ್ ಮಾಡಲು ಬಯಸಿದರೆ ನೀವು ಬದಲಾಯಿಸಬಹುದು. ಅದಕ್ಕಾಗಿ ಗೆಟ್ ಡಿಟೈಲ್ಸ್ ಬಟನ್ ಅನ್ನು ಆಯ್ಕೆಮಾಡಿ.
ಈಗ ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ನೋಡಬಹುದು. ಇಲ್ಲಿ RTO ವಿವರಗಳನ್ನು ಟೈಪ್ ಮಾಡಿ.
ನಿಮ್ಮ ಡ್ರೈವಿಂಗ್ ಲೈಸೆನ್ಸ್ ಫೋಟೋವನ್ನು ಸುಲಭವಾಗಿ ಬದಲಾಯಿಸಬಹುದು.
ನಿಮ್ಮ ಫೋನ್ ನಂಬರ್, ಬ್ಲಡ್ ಗ್ರೂಪ್ ಮತ್ತು ವಿದ್ಯಾರ್ಹತೆಯನ್ನು ಟೈಪ್ ಮಾಡಿ
ನಿಮ್ಮ ಅರ್ಜಿಯನ್ನು ಸಲ್ಲಿಸಿ. ಒಂದು ಸ್ವೀಕೃತಿ ಪತ್ರವನ್ನು ನಿಮಗೆ ನೀಡಲಾಗುವುದು.
ಫೋಟೋ ಮತ್ತು ನಿಮ್ಮ ಸಹಿಯನ್ನು ಅಪ್‌ಲೋಡ್ ಮಾಡಿ. ರೂ 460 ಮತ್ತು ರೂ 45 ರ ಸೇವಾ ಶುಲ್ಕವನ್ನು ಪಾವತಿಸಬೇಕು.
ಆನ್‌ಲೈನ್ ನಲ್ಲಿ ಸಲ್ಲಿಸುವುದು ಮೊದಲ ಮತ್ತು ಅನುಕೂಲಕರ ವಿಧಾನವಾಗಿದೆ. ಅಲ್ಲದೆ ನೀವು ಸ್ಥಳೀಯ RTO ಗೆ ಭೇಟಿ ನೀಡುವುದು ಎರಡನೆಯದಾಗಿದೆ. ಇದನ್ನು ಪ್ರಾರಂಭಿಸಲು ಪರಿವಾಹನ್ ಅಧಿಕೃತ ವೆಬ್‌ಸೈಟ್‌ಗೆ ಹೋಗಿ. ಡ್ರೈವಿಂಗ್ ಲೈಸೆನ್ಸ್ ಸಂಬಂಧಿತ ಸೇವೆಗಳನ್ನು ಆಯ್ಕೆಮಾಡಿ. ರಾಜ್ಯವನ್ನು ಆರಿಸಿ. ನಿಮಗೆ ಬೇಕಾದ DL ಸೇವೆಗಳನ್ನು ಆಯ್ಕೆಮಾಡಿ. ನಿಮ್ಮ ಜನ್ಮದಿನಾಂಕ ಮತ್ತು ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯನ್ನು ಟೈಪ್ ಮಾಡಿ. ಗೆಟ್ ಡಿಟೈಲ್ಸ್ ಬಟನ್ ಆಯ್ಕೆಮಾಡಿ. ಇಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಫೋಟೋ ಕಾಣಬಹುದು. RTO ವಿವರಗಳನ್ನು ಟೈಪ್ ಮಾಡಿ. ನಿಮ್ಮ ಬಯೋಮೆಟ್ರಿಕ್ DL ಬದಲಾಯಿಸಿ. ನಿಮ್ಮ ಅರ್ಜಿಯನ್ನು ಕಳುಹಿಸಿ. ನಿಮಗೆ ಸ್ವೀಕೃತಿ ಪತ್ರವನ್ನು ನೀಡಲಾಗುವುದು.